ಕಾಂಗ್ರೆಸ್ ಸರ್ಕಾರದ ಇನ್ನೆರಡು ವಿಕೆಟ್ ಶೀಘ್ರದಲ್ಲೇ ಪತನ, ಭವಿಷ್ಯ ನುಡಿದ ಆರ್ ಅಶೋಕ್

Published : Sep 19, 2026, 07:14 PM IST
R Ashok

ಸಾರಾಂಶ

ನಾಗೇಂದ್ರ ತಲೆದಂಡದ ಬಳಿಕ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಇನ್ನೆರಡು ವಿಕೆಟ್ ಪತನವಾಗಲಿದೆ ಎಂದು ಆರ್ ಅಶೋಕ್ ಭವಿಷ್ಯ ನುಡಿದ್ದಾರೆ. ಹಾಗಾಗರೆ ಮುಂದಿನ 2 ವಿಕೆಟ್ ಯಾರು? ಅಶೋಕ್ ಹೇಳಿದ್ದೇನು?

ಬೆಂಗಳೂರು (ಸೆ.19) ಕಾಂಗ್ರೆಸ್ ಸರ್ಕಾರ ಬಡವರ ಹಣ ನುಂಗುವ ಸರ್ಕಾರವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಲಂಚಾವರ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರದಿಂದ ಇನ್ನೆರಡು ವಿಕೆಟ್ ಪತನಗೊಳ್ಳಲಿದೆ ಎಂದು ಆರ್ ಅಶೋಕ್ ಭವಿಷ್ಯ ನುಡಿದಿದ್ದಾರೆ. ಬರ ಪರಿಹಾರಕ್ಕೆ ಇವರ ಬಳಿ ಹಣವಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ.

ಸರ್ಕಾರದ ಬಳಿ ಹಣ ಇಲ್ಲ

ಬೆಳಗಾವಿಯ ಯಕ್ಸಂಬಾ ಪಟ್ಟಣದಲ್ಲಿ ವಿಪಕ್ಷ ನಾಯಕ ಆರ್.ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಬಡವರ ಹಣ ನುಂಗುವ ಸರ್ಕಾರವಾಗಿದೆ. ಆಸ್ಪತ್ರೆ ಹಿಡಿದು ಎಲ್ಲಾ ಕಡೆಯೂ ಲಂಚಾವತಾರ ನಡೆಯುತ್ತಿದೆ. ಡಿಕೆ ಶಿವಕುಮಾರ್ ಎಂದು ರಿಯಲ್ ಎಸ್ಟೇಟ್ ಹಾಗೂ ಹಣದ ಹಿಂದೆ ಇದ್ದಾರೆ. ಎಲ್ಲಾ ಕಡೆಯು ಕ್ಯಾಬಿನೆಟ್ ಮಾಡುತ್ತಾ ಓಡಾಡುತ್ತಿದ್ದಾರೆ. ಸರ್ಕಾರ ಪಾಪರ ಆಗಿದೆ ಇವರ ಬಳಿ ಹಣ ಇಲ್ಲಾ ಎಂದು ಆರ್ ಅಶೋಕ್ ಹೇಳಿದ್ದಾರೆ

ಬರಕ್ಕೆ ಪರಿಹಾರ ನೀಡಲು ಹಣ ಇಲ್ಲ

ಸಿದ್ದರಾಮಯ್ಯನವರನ್ನು ಓಡಿಸಿದ್ದಾರೆ. ಪಾಪ ಇವಾಗ ಸಿದ್ದರಾಮಯ್ಯ ಮನೆಯಲ್ಲಿ ನಾಟಿ ಕೋಳಿ ತಿಂದು ತೃಪ್ತಿ ಪಡುತ್ತಿದ್ದಾರೆ. ಡಿಕೆಶಿ ಆಡಳಿತ ಗುಂಡಾಗಿರಿ ಆಡಳಿತ ಆಗಿದೆ. ಬರಕ್ಕೆ ಇವರ ಬಳಿ ಹಣ ಇಲ್ಲ. ಆದರೆ ಎಲ್ಲೆಂದರಲ್ಲಿ ಹಣ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಹಣ ಮಾತ್ರ ಇಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ. ಬರ ವಿಚಾರದಲ್ಲಿ ಮೊದಲು ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಂದೇ ಮಾತರಂ ವಿವಾದ

ವಂದೇ ಮಾತರಂ ಗೀತೆಗೆ ಮೋಸ ಮಾಡುತ್ತಿದ್ದಾರೆ. ವಂದೇ ಮಾತರಂ ಎಂದಾಗ ಇವರ ಬಾಯಿ ಓಪನ್ ಆಗಲ್ಲ. ವಂದೇ ಮಾತರಂ ಪೂರ್ಣ ಹಾಡಿಲ್ಲಾ ಎಂದರೆ ವಿಧಾನಸೌಧಲ್ಲೆ ಗಲಾಟೆ ಮಾಡುತ್ತೇವೆ. ನಮ್ಮ ಎಲ್ಲಾ ಶಾಸಕರು ಪೂರ್ಣ ವಂದೇ ಮಾತರಂ ಹಾಡು ಹಾಡಿ ತೋರಿಸುತ್ತೇವೆ ಎಂದು ಆಶೋಕ್ ಹೇಳಿದ್ದಾರೆ.

ಹಣ ಬಿಡುಗಡೆ ಮಾಡದೆ ಕೇಂದ್ರ ನಿಯೋಗ ಬನ್ನಿ ಎಂದರೆ ನಾವು ಬರಲ್ಲ. ಇದೇ ವೇಳೆ ಮಾತನಾಡಿದ ಆರ್ ಅಶೋಕ್ ವಿದ್ಯಾರ್ಥಿಗಳಿಗೆ ಕಳಪೆ ಶೂ ವಿತರಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶೂಗಳನ್ನ ಬಿಡಿ ಇವರ ಚಪ್ಪಲಿ ಕೂಡ ಹರಿದು ಹೋಗುತ್ತಿದೆ. ಶೂಗಳ ಟೆಂಡರ್ ನಲ್ಲಿ ಕಮಿಷನ್ ಹೊಡೆದಿದ್ದಾರೆ. ಶೂಗಳನ್ನ ಮಕ್ಕಳು ಕಾಲಲ್ಲಿ ಹಾಕುವ ಹಾಗಿಲ್ಲಾ ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ಇದೆ. ಕಾಲಲ್ಲಿ ಹಾಕಿದ್ರೆ ಶೂಗಳು ಹರಿಯುತ್ತೆ ಎನ್ನುವ ಭಯ ಮಕ್ಕಳಿಗೆ ಇದೆ. ಅಂತಹ ಕ್ವಾಲಿಟಿ ಶೂಗಳ ಸರ್ಕಾರ ಕೊಟ್ಟಿದೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.

PREV
Read more Articles on
click me!

Recommended Stories

ಟಿ ನರಸೀಪುರ ಗಣಪ ಮೆರವಣಿಗೆ ಕಾಂಗ್ರೆಸ್ ಗರಂ , ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ದೂರು
ಬೆಂಗಳೂರಲ್ಲಿ ಮನೆ ಕಟ್ಟೋರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಚಿವ ಕೃಷ್ಣ ಬೈರೇಗೌಡ