ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ ಸ್ಪರ್ಧೆ; ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ವಿ.ನಾಯಕ್ ನಾಮಪತ್ರ ತಿರಸ್ಕತ

By Sathish Kumar KHFirst Published Apr 22, 2024, 7:49 PM IST
Highlights

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 8 ಮಂದಿ ಕಣದಲ್ಲಿದ್ದಾರೆ.  ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿದ್ದ ಮಾಜಿ ಸಂಸದ ಬಿ.ವಿ. ನಾಯಕ್ ನಾಮಪತ್ರವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.

ರಾಯಚೂರು (ಏ.22): ರಾಜ್ಯದಲ್ಲಿ 2ನೇ ಹಂತದಲ್ಲಿ ನಡೆಯುವ ಚುನಾವಣೆಯ ವ್ಯಾಪ್ತಿಗೆ ಬರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಲು ಸಲ್ಲಿಕೆ ಮಾಡಿದ್ದ ಉಮೇದುವಾರಿಕೆಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.

'ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 21 ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಸಲ್ಲಿಕೆ ಮಾಡಲಾಗಿತ್ತು. ಈ ನಾಮಪತ್ರಗಳಲ್ಲಿ 3 ನಾಮಪತ್ರಗಳು ರಿಜೆಕ್ಟ್ ಆಗಿದ್ದು, ನರಸಿಂಹ ನಾಯಕ ಮತ್ತು ದೇವಣ್ಣ ನಾಯಕ ತಮ್ಮ ಉಮೇದುವಾರಿಕೆಗಳನ್ನು ಏ.22ರ ಸೋಮವಾರ ವಾಪಸ್ ಪಡೆದುಕೊಂಡಿದ್ದಾರೆ. ಒಟ್ಟು ಲೋಕಸಭಾ ಕಣದಲ್ಲಿ 16 ನಾಮಪತ್ರಗಳು ಸ್ವೀಕೃತವಾಗಿದ್ದು, ಅಂತಿಮವಾಗಿ 8 ಅಭ್ಯರ್ಥಿಗಳು ಗೆಲುವಿಗಾಗಿ ಪೈಪೋಟಿ ಮಾಡಲಿದ್ದಾರೆ. ಇನ್ನು ಮೇ 7 ರಂದು ಮತದಾನ ನಡೆಯಲಿದ್ದು, ಜೂ.4ರಂದು ಫಲಿತಾಂಶ ಹೊರ ಬೀಳಲಿದೆ.

ರಾಯಚೂರಿನಲ್ಲಿ ಸಲ್ಲಿಕೆಯಾದ 21 ನಾಮಪತ್ರಗಳ ಪೈಕಿ ಕೆಲವೊಬ್ಬರು 2-3 ನಾಮಪತ್ರ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಎ ಭಗವಂತರಾಯ್ (ಬಿ.ವಿ. ನಾಯಕ್) ಅವರು ಸಲ್ಲಿಕೆ ಮಾಡಿದ್ದ ಒಂದು ನಾಮಪತ್ರವೂ ಕೂಡ ರಿಜೆಕ್ಟ್ ಮಾಡಲಾಗಿದೆ. ಭಾರತೀಯ ಜನ ಸಮಾಜ ಪಾರ್ಟಿಯ ಶಾಮರಾವ್ ಮೇದಾರ್ ಅವರ ಒಂದು ನಾಮಪತ್ರ ತಿರಸ್ಕೃತ ಆಗಿದ್ದು, ಇನ್ನೊಂದು ನಾಮಪತ್ರ ಊರ್ಜಿತವಾಗಿದೆ. ಜೊತೆಗೆ ಕಾಂಗ್ರೆಸ್‌ನಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರೂ ಬಿ.ಫಾರಂ ಕೊಡದ ಹಿನ್ನೆಲೆಯಲ್ಲಿ ಕೆ. ದೇವಣ್ಣ ನಾಯಕ್ ಅವರ ಮತ್ತೊಂದು ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ಶಿವಮೊಗ್ಗ ಲೋಕಸಭೆಯಲ್ಲಿ 23 ಅಭ್ಯರ್ಥಿಗಳ ಜಟಾಪಟಿ; ಸಂಸದ ರಾಘವೇಂದ್ರನಿಗೆ ಈಶ್ವರಪ್ಪ ಕೊಡ್ತಾರಾ ಪೈಪೋಟಿ!

