ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಧ್ಯಾಹ್ನ 1 ಗಂಟೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಚಿವರು ಕಾರ್ಯಕ್ರಮಕ್ಕೆ ಇನ್ನೂ ಬಾರದ ಹಿನ್ನೆಲೆ ಬಿಸಲಿನ ಬೆಗೆಯಲ್ಲಿ ಕಾದು ಕಾದು ಫಲನಾನುವಿಗಳು ಸುಸ್ತಾದ ಘಟನೆ ನಡೆದಿದೆ.
ರಾಯಚೂರು (ಮಾ.14): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಧ್ಯಾಹ್ನ 1 ಗಂಟೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಚಿವರು ಕಾರ್ಯಕ್ರಮಕ್ಕೆ ಇನ್ನೂ ಬಾರದ ಹಿನ್ನೆಲೆ ಬಿಸಲಿನ ಬೆಗೆಯಲ್ಲಿ ಕಾದು ಕಾದು ಫಲನಾನುವಿಗಳು ಸುಸ್ತಾದ ಘಟನೆ ನಡೆದಿದೆ.
ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಮಾವೇಶ. ನಿನ್ನೆಯಿಂದಲೇ ಕಾರ್ಯಕ್ರಮದ ಸಿದ್ಧತೆ ಸಭೆಗಳು ನಡೆದಿದ್ದವು.. ಗ್ಯಾರಂಟಿ ಸಮಾವೇಶ ಕಾರ್ಯಕ್ರಮ ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಹೀಗಾಗಿ ಮುಂಜಾನೆಯೇ ಬಂದಿದ್ದ ಸಾವಿರಾರು ಜನರು, ಫಲಾನುಭವಿಗಳು. ಹನ್ನೊಂದು ಕಳೆದು ಮಧ್ಯಾಹ್ನ ಒಂದು ಗಂಟೆಯಾದ್ರೂ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಸುಳಿವಿಲ್ಲದೆ ಇತ್ತ ಕಾರ್ಯಕ್ರಮ ಶುರುವಾಗದೆ ಬೇಸಗೆ ಬಿಸಲಿಗೆ ಕಾದು ಕಾದು ಜನರು ಸುಸ್ತಾದರು.
undefined
ರಾಯಚೂರು: ರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ
2 ಗಂಟೆ ತಡವಾಗಿ ಬಂದ ಡಿಕೆ ಶಿವಕುಮಾರ!
ಕೊನೆಗೂ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಎರಡು ಗಂಟೆಗಳ ಕಾಲ ತಡವಾಗಿ ರಾಯಚೂರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್.
ರಾಯಚೂರಿನ ಕೃಷಿ ವಿವಿಯಲ್ಲಿ ಹೆಲಿಫ್ಯಾಡ್ ವ್ಯವಸ್ಥೆ ಮಾಡಲಾಗಿತ್ತು. ಡಿಕೆ ಶಿವಕುಮಾರ ಬರುತ್ತಿದ್ದ ತಡ ಮಾಡದೇ ತಕ್ಷಣವೇ ಸಮಾವೇಶಕ್ಕೆ ಹೋಗಲು ಮುಂದಾದರು. ಮನವಿ ಪತ್ರ ಸಲ್ಲಿಸಲು ಸುಮಾರು 3 ಗಂಟೆಗಳ ಕಾಲ ನಿಂತ ಸಾರ್ವಜನಿಕರು ಡಿಕೆ ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ನುಡಿದಂತೆ ನಡೆಯದ ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದದರು. ಜನರು ಘೋಷಣೆ ಕೂಗ್ತಿದ್ದಂತೆ ಜನರ ಬಳಿ ಬಂದು ಮನವಿ ಸ್ವೀಕರಿಸಿದರು.