ಟೆಲ್ಟಾ ರ‍್ಯಾಂಕಿಂಗ್‌ನಲ್ಲಿ ರಾಯಚೂರು ಪ್ರಥಮ: ಡಿಸಿ​ ಚಂದ್ರ​ಶೇ​ಖರ ನಾಯಕ

By Kannadaprabha News  |  First Published Aug 13, 2023, 10:15 PM IST

ಕೇಂದ್ರ ಸರ್ಕಾರದ ನೀತಿ ಆಯೋಗದ ಮಹ​ತ್ವ​ಕಾಂಕ್ಷೆ ಜಿಲ್ಲೆಗಳಲ್ಲಿ ಅಗ್ರ, 10 ಕೋಟಿ ವಿಶೇಷ ಅನು​ದಾ​ನಕ್ಕೆ ಅರ್ಹತೆ, ಆದ್ಯತೆ ಮೇರೆಗೆ ಕ್ರಿಯಾ ಯೋಜ​ನೆ: ಜಿಲ್ಲಾ​ಧಿ​ಕಾರಿ ಎಲ್‌. ​ಚಂದ್ರ​ಶೇ​ಖರ ನಾಯಕ 


ರಾಯಚೂರು(ಆ.13): ಕೇಂದ್ರ ಸರ್ಕಾರದ ನೀತಿ ಆಯೋಗದ ಮಹ​ತ್ವ​ಕಾಂಕ್ಷೆ ಜಿಲ್ಲೆ​ ಟೆಲ್ಟಾ ರ‍್ಯಾಂಕಿಂಗ್‌ನಲ್ಲಿ ರಾಯಚೂರಿಗೆ ಮೊದಲ ಸ್ಥಾನ ಲಭಿ​ಸಿದ್ದು, ಇದೇ ಮೊದಲ ಬಾರಿಗೆ ಈ ಸಾಧ​ನೆ​ ಸಾಧ್ಯ​ವಾ​ಗಿದೆ. ಇದ​ರಾ​ನ್ವಯ ಜಿಲ್ಲೆಗೆ 10 ಕೋಟಿ ರು. ವಿಶೇಷ ಅನು​ದಾನ ಲಭ್ಯ​ವಾ​ಗ​ಲಿದ್ದು, ಅದನ್ನು ಆದ್ಯತೆ ಮೆರೆಗೆ ಬಳ​ಸಿ​ಕೊ​ಳ್ಳಲು ಕ್ರಿಯಾ ಯೋಜ​ನೆ​ಯನ್ನು ರೂಪಿ​ಸ​ಲಾ​ಗು​ವುದು ಎಂದು ಜಿಲ್ಲಾ​ಧಿ​ಕಾರಿ ಎಲ್‌. ​ಚಂದ್ರ​ಶೇ​ಖರ ನಾಯಕ ತಿಳಿ​ಸಿ​ದರು.

ಸ್ಥಳೀಯ ಜಿಲ್ಲಾ​ಧಿ​ಕಾರಿ ಕಚೇರಿ ಸಭಾಂಗ​ಣ​ದಲ್ಲಿ ಶನಿ​ವಾರ ನಡೆ​ಸಿದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾಡಿ, ಕಳೆ​ದ ಜೂನ್‌ ತಿಂಗಳಿನಲ್ಲಿ ನೀತಿ ಆಯೋಗದಿಂದ ಅಖಿಲ ಭಾರ ಮಹತ್ವಾಕಾಂಕ್ಷೆ ಜಿಲ್ಲಾ ಡೆಲ್ಟಾಶ್ರೇಯಾಂಕವನ್ನು ಬಿಡುಗಡೆಗೊಳಿಸಿದ್ದು, ಜಿಲ್ಲೆಯ ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ನೀರಾವರಿ ಸಂಪನ್ಮೂಲ, ಆರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಅಂಶಗಳಲ್ಲಿ ಪ್ರಗತಿಯನ್ನು ಸಾಧಿಸಿದ ಹಿನ್ನಲೆಯಲ್ಲಿ ನೀತಿ ಆಯೋಗದಿಂದ ದೇಶದಲ್ಲಿಯೇ ಜಿಲ್ಲೆಯೂ ಮೊದಲ ರಾರ‍ಯಂಕ್‌ ಪಡೆದುಕೊಂಡಿದೆ.

