ಕ್ವಾರಂಟೈನ್‌ ವ್ಯಕ್ತಿಗಳಿಂದ ಆಕ್ರೋಶ: 'ನಮಗೆ ಟೈಮ್‌ ಟು ಟೈಮ್‌ ಊಟ ಕೊಡಿ'

By Kannadaprabha NewsFirst Published Apr 27, 2020, 9:21 AM IST
Highlights

ಸರಿಯಾದ ಸಮಯಕ್ಕೆ ಊಟ ಕೊಡಿ ಇಲ್ಲವಾದರೆ ನಮ್ಮ ಮನೆಯಿಂದ ಊಟ ತರಿಸಲು ಅವಕಾಶ ಮಾಡಿಕೊಡಿ| ಕ್ವಾರಂಟೈನ್‌ಲ್ಲಿರವವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ| ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದ ಘಟನೆ|

ಸವಣೂರು(ಏ.27): ನಮಗೆ ಸರಿಯಾದ ಸಮಯಕ್ಕೆ ಊಟ ಕೊಡಿ ಇಲ್ಲವಾದರೆ ನಮ್ಮ ಮನೆಯಿಂದ ಊಟ ತರಿಸಲು ಅವಕಾಶ ಮಾಡಿಕೊಡಿ ಎಂದು ಕ್ವಾರಂಟೈನ್‌ಲ್ಲಿರವವರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸವಣೂರು ಪಟ್ಟಣದ ಲಲಿತಾದೇವಿ ಗುರುಸಿದ್ಧಪ್ಪಾ ಸಿಂಧೂರ ಕಾಲೇಜಿನಲ್ಲಿ ಶನಿವಾರ ರಾತ್ರಿ ಉಡುಪಿಯಿಂದ ಕರೆತಂದ ಕ್ವಾರಂಟೈನಲ್ಲಿರುವರಿಗೆ ರಾತ್ರಿ ಸಮಯದಲ್ಲಿ ಸರಿಯಾದ ಊಟ ಕೊಡದೆ ಬೆಳಗಿನ ಉಪಹಾರವನ್ನು 11 ಗಂಟೆಗೆ ಹಾಗೂ ಮಧ್ಯಾಹ್ನದ ಊಟವನ್ನು 3.30 ಗಂಟೆಯಾದರು ಕೊಡದೆ ಕುಡಿಯುವ ನೀರು ಹಾಗೂ ಸ್ನಾನದ ವ್ಯೆವಸ್ಥೆಯು ಸಹ ಮಾಡದೆ ನಿರ್ಲಕ್ಷ ತೋರಿಸಿರುವುದನ್ನು ಕಂಡು ಭಾನುವಾರದಂದು ಕ್ವಾರಂಟೈನ್‌ಲ್ಲಿರುವವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ'

ಈ ವಿಷಯವಾಗಿ ತೆಗ್ಗೆಹಳ್ಳಿಯ ಗ್ರಾಮಲೆಕ್ಕಾಧಿಕಾರಿ ನಾಗರಾಜ ಹೊಸಮನಿ ಮಾತನಾಡಿ, ಇವರು ಸೋಂಕಿತರು ಎಂದು ಯಾರು ಅಡಿಗೆ ಮಾಡಲು ಮುಂದಾಗುತ್ತಿಲ್ಲ. ಹಾಗಾಗಿ ನಾವು ತೆಗ್ಗಿಹಳ್ಳಿ ಶಾಲೆಯಲ್ಲಿ ಅಡುಗೆ ಮಾಡಿಸಿರುವುದರಿಂದ ಸ್ವಲ್ಪ ಸಮಯ ವಿಳಂಬವಾಗಿದೆ ಎಂದರು.

ಕ್ವಾರಂಟೈನ್‌ಲ್ಲಿರುವವರ ಬಂದಿರುವ ವಿಷಯ ನಮಗೆ ಅಧಿಕಾರಿಗಳು ತಿಳಿಸಿರುವುದಿಲ್ಲ. ಹಾಗೂ ಭಾನುವಾರ 1.30 ಗಂಟೆಗೆಯ ನಂತರ ಬಂದ ಉಪವಿಭಾಗಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ ಅವರು ತಿಳಿಸಿದ ನಂತರ ಇವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಂಚಾಯಿತ ಅಬಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಗಣತಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ಆರೋಗ್ಯ ಇಲಾಖೆ. ತಾಲೂಕು ಪಂಚಾಯಿತಿ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
 

click me!