ಶ್ರೀನಿವಾಸ ಪೂಜಾರಿ ಮೇಲೆ ಅವಹೇಳನಕಾರಿ ಪೋಸ್ಟ್ ಹಾಕಿದ್ದವರಿಗೆ ಶಿಕ್ಷೆ ಕೊಡಿ

Published : Jan 20, 2021, 09:30 PM IST
ಶ್ರೀನಿವಾಸ ಪೂಜಾರಿ ಮೇಲೆ ಅವಹೇಳನಕಾರಿ ಪೋಸ್ಟ್ ಹಾಕಿದ್ದವರಿಗೆ ಶಿಕ್ಷೆ ಕೊಡಿ

ಸಾರಾಂಶ

ಸಚಿವ ಕೋಟ ಬಗ್ಗೆ ಫೇಸ್ ಬುಕ್ಕಲ್ಲಿ ಅವಹೇಳನ - ಪೊಲೀಸರಿಗೆ ದೂರು/ ಆರೋಪಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ/ ಈ ರೀತಿಯ ಬರಹಗಳನ್ನು ಮುಂದೆ ಯಾರ ಬಗ್ಗೆಯೂ ಮಾಡಕೂಡದು

ಕೋಟ( ಜ. 20)   ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಮತ್ತು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ವಿರುದ್ಧ ಅವಹೇಳನಕಾರಿ ಬರಹವನ್ನು ಫೇಸ್‌ಬುಕ್ ಖಾತೆಯಲ್ಲಿ ಹರಿಬಿಟ್ಟ ಅನಿಲ್ ಕುಮಾರ್ ಶೆಟ್ಟಿ ಎನ್ನುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ ಕೋಟ ಶ್ರೀ ನಾರಾಯಣ ಗುರು ಸೇವಾ ಸಂಘ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದೆ.

ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಶಾಸಕಿ ಸೌಮ್ಯಾ ದರ್ಪ.. ಹೀಗೆಲ್ಲಾ ಮಾಡೋದಾ?...

ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯದಲ್ಲಿಯೇ ಸಭ್ಯ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ಅಂತಹವರ ಬಗ್ಗೆ ಇಲ್ಲಸಲ್ಲದ ಆರೋಪ, ಅವಹೇಳನ ಮಾಡುವವರ ವಿರುದ್ಧ ಸಮುದಾಯ ಅಥವಾ ಅವರ ಅಭಿಮಾನಿಗಳು ಸಹಿಸಿಕೊಂಡು ಕೂರುವುದಿಲ್ಲ. ಈ ರೀತಿಯ ಬರಹಗಳನ್ನು ಮುಂದೆ ಯಾರ ಬಗ್ಗೆಯೂ ಮಾಡಕೂಡದು. ಆ ರೀತಿಯ ಶಿಕ್ಷೆ ವಿಧಿಸಬೇಕು ಎಂದು ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ ಅವರು ಈ ಸಂದರ್ಭದಲ್ಲಿ ಠಾಣಾಧಿಕಾರಿ ಸಂತೋಷ್ ಬಿ.ಪಿ. ಅವರನ್ನು ಒತ್ತಾಯಿಸಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ, ಕಾರ್ಯದರ್ಶಿ ಮನೋಹರ್ ಪೂಜಾರಿ, ಯುವ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ, ಸದಸ್ಯ ಸಂತೋಷ್ ಪೂಜಾರಿ ತೆಕ್ಕಟ್ಟೆ ಮುಂತಾದವರು ಉಪಸ್ಥಿತರಿದ್ದರು. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC