ಹಳೆ ದಾಖಲೆ ಮುರಿದ ಕೊರೋನಾ, ಒಂದೇ ದಿನ 6 ಸಾವಿರ, ಆಗಸ್ಟ್ ಎಚ್ಚರಿಕೆ!

By Suvarna NewsFirst Published Jul 30, 2020, 8:02 PM IST
Highlights

ನಿಲ್ಲದ ಕೊರೋನಾ ಆರ್ಭಟ/ ರಾಜ್ಯದಲ್ಲಿ ಒಂದೇ ದಿನ ಆರು ಸಾವಿರ ಸೋಂಕಿತರು/  ಬೆಂಗಳೂರಿನಲ್ಲಿ ಐವತ್ತು ಸಾವಿರ ಮೀರಿದ ಲೆಕ್ಕ/ ಇನ್ನೊಂದು ಕಡೆ ಲಾಕ್ ಡೌನ್ ನಿಯಮ ಸಡಿಲ ಮಾಡಿದ ಸರ್ಕಾರ/

ಬೆಂಗಳೂರು, (ಜು. 30) ಕರ್ನಾಟಕದಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಗುರುವಾರ ಹಳೆಯ ದಾಖಲೆಗಳನ್ನೆಲ್ಲ ಮುರಿದ ಕೊರೋನಾ ಆರು ಸಾವಿರ ದಾಟಿದೆ ರಾಜ್ಯದಲ್ಲಿ  ಗುರುವಾರ  6128 ಜನರಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 118632  ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇವತ್ತು 3793 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 46694 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 69700 ಸಕ್ರಿಯ ಪ್ರಕರಣಗಳಿದ್ದು 620 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಗುರುವಾರ 83 ಜನ ಮೃತಪಟ್ಟಿದ್ದು,  ಒಟ್ಟು ಸಾವಿನ ಸಂಖ್ಯೆ 2230 ಕ್ಕೇರಿದೆ.

ಕರ್ನಾಟಕ ಸರ್ಕಾರದಿಂದ ಅನ್ ಲಾಕ್ ಮಾರ್ಗಸೂಚಿ

ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53324ಕ್ಕೆ ಏರಿದೆ. 22 ಜನರು ಇಂದು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.

ಬುಧವಾರ ರಾಜ್ಯದಲ್ಲಿ ಒಟ್ಟು 20448 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಮೂಲಕ Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ ರಾಜ್ಯದಲ್ಲಿ 125091 ಕ್ಕೆ ಏರಿಕೆಯಾಗಿದೆ. ಇನ್ನುಳಿದಂತೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ 17407 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.

ಒಟ್ಟಾರೆಯಾಗಿ ಒಂದೇ ದಿನದಲ್ಲಿ 38095 ಸೋಂಕು ಪತ್ತೆ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 1313856 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.

ಜಿಲ್ಲಾವಾರ ಕೊರೋನಾ ಅಂಕಿ-ಅಂಶ

ಬೆಂಗಳೂರು ನಗರ 2233 , ಮೈಸೂರು 430 , ಬಳ್ಳಾರಿ 343, ಉಡುಪಿ 248,  ಬೆಂಗಳೂರು ಗ್ರಾಮಾಂತರ 224, ಕಲಬುರಗಿ 220, ಬೆಳಗಾವಿ 202 , ದಕ್ಷಿಣ ಕನ್ನಡ 198, ಧಾರವಾಡ 180, ರಾಯಚೂರು 166, ಶಿವಮೊಗ್ಗ 143, ಬಾಗಲಕೋಟೆ 126, ಚಿಕ್ಕಮಗಳೂರು 126, ವಿಜಯಪುರ 124, ಉತ್ತರ ಕನ್ನಡ 120 , ರಾಮನಗರ 106,  ತುಮಕೂರು 104, ಹಾಸನ 94, ಗದಗ 88, ಮಂಡ್ಯ 87, ದಾವಣಗೆರೆ 86, ಚಿಕ್ಕಬಳ್ಳಾಪುರ 82, ಕೊಪ್ಪಳ 78, ಬೀದರ್ 69, ಯಾದಗಿರಿ 58, ಹಾವೇರಿ 58, ಚಿತ್ರದುರ್ಗ47, ಕೋಲಾರ 32, ಚಾಮರಾಜನಗರ 32, ಕೊಡಗು 24  ಪ್ರಕರಣ ದಾಖಲಾಗಿದೆ.

 

click me!