ಚಿಕ್ಕಮಗಳೂರಲ್ಲಿ ಮತ್ತೆ ಮಳೆ : ಭೂಮಿಯೊಳಗೆ ಭಾರೀ ಶಬ್ದ

By Kannadaprabha News  |  First Published Sep 6, 2019, 9:41 AM IST

ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್ .ಪುರ ತಾಲೂಕುಗಳಲ್ಲಿ  ಮಳೆ ಮುಂದುವರೆದಿದೆ. ಅಲ್ಲದೇ ಭೂಮಿಯ ಒಳಗಿನಿಂದ ಭಾರೀ ಶಬ್ದ ಕೇಳಿ ಬರುತ್ತಿದೆ. 


ಚಿಕ್ಕಮಗಳೂರು [ಸೆ.06]: ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್ .ಪುರ ತಾಲೂಕುಗಳಲ್ಲಿ  ಮಳೆ ಮುಂದುವರೆದಿದ್ದು ಹೇಮಾವತಿ, ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. 

ಕಳೆದ ಎರಡು  ದಿನಗಳಿಂದ ಮಳೆ ಮುಂದುವರೆದಿದ್ದರಿಂದ ನಾಟಿ ಮಾಡಿದ ಗದ್ದೆಗಳು ಜಲಾವೃತವಾಗಿವೆ. ಅಲೇಖಾನ್ ಹೊರಟ್ಟಿ, ದುರ್ಗದಹಳ್ಳಿ, ಬಾಳೂರು, ಜಾವಳಿ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಆಗಾಗ ಸುತ್ತಮುತ್ತಲಿನ ಬೆಟ್ಟ ಮತ್ತು ಭೂಮಿಯೊಳಗೆ ಗುಡುಗಿನ ಶಬ್ದ ಆಗುತ್ತಿರುವುದು ಕೆಲವರ ಗಮನಕ್ಕೆ ಬಂದಿದೆ ಎನ್ನಲಾಗುತ್ತಿದೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಇದರಿಂದ ಜನರು ಆತಂಕಕ್ಕೆ ಈಡಾ ಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ, ಜಲಾ ನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವಿನಲ್ಲಿ ಏರಿಕೆ ಕಾಣಿಸಿದೆ. 

click me!