Latest Videos

undefined

ಕರ್ನಾಟಕದಲ್ಲಿ ಮತ್ತೊಂದು ಕಲುಷಿತ ನೀರು ದುರಂತ: 95 ಮಂದಿ ಅಸ್ವಸ್ಥ

ದೇಶದಾದ್ಯಂತ ಒಟ್ಟು 112 ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳಿದ್ದು, ಈ ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕೃಷಿ ಮತ್ತು ನೀರಾವರಿ ಸಂಪನ್ಮೂಲ, ಅರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿ ಸಾಧಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಅದರಂತೆ ರಾಯಚೂರು ಜಿಲ್ಲೆಯೂ ಸಹ ಮಹತ್ವಾಕಾಂಕ್ಷೆ ಜಿಲ್ಲೆಯಾಗಿದ್ದು, ಇಡೀ ದೇಶದಲ್ಲಿ ಜೂನ್‌ ತಿಂಗಳ ಶ್ರೇಯಾಂಕದಲ್ಲಿ ಜಿಲ್ಲೆಯು ಮೊದಲನೇ ರಾರ‍ಯಂಕ್‌ ಸಾಧಿಸಿದೆ. ಬಹುಮಾನವಾಗಿ ಜಿಲ್ಲೆಗೆ 10 ಕೋಟಿ ರು. ಗಳ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಬಿಡುಗಡೆಯಾದ ಅನುದಾನವನ್ನು ಮಹತ್ವಾಕಾಂಕ್ಷೆ ಜಿಲ್ಲೆಯ ಅಭಿವೃದ್ಧಿಗಾಗಿ ಸಂಬಂಧಪಟ್ಟಆಯಾ ಇಲಾಖೆಯ ಆದ್ಯತೆಯ ಮೇರೆಗೆ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ರವಾನಿಸಲಾಗುವುದು. ಮತ್ತು ಕೇಂದ್ರದಿಂದ ಯೋಜನೆಯ ಅನುಮೋದನೆ ದೊರೆತ ನಂತರ ಅನುದಾನ ಬಿಡುಗಡೆಗೊಳ್ಳುತ್ತದೆ ಎಂದು ತಿಳಿಸಿದರು.

ಜಿಲ್ಲೆಯು ಇಡೀ ದೇಶದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಯ ಶ್ರೇಯಾಂಕದಲ್ಲಿ ಪ್ರಥಮ ರಾರ‍ಯಂಕ್‌ ಗಳಿಸಿರುವುದರಲ್ಲಿ ಆಯಾ ಇಲಾಖೆಯ ಅಧಿಕಾರಿಗಳ ಶ್ರಮವಿದ್ದು, ಸಮಗ್ರ ಅಭಿವೃದ್ಧಿಯಲ್ಲಿ 2021ರ ಮಾಚ್‌ರ್‍ ತಿಂಗಳಿನಲ್ಲಿ ಜಿಲ್ಲೆಯೂ 111ನೇ ರಾರ‍ಯಕ್‌ನಲ್ಲಿತ್ತು. ಇದೀಗ 2023ರ ಸಮಗ್ರ ಅಭಿವೃದ್ಧಿಯಲ್ಲಿ ಜಿಲ್ಲೆಯೂ ಮೊದಲನೇ ರಾರ‍ಯಂಕ್‌ ಪಡೆದಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮ ವಹಿಸಿ ಇಲಾಖೆಯಲ್ಲಿರುವ ಕಾಮಗಾರಿಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕಾಗಿದೆ ಎಂದರು.

ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಲಾಭಾಂಶದ ಶೇ. 2ರಷ್ಟು ಸಾಮಾಜಿಕ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳಿಗೆ ಬಳಕೆ ಮಾಡಬೇಕಾಗಿದೆ. ಆರ್‌ಟಿಪಿಎಸ್‌ ಹಾಗೂ ವೈಟಿಪಿಎಸ್‌ ಲಾಭದಾಯಕ ಸಂಸ್ಥೆಗಳಲ್ಲ. ಹಸಿರು ನ್ಯಾಯಾಧೀಕರಣ ನಿಯಮದಂತೆ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಕಾರ್ಯ ಕೈಗೊಂಡಿವೆ ಎಂದು ವಿವರಿಸಿದರು.

ಮಳೆ ಹಾನಿಯಿಂದ ಮನೆಗಳಿಗೆ ಹಾನಿಯಾಗಿದ್ದು, ಸರ್ಕಾರ ಪರಿಹಾರ ನೀಡಲಿದೆ ಉಳಿದಂತೆ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ ಸರ್ವೆಕಾರ್ಯ ಮಾಡುತ್ತದೆ ಮುಂಗಾರು ಹಂಗಾಮು ಆಗಿರುವುದರಿಂದ ಹೆಚ್ಚಿನ ಬೆಳೆಹಾನಿಯಾಗಿಲ್ಲ. ಸರ್ವೆ ನಂತರ ಸೂಕ್ತ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಅಕ್ರಮ ಮರಳು ನಿಯಂತ್ರ​ಣಕ್ಕೆ ಕಠಿಣ ಕ್ರಮ

ಅಕ್ರಮ ಮರಳು ಗಣಿಗಾರಿಕೆಗೆ ನಿಯಂತ್ರ​ಣಕ್ಕೆ ಅಗತ್ಯವಾದ ಕಠಿ​ಣ ಕ್ರಮಗಳ​ನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಲ್‌. ಚಂದ್ರಶೇಖರ ನಾಯಕ ತಿಳಿ​ಸಿ​ದ​ರು.

ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದಗಣಿ ಮತ್ತು ಭೂವಿಜ್ಞಾನ ಇಲಾಖೆ ಸಿಬ್ಬಂದಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಕುರಿತು ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದವರ ಹೇಳಿಕೆ ಪಡೆಯಾಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳ ಪತ್ತೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ವಿವರಿಸಿದರು.

ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು

ಜಿಲ್ಲೆಯ ಲಿಂಗಸುಗೂರು ತಾಲೂಕು ಸೇರಿದಂತೆ ಇನ್ನಿತರೆಡೆ ನಡೆದ ಕಲುಷಿತ ನೀರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸ್ಥಳಿಯ ಆಡಳಿತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ನಿರ್ಲಕ್ಷ್ಯವಹಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಗರದ ಮಾವಿನಕೆರೆ ಮತ್ತು ಗೊಲ್ಲಕುಂಟ ಕೆರೆ ಸೇರಿದಂತೆ ಜಿಲ್ಲೆಯ ಕೆರೆಗಳ ಹದ್ದುಬಸ್ತು ಕಾರ್ಯ ತೆಗೆದುಕೊಳ್ಳಲಾಗುವುದು. ನಗರದ ಮಾವಿನ ಕರೆ ಮತ್ತು ಗೊಲ್ಲಕುಂಟ ಕೆರೆಗಳ ಸಂರಕ್ಷಣೆಗೆ ಜಿಲ್ಲಾಡಳಿತ ಕಟ್ಟಿಬದ್ಧವಾಗಿದ್ದು, ಕೆರೆಗಳ ಗಡಿಗುರುತಿಸಿ ಹದ್ದುಬಸ್ತು ಮಾಡಿ ಒತ್ತುವರಿದಾರರ ವಿರುದ್ಧ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ನಗ​ರದ ಕಸ ವಿಲೇವಾರಿ, ನೈರ್ಮಲ್ಯ ಕಾಪಾಡಲು ಹೆಚ್ಚು ಮುತು​ವರ್ಜಿ ವಹಿ​ಸ​ಲಾ​ಗು​ವುದು ಎಂದ​ರು.

click me!