ಸೇನೆ ಸೇರಿದ ರಫೇಲ್, ಬಿಸಿ ಬಿಸಿ ಜಿಲೇಬಿ ಹಂಚಿದ ಉಡುಪಿ

By Suvarna News  |  First Published Jul 30, 2020, 11:02 PM IST

ರಫೇಲ್ ಯುದ್ಧ ವಿಮಾನ ಆಗಮನಕ್ಕೆ ಸಂಭ್ರಮಾಚರಣೆ/ ಉಡುಪಿಯಲ್ಲಿ ಮನೆ ಮಾಡಿದ ಸಂಭ್ರಮ/ ಸ್ಥಳದಲ್ಲಿಯೇ ಬಿಸಿ ಬಿಸಿ ಜಿಲೇಬಿ/ ಸೈನ್ಯ ಸೇರಿದ ಅತ್ಯಾಧುನಿಕ ಅಸ್ತ್ರ


ಉಡುಪಿ(ಜು.30)  ದೇಶದ ಸೇನೆಗೆ ರಫೇಲ್ ಯುದ್ಧ ವಿಮಾನಗಳ ಸೇರ್ಪೆಡೆಯ ಹಿನ್ನೆಲೆ ಜಿಲ್ಲಾ ನಾಗರಿಕ ಸಮಿತಿಯು ಗುರುವಾರ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿತು. ನಗರದ ಮಾರುಥಿ ವೀಥಿಕಾದಲ್ಲಿ ಬೃಹತ್ ರಾಷ್ಟಧ್ವಜವನ್ನು ಪ್ರದರ್ಶಿಸುವ ಮೂಲಕ ದೇಶದ ಈ  ಸಾಧನೆಯ ಬಗ್ಗೆ ಹೆಮ್ಮೆ ಗೌರವ ವ್ಯಕ್ತಪಡಿಸಲಾಯಿತು.

ನಂತರ 'ಉಡುಪಿ ಸ್ವಿಟ್ಸ್' ಮಳಿಗೆಯವರು  ಸ್ಥಳದಲ್ಲಿಯೇ ಬಿಸಿಬಿಸಿ ಜಿಲೇಬಿಗಳನ್ನು ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದರು.

Tap to resize

Latest Videos

ರಫೇಲ್ ವಿಮಾನದ ವಿಶೇಷಗಳು ಏನು? ಶಕ್ತಿ ಅನಾವರಣ

ಕಾರ್ಯಕ್ರಮದ ನೇತೃತ್ವವನ್ನು ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ವಹಿಸಿದ್ದರು, ಸಮಿತಿಯ ಪದಾಧಿಕಾರಿಗಳಾದ ಕೆ.ಬಾಲಗಂಗಾಧರ ರಾವ್, ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ತಾರಾನಾಥ್ ಮೇಸ್ತ ಶಿರೂರು, ಮಹಮ್ಮದ್, ಸುಧಾಕರ ಶೆಟ್ಟಿ, ರಾಜೇಶ್ ಕಲ್ಮಾಡಿ ಹಾಗೂ ಕೋಟಕ್ ಮಹೇಂದ್ರ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅತ್ಯಾಧುನಿಕ ಯುದ್ಧ ವಿಮಾನ ಭಾರತೀಯ ಸೇನಾ ಬತ್ತಳಿಕೆ ಸೇರಿದೆ.  ರಫೇಲ್ ಬಗ್ಗೆ ಅದೆಷ್ಟೂ ವಾದ ವಿವಾದಗಳು ಇದ್ದರೂ ಭಾರತದ ಸೇನಾ ಶಕ್ತಿ ಡಬಲ್ ಆಗಿದೆ.

click me!