*ಹುಬ್ಬಳ್ಳಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
* ಇನ್ನು ಮುಂದೆ ಹೃದರಾಬಾದ್‌ಗೆ ತೆರಳುವ ಕೆಲಸ ಇಲ್ಲ
* ಬ್ಯಾಕಿಂಗ್ ಮೋಸದ ಬಗ್ಗೆ ಎಚ್ಚರಿಕಕೆಯಿಂದ ಇರಿ
*ಧಾರವಾಡ- ಬೆಳಗಾವಿ ರೈಲ್ವೇ ಕಾಮಗಾರಿ ಆದಷ್ಟು ಬೇಗ ಆರಂಭ
ಹುಬ್ಬಳ್ಳಿ(ಮೇ 06) ಹುಬ್ಬಳ್ಳಿಯಲ್ಲಿ (Hubli) ವಿಧಿವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿದ್ದಾರೆ. ಹಲವಾರು ಕೇಸ್ ಗಳನ್ನ ಹೈದ್ರಾಬಾದ್ ಗೆ (Hyderabad) ತೆಗೆದುಕೊಂಡು ಹೋಗುವ ಕಾಲ ಇತ್ತು. ಆದರೆ ಇಂದು ಅದೆಲ್ಲವೂ ಬದಲಾಗಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಎಫ್ ಎಸ್ ಎಲ್ ಆರಂಭವಾಗಿದೆ ಎಂದು ತಿಳಿಸಿದರು.
ಅಪರಾಧ ಶೋಧನೆಯಲ್ಲಿ FSL ಮಹತ್ವದ ಘಟ್ಟ. ಕೋರ್ಟ್ ಗಳಲ್ಲಿ ಮಾನ್ಯತೆ ಬೇಕಾದ್ರೆ FSL ವರದಿ ಬೇಕು. ಕೇವಲ ಬೆಂಗಳೂರಿನಲ್ಲಿ ಈ ಕೇಂದ್ರ ಇತ್ತು. ವರದಿ ಬರಲು ಮೂರು ತಿಂಗಳು ಆಗುತ್ತಿದೆ.
ಬ್ಯಾಂಕಿಂಗ್ (Banking) ಮೋಸ ಬಹಳ ಆಗುತ್ತಿದೆ. ಜಾರ್ಖಂಡ್ ನ ಒಂದು ಹಳ್ಳಿ ಸೈಬರ್ ಕ್ರೈಂಗೆ (Cyber Crime) ಹೆಸರುವಾಸಿಯಾಗಿದೆ. ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ. DNA, Cyber, Mobile, audio, Video ಸೆಕ್ಷನ್ ಇರಲಿಲ್ಲ. ಅವೆಲ್ಲಾ ಇಲ್ಲಿ ಕಾರ್ಯನಿವರ್ಹಿಸುತ್ತೇವೆ. ನಾಕೋಟಿಕ್ ಸೆಕ್ಷನ್ ಕೂಡಾ,ಕೆಲವೇ ದಿನಗಳಲ್ಲಿ ಅದನ್ನ ಕೂಡಾ ಮಾಡುತ್ತೇವೆ. ಅತೀ ಹೆಚ್ಚು ಕ್ರೈಂಗಳನ್ನ ನಮ್ಮ ಪೊಲೀಸರು ಶೋಧಿಸುತ್ತಿದ್ದಾರೆ. ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು
Online Dating Fraud : ಆನ್ ಲೈನ್ ಮಾಯಾಂಗನೆ ವಿಡಿಯೋ ಚಾಟಿಂಗ್ ಮೋಹ, ಲಕ್ಷ ಲಕ್ಷ ಕಳಕೊಂಡ ಚಿಕ್ಕಮಗಳೂರು ಟೆಕ್ಕಿ!.
ಬಜೆಟ್ ಲ್ಲಿ ನೀಡಿದ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಮುಗಿಸುತ್ತೆವೆ. ಧಾರವಾಡ- ಬೆಳಗಾವಿ ರೈಲ್ವೇ ಕಾಮಗಾರಿ ಆದಷ್ಟು ಬೇಗ ಆರಂಭಿಸುತ್ತೆವೆ. ಜಯದೇವ ಸಂಸ್ಥೆಯನ್ನು ಹುಬ್ಬಳ್ಳಿಗೆ ತಂದಿದ್ದೇವೆ. ಇದು ಈ ಭಾಗದ ಜನರಿಗೆ ಒಳ್ಳೆಯ ಸೌಲಭ್ಯ ನೀಡುತ್ತೆ. ಯುವಕರಿಗೆ ಉದ್ಯೋಗ ನೀಡಲು ಎಫ್ ಎಂಸಿ ಕ್ಲಸ್ಟರ್ ಕೂಡಾ ಆದಷ್ಟು ಬೇಗ ಆರಂಭವಾಗುತ್ತೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಸೈಬರ್ ಅಪರಾಧ: ಸೈಬೈರ್ ಅಪರಾಧ ಪ್ರಕರಣಗಳು ಆಧುನಿಕ ಜಗತ್ತಿನ ಬಹುದೊಡ್ಡ ಸವಾಲು. ಒಂದೆಲ್ಲ ಒಂದು ರೀತಿಯಲ್ಲಿ ಬಲೆ ಬೀಳಿಸುವ ಯತ್ನಗಳು ನಡೆಯುತ್ತಲೇ ಇರುತ್ತವೆ. ನಿಮಗೆ ಲಾಟರಿ ಸಿಕ್ಕಿದೆ.. ನಿಮ್ಮ ಖಾತೆಗೆ ಬಹುಮಾನ ಬಂದಿದೆ.. ನಿಮ್ಮ ಖಾತೆ ಕೆವೈಸಿ ಅಪ್ ಡೇಡ್ ಮಾಡಬೇಕಿದೆ ಈ ರೀತಿ ನೂರಾರು ಸಂದೇಶಗಳು ಮೊಬೈಲ್ ಗೆ ಬರುತ್ತವೆ. ಈ ಲಿಂಕ್ ಓಪನ್ ಮಾಡಿ ಎಂದು ಸಂದೇಶ ಬರಬಹುದು .. ಕೊಂಚ ಎಚ್ಚರ ತಪ್ಪಿ ನೀವು ಅಪ್ ಡೇಟ್ ಮಾಡಲು ಮುಂದಾದರೆ ಹಣ ಕಳೆದುಕೊಳ್ಳುವುದು ನಿಶ್ಚಿತ .
ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ದಾಖಲಾಗುತ್ತಲೇ ಇವೆ. 50 ವರ್ಷದ ವ್ಯಕ್ತಿ ಗೋವಿಂದಪುರ ಪೊಲೀಸರಿಗೆ (Bengaluru Police) ದೂರು ನೀಡಿದ್ದರು. ಕಳೆದ ಎರಡು ವರ್ಷಗಳಿಂದ ಗೊತ್ತಿಲ್ಲದ ಸಂಖ್ಯೆಯಿಂದ ನಿರಂತರವಾಗಿ ಮೆಸೇಜ್ ಬರುತ್ತಲೇ ಇತ್ತು. ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಮೆಸೇಜ್ ಗಳ ಸ್ವೀಕಾರ ಆಗುತ್ತಲೇ ಇತ್ತು. ಪ್ರೇರೇಪಣೆಗೆ ಒಳಗಾದ ವ್ಯಕ್ತಿ ಮಾಯಾಂಗನೆ ಮೋಹಕ್ಕೆ ಸಿಲುಕಿದ್ದಾರ
ಕಳೆದ ಅಕ್ಟೋಬರ್ 8 ರಂದು ಮುಂಜಾನೆ 6.30ಕ್ಕೆ ಮೆಸೇಜ್ ಮಾಡುತ್ತಿದ್ದ ಮಾಯಾಂಗನೆ ಬೆಂಗಳೂರಿಗೆ ಬರುತ್ತಿರುವುದಾಗಿ ಮತ್ತು ಹೋಟೆಲ್ ನಲ್ಲಿ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾಳೆ. ಸುಮಾರು ಸಮಯದ ನಂತರ ವಾಟ್ಸ ಅಪ್ ನಲ್ಲಿ ಲೋಕೇಶನ್ ಸಹ ಶೇರ್ ಮಾಡಿದ್ದಾಳೆ. ಇದನ್ನು ನಂಬಿ ಅಲ್ಲಿಗೆ ಹೋದ ವ್ಯಕ್ತಿ ಜಾಲಕ್ಕೆ ಸಿಲುಕಿದ್ದಾನೆ.
ಆಕೆ ಕೊಟ್ಟ ಸಂದೇಶದ ಆಧಾರದಲ್ಲಿ ಹಣ ಕಳೆದುಕೊಂಡಾತ ರೂಂ ನಂಬರ್ 212 ಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಆಕೆಯ ಬದಲು ಮೂರು ಜನರನ್ನು ಕಂಡು ದಂಗಾಗಿದ್ದಾನೆ. ಯುವತಿ ಜತೆ ಇಬ್ಬರು ಪುರುಷರು ಇದ್ದು ನಾವು ಪೊಲೀಸರು ಈಕೆ ಡ್ರಗ್ ಪೆಡ್ಲರ್ ಆಗಿದ್ದು ನಿಮ್ಮನ್ನು ಕರೆಸಿಕೊಂಡಿದ್ದಾಳೆ ಎಂದು ಬ್ಲಾಕ್ ಮೇಲ್ ಶುರು ಮಾಡಿ ಹಣ ದೋಚಿದ್ದರು.
ಇದು ಕೇವಲ ಒಂದು ಪ್ರಕರಣ ಅಲ್ಲ ಫೇಸ್ ಬುಕ್ ಮೂಲಕ ಸಂದೇಶ ಕಳಿಸಿ ವಿಡಿಯೋ ಕಾಲ್ ಗೆ ಆಹ್ವಾನಿಸುವ ದೊಡ್ಡ ಜಾಲವೇ ಇದೆ. ನಂಬರ್ ಕಳುಹಿಸಿ ವಾಟ್ಸ್ ಆಪ್ ಮೂಲಕ ವಿಡಿಯೋ ಕಾಲ್ ಮಾಡುತ್ತಾರೆ. ಬೆತ್ತಲೆಯಾಗಿ ಕಾಣಿಸಿಕೊಳ್ಳುವವರು ವಿಡಿಯೋ ಕಾಲ್ ರೇಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಗೆ ಇಳಿಯುತ್ತಾರೆ.