ಗುರುತು ಮಾಡಿರುವ ಡೀಮ್‌್ಡ ಫಾರೆಸ್ಟ್‌ನಿಂದ ಕೈಬಿಟ್ಟಿರುವ ಪ್ರದೇಶದಲ್ಲಿ ಸಾಗುವಳಿ ಮಾಡುವವರಿಗೆ ಆ ಜಮೀನು ಬಿಟ್ಟು ಕೊಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚಿಕ್ಕಮಗಳೂರು (ಫೆ.5) : ಗುರುತು ಮಾಡಿರುವ ಡೀಮ್‌್ಡ ಫಾರೆಸ್ಟ್‌ನಿಂದ ಕೈಬಿಟ್ಟಿರುವ ಪ್ರದೇಶದಲ್ಲಿ ಸಾಗುವಳಿ ಮಾಡುವವರಿಗೆ ಆ ಜಮೀನು ಬಿಟ್ಟು ಕೊಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಡೀಮ್‌್ಡ ಫಾರೆಸ್ಟ್ ಇತ್ತು. ಇದನ್ನು 6 ಲಕ್ಷ ಹೆಕ್ಟೇರ್‌ಗೆ ಇಳಿಸಲಾಗಿದೆ. ಆ ಜಮೀನು ಉಳಿಮೆ ಮಾಡುತ್ತಿದ್ದರೆ ಅವರಿಗೆ ಬಿಟ್ಟು ಕೊಡಲು ಸರ್ಕಾರ ತೀರ್ಮಾನಿಸದೆ ಎಂದರು. 71 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ ಮೂಲಭೂತ ಸವಲತ್ತು ನೀಡಲಾಗಿದೆ. ಅಮಾಯಕರಿಗೆ ಸರ್ಕಾರಿ ಸವಲತ್ತು ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. ಜನಪ್ರತಿನಿಧಿಗಳು ಜನರಿಗೆ ನ್ಯಾಯ ಒದಗಿಸಬೇಕು. ದೀನ ದಲಿತರು, ಬಡವರು ಎಸ್ಸಿ/ಎಸ್ಟಿಗೆ ಸವಲತ್ತು ನೀಡಿದರೆ ಅದೇ ಪ್ರಜಾಪ್ರಭುತ್ವದಲ್ಲಿ ಕೊಡುವ ನ್ಯಾಯ ಎಂದರು.
ಚಿಕ್ಕಮಗಳೂರು: ರೋಡ್ ಶೋ ಮೂಲಕ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಚಿವ ಅಶೋಕ್, ಸಿ.ಟಿ.ರವಿ
ಅಂಗವಿಕಲರು, ವಿಧವಾ ವೇತನ, ಗರ್ಭೀಣಿ ಮಹಿಳೆಯರಿಗೆ ಸವಲತ್ತು ನೀಡಬೇಕು, ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶವಾಗಿದೆ ಎಂದರು.
ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿದರೆ ಮಾತ್ರ ಸರ್ಕಾರಗಳು ಜೀವಂತವಾಗಿರುತ್ತದೆ. ಇಡೀ ರಾಜ್ಯದಲ್ಲಿ 2770 ಗ್ರಾಮ ವಾಸ್ತವ್ಯಆಗಿವೆ. 4 ಲಕ್ಷ ಕುಟುಂಬಗಳಿಗೆ ಸವಲತ್ತುಗಳನ್ನು ನೀಡಲಾಗಿದೆ. ಕಂದಾಯ ಸಚಿವನಾಗಿ 16 ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಈ ಗ್ರಾಮದಲ್ಲಿ 5 ಸಾವಿರ ಜನರಿಗೆ ಸವಲತ್ತು ನೀಡಲಾಗುವುದು ಎಂದು ವವರಿಸಿದರು.
ಜನರಿಗೆ ಅಧಿಕಾರ ನೀಡುವ ಕೆಲಸ ಮಾಡುತ್ತಿದ್ದೇವೆ. ಜಮೀನಿನ ಖಾತೆ ಬದಲಾವಣೆ 7 ದಿನಗಳೊಳಗೆ ಮಾಡಬೇಕು ಎಂದು ಆದೇಶ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ ವಾಗಿದೆ. ಸರಕಾರಿ ಜಮೀನು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದರೆ ಅವರ ಮೇಲೆ ಕೇಸು ಹಾಕಬಾರದು, ಈ ಸಂಬಂಧ ಕಾನೂನು ಜಾರಿಗೆ ತರಲಾಗಿದೆ ಎಂದರು.
