ರಾಯಚೂರು: ಮೂರು ತಿಂಗಳ ಬಳಿಕ ಮಂತ್ರಾಲಯ ರಾಯರ ದರ್ಶನಕ್ಕೆ ಅವಕಾಶ

By Kannadaprabha NewsFirst Published Jun 29, 2020, 10:31 AM IST
Highlights

ಜು.2ರಿಂದ ಮಂತ್ರಾಲಯ ರಾಯರ ದರ್ಶನಕ್ಕೆ ಅವಕಾಶ| ಪ್ರತಿದಿನ ಬಳಗ್ಗೆ 8 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ 6 ಗಂಟೆಯವರೆಗೆ ಮಾತ್ರ ಭಕ್ತರು ದರ್ಶನ ಪಡೆಯಬಹುದು| ಪ್ರದಕ್ಷಿಣೆ, ಉರುಳು ಸೇವೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಮುದ್ರ ಪ್ರಸಾದ, ಶ್ರೀಗಳ ಪಾದಪೂಜೆಗೆ ಅವಕಾಶ ನೀಡಿಲ್ಲ|

ರಾಯಚೂರು(ಜೂ.29): ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜು.2ರಿಂದ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ 6 ಗಂಟೆಯವರೆಗೆ ಮಾತ್ರ ಭಕ್ತರು ರಾಯರ ದರ್ಶನ ಪಡೆಯಬಹುದಾಗಿದೆ. 

ಸೂರ್ಯಗ್ರಹಣ: ಮಂತ್ರಾಲಯದ ರಾಯರ ಮಠದಲ್ಲಿ ವಿಶೇಷ ಹೋಮ

ಸದ್ಯಕ್ಕೆ ರಾಯರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಪ್ರದಕ್ಷಿಣೆ, ಉರುಳು ಸೇವೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಮುದ್ರ ಪ್ರಸಾದ, ಶ್ರೀಗಳ ಪಾದಪೂಜೆಗೆ ಅವಕಾಶ ನೀಡಿಲ್ಲ. ಕೊರೋನಾದಿಂದಾಗಿ ಮಾ.20ರಂದು ಶ್ರೀಮಠ ದ್ವಾರವನ್ನು ಮುಚ್ಚಲಾಗಿತ್ತು. ಮೂರು ತಿಂಗಳ ನಂತರ ರಾಯರ ಸನ್ನಿಧಿ ಆರಂಭವಾಗುತ್ತಿದೆ.
 

click me!