ರಾಯಚೂರಲ್ಲಿ ಬಣ್ಣ ಎರಚಿ, ಪಟಾಕಿ ಸಿಡಿಸಿ ಉಗ್ರ ದಾಳಿ ಸಂಭ್ರಮಿಸಿದ ಯುವಕರು

Published : Feb 16, 2019, 02:02 PM ISTUpdated : Feb 16, 2019, 04:01 PM IST
ರಾಯಚೂರಲ್ಲಿ ಬಣ್ಣ ಎರಚಿ, ಪಟಾಕಿ ಸಿಡಿಸಿ ಉಗ್ರ ದಾಳಿ ಸಂಭ್ರಮಿಸಿದ ಯುವಕರು

ಸಾರಾಂಶ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭೀಕರ ಉಗ್ರ ದಾಳಿ ನಡೆದು ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ರಾಯಚೂರಿನಲ್ಲಿ ಯುವಕರ ಗುಂಪೊಂದು ಈ ಘಟನೆಯನ್ನು ಸಂಭ್ರಮಿಸಿದೆ. 

ರಾಯಚೂರು : ಪುಲ್ವಾಮದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾಗಿದ್ದು,ದೇಶವೇ ಈ ಕೃತ್ಯಕ್ಕೆ ಕಂಬನಿ ಮಿಡಿಯುತ್ತಿದೆ. ಆದರೆ  ಈ ಘಟನೆಯನ್ನು ಕೆಲ ಕಿಡಿಗೇಡಿಗಳು  ಕೇಕೆ ಹಾಕಿ ಸಂಭ್ರಮಿಸಿದ್ದಾರೆ. 

ರಾಯಚೂರಿನ ಮಸ್ಕಿ ತಾಲೂಕಿನ ತಲೆಖಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಫೆ. 15ರ ತಡರಾತ್ರಿ 15ಕ್ಕೂ ಹೆಚ್ಚು ಯುವಕರು ಹಸಿರು ಬಣ್ಣ ಎರಚಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

ಉಗ್ರರ ದಾಳಿಯನ್ನು ಯುವಕರ ಗುಂಪೊಂದು ಸಂಭ್ರಮಿಸಿದ ಬೆನ್ನಲ್ಲೇ  ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. 

ತಲೇಖಾನ್ ಗ್ರಾಮದ ನಾಲ್ಕು ಜನ  ಯುವಕರ ಮೇಲೆ  ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಖಾಜಾಸಾಬ್, ರಹೀಮಾನ್ ,ಹುಸೇನಸಾಬ್ ,ಭಾಷ ಸಾಬ್  ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. 

ಗ್ರಾಮದಲ್ಲಿ ಸಾರ್ವಜನಿಕರು ಸೇರಿ ಮಸೀದಿಯನ್ನು ಧ್ವಂಸಗೊಳಿಸಲು ಮುಂದಾದ ವೇಳೆ ಪೊಲೀಸರಿಂದ ಲಘು ಲಾಟಿ ಪ್ರಹಾರ ನಡೆದಿದ್ದು, ಇಂತಹ ದೇಶ ದ್ರೋಹಿಗಳನ್ನು ಬಂಧಿಸುವಂತೆ ಮಸೀದಿ ಮುಂದೆ ಬೆಂಕಿ ಹಚ್ವಿ ಆಕ್ರೊಶ ವ್ಯಕ್ತಪಡಿಸಲಾಗಿತ್ತು.

ಮಗ ಮಾಡಿದ್ದು ಸರಿಯಲ್ಲ: ಉಗ್ರನ ತಂದೆ ಹೇಳಿದ್ದು ಇದೊಂದೇ ಅಲ್ಲ!

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಸ್ಫೋಟಕ ತುಂಬಿದ ಕಾರನ್ನು ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಸಿ ಭೀಕರ ಸ್ಫೋಟ ಸಂಭವಿಸಿತ್ತು. ಇದರಿಂದ 44  ಯೊಧರು ಹುತಾತ್ಮರಾಗಿದ್ದರು. 

PREV
click me!

Recommended Stories

ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!