ಬಿಜೆಪಿ ಅಭ್ಯರ್ಥಿಗೆ ನಿರಾಳ: ಬಿಜೆಪಿಯ ಮಾಜಿ ಸಂಸದ ಬಿ.ವಿ.ನಾಯಕ ಅವರು ತಮಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್‌ಗೂ ಮನವಿ ಮಾಡಿದ್ದರು. ಆದರೆ, ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಹತಾಶೆಗೊಂಡಿದ್ದ ಬಿ.ವಿ. ನಾಯಕ್ ಅವರು ಕಳೆದ ನಾಲ್ಕು ದಿನಗಳ ಹಿಂದೆ (ಏ.18ರಂದು) ಬಿಜೆಪಿಗೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ವಿ.ನಾಯಕ ಸಲ್ಲಿಕೆ ಮಾಡುವಾಗ 10 ಜನ ಸೂಚಕರು ಬದಲಾಗಿ ಒಬ್ಬರೇ ಸೂಚಕರು ತೋರಿಸಿದ್ದರು. ಈ ಹಿನ್ನೆಲೆಯಲಲ್ಲಿ ಬಿ.ವಿ.ನಾಯಕ ಅವರ ನಾಮಪತ್ರವನ್ನು ಚುನಾವಣಾ ಆಯೋಗವೇ ತಿರಸ್ಕಾರ ಮಾಡಿದೆ. 

ಪಕ್ಷಗಳು- ಅಭ್ಯರ್ಥಿಗಳು
ಬಿಜೆಪಿ - ರಾಜಾ ಅಮರೇಶ್ವರ ನಾಯಕ
ಕಾಂಗ್ರೆಸ್ - ಜಿ.ಕುಮಾರ್ ‌ನಾಯಕ
ಬಿಎಸ್ ಪಿ- ಎಸ್. ನರಸನಗೌಡ ನಾಯಕ
ಕೆಆರ್ ಎಸ್ - ಬಸವಪ್ರಭು 
ಎಸ್ ಯು ಸಿಐ ಪಾರ್ಟಿ- ರಾಮಲಿಂಗಪ್ಪ
ಭಾರತೀಯ ಜನ ಸಾಮ್ರಾಟ ಪಕ್ಷ- ಮೇದರ್ ಶಾಮರಾವ್
ಸ್ವತಂತ್ರ ಅಭ್ಯರ್ಥಿ - ಅಬರೀಶ್ 
ಸ್ವತಂತ್ರ ಅಭ್ಯರ್ಥಿ - ಯಲ್ಲಮ್ಮ ದಳಪತಿ

ಮೋದಿ ದೇಶದ ಸಂವಿಧಾನ ಬದಲಾಯಿಸಲೆಂದೇ 400 ಸೀಟ್ ಕೇಳ್ತಿದ್ದಾರೆ; ಮಲ್ಲಿಕಾರ್ಜುನ ಖರ್ಗೆ ಆರೋಪ

18ನೇ ಲೋಕಸಭೆಗೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ಮೊದಲ ಹಂತ ಏಪ್ರಿಲ್‌ 26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​), 2ನೇ ಹಂತದ ಚುನಾವಣೆ ಮೇ 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್) ರಂದು ನಡೆಯಲಿದೆ. ಫಲಿತಾಂಶ ಜೂನ್‌ 4ಕ್ಕೆ ಪ್ರಕಟವಾಗಲಿದೆ.

click me!