ಶಿವಮೊಗ್ಗದಲ್ಲಿ ಪ್ರವಾಹದ ಸಂದರ್ಭ ಜನರಿಗೆ ನೆರವಾದ ಮೀನುಗಾರರಿಗೆ ತೆಪ್ಪಗಳನ್ನು ವಿತರಿಸಲಾಗಿದೆ. ಭೀಕರ ಮಳೆ ಹಾಗೂ ಪ್ರವಾಹ ಸಂದರ್ಭ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು, ಆಹಾರ ಸಾಮಾಗ್ರಿ ಕೊಂಡೊಯ್ಯಲು ನೆರವಾದ ಮೀನುಗಾರರಿಗೆ ಸ್ಮಾರ್ಟ್‌ಸಿಟಿ ಸಮಿತಿಯ ಅಧಿಕಾರಿಗಳು ಹಾಗೂ ದಾನಿಗಳು ಸೇರಿ ನೂತನ ತೆಪ್ಪಗಳನ್ನು ನೀಡಿದರು.
ಶಿವಮೊಗ್ಗ(ಸೆ.06): ಮಾನವೀಯತೆ ಮೆರೆದ ಮೀನುಗಾರರು ನಮ್ಮ ಸಮಾಜಕ್ಕೆ ಮಾದರಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಇತ್ತೀಚೆಗೆ ಹೆಚ್ಚಿನ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ತಮ್ಮ ತೆಪ್ಪಗಳನ್ನು ಬಳಸಿ ರಕ್ಷಣಾಕಾರ್ಯದಲ್ಲಿ ತೊಡಗಿಸಿಕೊಂಡು ಸಂತ್ರಸ್ತರನ್ನು ಸುರಕ್ಷಿತ ತಾಣಗಳಿಗೆ ತಲುಪಿಸಲು ಮೀನುಗಾರರು ಸಹಕರಿಸಿದ್ದರು.
ಶಿವಮೊಗ್ಗ: ಗಾಂಧಿ ಪಾರ್ಕ್‌ನಲ್ಲಿ ಹೆಣ್ಮಕ್ಳ 'ಎಣ್ಣೆ ಪಾರ್ಟಿ'
ಈ ಸಂದರ್ಭದಲ್ಲಿ ಕೆಲವು ತೆಪ್ಪಗಳಿಗೆ ಹಾನಿಯಾಗಿದ್ದು, ದಾನಿಗಳ ಸಹಾಯದಿಂದ ಮಹಾನಗರ ಪಾಲಿಕೆ ಆವರಣದಲ್ಲಿ ನೂತನ ತೆಪ್ಪಗಳನ್ನು ವಿತರಿಸಿ ಮಾತನಾಡಿ, ತಮ್ಮ ವೃತ್ತಿಯ ಜೀವವಾದ ತೆಪ್ಪಗಳಿಗುಂಟಾಗುವ ಹಾನಿಯ ಬಗ್ಗೆ ಚಿಂತಿಸದೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿದ ಕಾರ್ಯ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾದದ್ದು ಎಂದರು.
ಸ್ಮಾರ್ಟ್‌ಸಿಟಿ ಸಮಿತಿಯ ಅಧಿಕಾರಿಗಳು ಹಾಗೂ ದಾನಿಗಳು ಸೇರಿ ನೂತನ ತೆಪ್ಪಗಳನ್ನು ನೀಡುತ್ತಿರುವ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ದಾನಿಗಳನ್ನು ಅಭಿನಂದಿಸಿದರು.
48 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ : ಜಾಗೃತೆ
ಮಹಾನಗರಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ಮಾತನಾಡಿ, ಸಹಾಯ ಹಸ್ತ ನೀಡಿದ ಮೀನುಗಾರರ ಸಹಕಾರವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಸಹಕಾರದಿಂದ ನೂರಾರು ಜನರ ರಕ್ಷಣೆ ಸಾಧ್ಯವಾಗಿದೆ ಎಂದು ಮೀನುಗಾರರ ರಕ್ಷಣಾ ಕಾರ್ಯವನ್ನು ಶ್ಲಾಘಿಸಿದರು.
ಆನೆಗಳ ಸರಣಿ ಸಾವು: ಅಧ್ಯಯನಕ್ಕೆ ಸರ್ಕಾರದ ನಿಲುವು ಕೇಳಿದ ಹೈಕೋರ್ಟ್
ಸ್ಮಾರ್ಟ್‌ಸಿಟಿ ಸಮಿತಿಯ ಅಧಿಕಾರಿಗಳು ರು. 40 ಸಾವಿರ ಹಾಗೂ ಜಗದೀಶ್ ಮತ್ತು ಸ್ನೇಹಿತರ ತಂಡ ರು. 50 ಸಾವಿರ ಹಣ ಒದಗಿಸಿದ್ದು 30 ತೆಪ್ಪಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಮೇಯರ್ ಲತಾಗಣೇಶ್, ಉಪಮೇಯರ್ ಚೆನ್ನಬಸಪ್ಪ ಇತರರು ಪಾಲ್ಗೊಂಡಿದ್ದರು.