ಇನಾಂ ಜಮೀನು ಯಾರು ಉಳುಮೆ ಮಾಡುತ್ತಿದ್ದರೂ ಅವರಿಗೆ ಖಾತೆ ಮಾಡಿಕೊಡಲಾಗುವುದು. ಈ ರೀತಿಯ ಇನಾಂ ಜಮೀನು ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಎಕರೆಯಷ್ಟಿದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ತಂದುಕೊಡುವ ಕೆಲಸ ಆಗಿದೆ ಎಂದು ಹೇಳಿದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಜನಸ್ನೇಹಿ ಆಡಳಿತ ನೀಡುವುದು ಈ ಕಾರ್ಯಕ್ರಮದ ಸದುದ್ದೇಶ. ವಾಸ್ತವ್ಯ ಮಾಡುವ ಗ್ರಾಮಗಳಿಗೆ ಸಚಿವರು ಒಂದು ಕೋಟಿ ರು. ಅನುದಾನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 5 ಸಾವಿರ ಜನ ಫಲಾನುಭವಿಗಳಿಗೆ ಸವಲತ್ತು ವಿತರಿಸಲಿದ್ದಾರೆ ಎಂದು ಹೇಳಿದರು. ಸಬ್ ಕಾ ಸಾತ್, ಸಬ್‌ಕಾ ವಿಕಾಸ್ ಕೇಂದ್ರದ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ನೀಡುವ ಕೆಲಸ ಆಗಿತ್ತು. ಪ್ರಧಾನಮಂತ್ರಿ ಅವಾಜ್ ಯೋಜನೆ, ಫಸಲ್ ಭೀಮಾ ಯೋಜನೆ ಜಾರಿಗೆ ತರಲಾಗಿದೆ. 94 ಸಿಯ ಡಿ 1360 ಅರ್ಜಿಗಳು ಬಂದಿದ್ದು, ಈ ಪೈಕಿ 841 ಅರ್ಜಿಗಳು ವಿಲೇವಾರಿ ಮಾಡಲಾಗಿದೆ ಎಂದರು.
2018 ರಿಂದ 2023ರವರೆಗೆ ಹುಲಿಕೆರೆ ಪಂಚಾಯ್ತಿಗೆ 15 ಕೋಟಿ ರು.ನೀಡಲಾಗಿದೆ. ಐಯ್ಯನಕೆರೆಯಿಂದ ಇತರೆ ಕೆರೆಗಳನ್ನು ತುಂಬಿಸಲು 25 ಕೋಟಿ ರು. ನೀಡಲಾಗಿದೆ. ಮೆಡಿಕಲ್ ಆಸ್ಪತ್ರೆ, 350 ಕೋಟಿ ಚತುಷ್ಪಥÜಕ್ಕೆ ನೀಡಲಾಗಿದೆ. ಈ ಕಾರಣಕ್ಕಾಗಿ ನನ್ನನ್ನು ಜನರು ಕೋಟಿ ರವಿ ಎನ್ನುತ್ತಿದ್ದಾರೆ ಎಂದರು.ಜನರ ಪ್ರಿತಿಯನ್ನು ಲೂಟಿ ಹೊಡೆದಿದ್ದೇನೆ. ಅದಕ್ಕಾಗಿ ಲೂಟಿ ರವಿ ಎನ್ನುತ್ತಾರೆ. ಜಾತಿ, ಭೀತಿಯ ರಾಜಕಾರಣಕ್ಕೆ ಇಲ್ಲಿ ಜಾಗ ಇಲ್ಲ. ಅಭಿವೃದ್ಧಿ, ಪ್ರೀತಿಯ ರಾಜಕಾರಣ ಗೆಲ್ಲಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜಾರಿಗೆ ಬಂದ ನಂತರ ಈವರೆಗೆ ಜಿಲ್ಲೆಯ 111 ಗ್ರಾಮಗಳಿಗೆ ಭೇಟಿ ನೀಡಿ, 5699 ಅರ್ಜಿಗಳು ಸ್ವೀಕಾರ ಆಗಿದ್ದು, ಇವುಗಳಲ್ಲಿ 5378 ಅರ್ಜಿಗಳು ವಿಲೇವಾರಿ ಮಾಡಲಾಗಿದೆ ಎಂದರು.
ಶಿವಮೊಗ್ಗ: ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ₹150 ಕೋಟಿ ಅನುದಾನ: ಸಂಸದ ಬಿ.ವೈ.ರಾಘವೇಂದ್ರ
ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಹುಲಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಾಚಾರ್, ಉಪಾಧ್ಯಕ್ಷೆ ರೂಪಾ, ಡಿಎಫ್‌ಓ ಎನ್.ಇ. ಕ್ರಾಂತಿ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು. ತರೀಕೆರೆ ಉಪ ವಿಭಾಗಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರು ಸ್ವಾಗತಿಸಿದರು.