ಕೋಕೋ, ಅಡಕೆ ಬಳಿಕ ಈಗ ತಾಂಬೂಲ ಹೋಳಿಗೆ ಸರದಿ!

By Kannadaprabha NewsFirst Published Aug 5, 2021, 9:54 AM IST
Highlights
  • ಕೃಷಿ ಕ್ಷೇತ್ರದಲ್ಲಿ ಕೊಕೋ, ಅಡಕೆ ಬಳಿಕ ಈಗ ತಾಂಬೂಲ(ವೀಳ್ಯದೆಲೆ)ಹೋಳಿಗೆ ಆವಿಷ್ಕಾರಗೊಂಡಿದೆ.
  • ಕೊಕೋ ಹಾಗೂ ಅಡಕೆ ಹೋಳಿಗೆ ಸಂಶೋಧಿಸಿದ ಪುತ್ತೂರು ಗುರಿಮೂಲೆಯ ಪಾಕತಜ್ಞ
  • ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಮತ್ತೆ ಹೊಸ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ

 ಮಂಗಳೂರು (ಆ.05):  ಕೃಷಿ ಕ್ಷೇತ್ರದಲ್ಲಿ ಕೊಕೋ, ಅಡಕೆ ಬಳಿಕ ಈಗ ತಾಂಬೂಲ(ವೀಳ್ಯದೆಲೆ)ಹೋಳಿಗೆ ಆವಿಷ್ಕಾರಗೊಂಡಿದೆ. ಕೊಕೋ ಹಾಗೂ ಅಡಕೆ ಹೋಳಿಗೆ ಸಂಶೋಧಿಸಿದ ಪುತ್ತೂರು ಗುರಿಮೂಲೆಯ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಮತ್ತೆ ಹೊಸ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ. ವೀಳ್ಯದೆಲೆ ಉಪಯೋಗಿಸಿ ಸ್ವಾದಿಷ್ಟಹೋಳಿಗೆ(ಒಬ್ಬಟ್ಟು)ತಯಾರಿಸಿದ್ದಾರೆ.

ದೊಡ್ಡ ವೀಳ್ಯದೆಲೆಯನ್ನು ಬಳಸಿ ಈ ಸಿಹಿ ಹೋಳಿಗೆ ಸಿದ್ಧಪಡಿಸಲಾಗಿದೆ. 250 ಗ್ರಾಂನಷ್ಟುವೀಳ್ಯದೆಲೆಯನ್ನು(1 ಕವಳೆ-ಸುಮಾರು 25 ಎಲೆ)ಮಾತ್ರ ಬಳಸಿ 40 ಹೋಳಿಗೆ ಮಾಡಲಾಗಿದೆ. ಸದ್ಯಕ್ಕೆ ಒಂದು ಹೋಳಿಗೆಗೆ 15 ರು. ನಿಗದಿಪಡಿಸಲಾಗಿದೆ. ಅದಕ್ಕೆ ಅಗತ್ಯ ವಸ್ತುಗಳನ್ನು ಹಾಕಿ ಮಿಕ್ಸಿಯಲ್ಲಿ ಅರೆದು ಬಳಿಕ ಮೈದ ಹಿಟ್ಟಿನ ಕನಕ ಉಂಡೆಯಲ್ಲಿ ಸೇರಿಸಿ ಈ ಹೋಳಿಗೆ ಮಾಡಲಾಗಿದೆ. ಇದರ ರುಚಿ ಕೂಡ ತಾಂಬೂಲವನ್ನೇ ಹೋಲುತ್ತದೆ. ಕೇವಲ ವೀಳ್ಯದೆಲೆಯನ್ನು ಮಾತ್ರ ಬಳಸಿದ ಕಾರಣ ಇದು ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದು ಶ್ರೀಕೃಷ್ಣ ಶಾಸ್ತ್ರಿಯ ಅಭಿಪ್ರಾಯ

ಅಡಕೆಯಿಂದ ಹೋಳಿಗೆ ತಯಾರಿ : ಮಾರುಕಟ್ಟೆಯಲ್ಲಿ ಬೆಲೆ ಏರಿಕೆ.

ತಾಂಬೂಲಕ್ಕೆ ಸೇರಿಸುವ ಅಡಕೆ ಪುಡಿಯನ್ನು ಬಳಸಿ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ತಯಾರಿಸಿದ ಕಾಜು ಸುಪಾರಿ ಜನಜನಿತ. ಮಂಗಳೂರಿನ ಐಡಿಯಲ್‌ ಸಂಸ್ಥೆ ತಾಂಬೂಲ ಸ್ವಾದದ ಐಸ್‌ಕ್ರೀಂ ಈಗಾಗಲೇ ತಯಾರಿಸಿದೆ. ಈಗ ತಾಂಬೂಲದ ಹೋಳಿಗೆ ತಾಂಬೂಲ ಪ್ರಿಯರ ಮನ ತಣಿಸಲು ಸಜ್ಜಾಗಿದೆ. ಶಾಸ್ತ್ರಿ ಹೋಂ ಪ್ರಾಡಕ್ಟ್$್ಸ ಹೆಸರಿನಲ್ಲಿ ಮಾರುಕಟ್ಟೆಪ್ರವೇಶಿಸಲು ಸಜ್ಜಾಗಿದೆ.

click me!