ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ. ಎಣಿಕೆ ಕೇಂದ್ರದ ಸಮೀಪ ಮಾತನಾಡಿದ ಅವರು ರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಗಿದೆ ಎಂದಿದ್ದಾರೆ.
ಹಾವೇರಿ(ಡಿ.09): ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ. ಎಣಿಕೆ ಕೇಂದ್ರದ ಸಮೀಪ ಮಾತನಾಡಿದ ಅವರು ರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಗಿದೆ ಎಂದಿದ್ದಾರೆ.
15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎಣಿಕೆ ಕೇಂದ್ರದ ಬಳಿ ಹಿರೇಕೆರೂರು ಕ್ಷೇತ್ರದ ವಿಜೇತ ಅಭ್ಯರ್ಥಿ ಬಿ.ಸಿ.ಪಾಟೀಲ ಮಾತನಾಡಿದ್ದಾರೆ.
undefined
ಉಪಚುನಾವಣೆಯಲ್ಲಿ ಜನರ ತೀರ್ಪನ್ನ ಗೌರವಿಸುತ್ತೇವೆ: ರಮೇಶ್ ಕುಮಾರ್
ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ. ಎರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಯಿತು. ಇನ್ನು ರಾಜ್ಯ ಮತ್ತು ದೇಶ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.
ಬಣಕಾರ ಮತ್ತು ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದಿದ್ದಾರೆ. ಹಣ, ಅಧಿಕಾರ ದುರುಪಯೋಗದ ಕುರಿತ ಬನ್ನಿಕೋಡ ಆರೋಪಕ್ಕೆ ಉತ್ತರಿಸಿದ ಬಿಸಿಪಿ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬರೀತಿ ಎಂದು ತಿರುಗೇಟು ನೀಡಿದ್ದಾರೆ.
ಮಂಗಳೂರು: 'ಕಳೆದ 4 ತಿಂಗಳಿಂದ ಸರ್ಕಾರಕ್ಕೆ ಜೀವವೇ ಇಲ್ಲ'..!