ಪಿಯು ವಿದ್ಯಾರ್ಥಿನಿ ಸಾವು: ಶವವನ್ನು ಹೊರತೆಗೆದು ಪರೀಕ್ಷೆ

Kannadaprabha News   | Asianet News
Published : Jan 22, 2020, 11:14 AM IST
ಪಿಯು ವಿದ್ಯಾರ್ಥಿನಿ ಸಾವು: ಶವವನ್ನು ಹೊರತೆಗೆದು ಪರೀಕ್ಷೆ

ಸಾರಾಂಶ

ಮೂರು ದಿನಗಳ ಹಿಂದೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಪಿಯುಸಿ ವಿದ್ಯಾರ್ಥಿನಿ ಮೃತದೇಹವನ್ನು ಹೊರ ತೆಗೆದಯಲಾಗಿದೆ. ಆಕೆ ಮೃತಪಟ್ಟ ನಂತರ ಯುವಕನೊಬ್ಬ ಕರೆ ಮಾಡಿ ಯುವತಿಯ ಪ್ರಿಯಕರ ಎಂದು ಹೇಳಿಕೊಂಡಿದ್ದಲ್ಲದೆ ಪೋಷಕರಿಗೆ ಧಮ್ಕಿ ಹಾಕಿದ್ದಾನೆ.

ಕೋಲಾರ(ಜ.22): ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ದ್ವಿತಿಯ ಪಿಯು ವಿದ್ಯಾರ್ಥಿನಿಯ ಸಾವಿನ ಪ್ರಕರಣ ಈಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು ಮಂಗಳವಾರ ಶವವನ್ನು ಸಮಾಧಿಯಿಂದ ಹೊರತೆಗೆದು ಅಧಿಕಾರಿಗಳ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಲಾಯಿತು.

ಗದ್ದೆಕಣ್ಣೂರು ಗ್ರಾಮದ ದೇವರಾಜ್‌ ಹಾಗೂ ಮುನಿಲಕ್ಷ್ಮಮ್ಮ ದಂಪತಿ ಪುತ್ರಿ 17 ವರ್ಷದ ಲಕ್ಷ್ಮೀ ಶನಿವಾರ ಮಧ್ಯಾಹ್ನ 3 ಗಂಟೆಗೆ ಕಾಲೇಜಿನಿಂದ ಮನೆಗೆ ಹಿಂತಿರುಗಿದ್ದಳು. ತೋಟಕ್ಕೆ ತೆರಳಿದ್ದ ಮನೆಯವರು ಹಿಂತಿರುಗಿದಾಗ ಮಗಳನ್ನು ಕಾಣದೆ ಹುಡುಕಾಟ ನಡೆಸಿದ್ದರು. ಆಗ ಮನೆಯ ಮುಂದೆ ಇದ್ದ ಸಂಪ್‌ನಲ್ಲಿ ಲಕ್ಷ್ಮಿಯ ಶವ ಪತ್ತೆಯಾಗಿತ್ತು. ಎಲ್ಲೋ ಆಯ ತಪ್ಪಿ ಸಂಪ್‌ಗೆ ಬಿದ್ದಿರಬಹುದು ಎಂದು ಅಂದು ಸಂಜೆಯೇ ಗ್ರಾಮಸ್ಥರ ಸಮ್ಮುಖದಲ್ಲಿ ಶವ ಸಂಸ್ಕಾರ ಮಾಡಲಾಗಿತ್ತು.

ಮರೆತುಬಿಟ್ಟ ಬ್ಯಾಗ್ ಪಡೆಯಲು ಹೋಗಿ ಸಿಕ್ಕಿ ಬಿದ್ದ ಕೊಲೆಗಾರರು..!

ಆದರೆ ಭಾನುವಾರ ಬಾಲಕಿಯ ಪ್ರಿಯಕರ ಎಂದು ಪೋಷಕರಿಗೆ ಫೋನ್‌ ಮಾಡಿರುವ ಅಭಿ ಎಂಬ ಯುವಕ, ನಾನು ಪ್ರೀತಿಸುತ್ತಿದ್ದ ಹುಡುಗಿಗೆ ಏನಾಯ್ತು ಎಂದು ಪೋಷಕರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿ ಪೋನ್‌ ಕಟ್‌ ಮಾಡಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರು ಯಾರೋ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್ ತರಿಸಿಕೊಂಡಿದ್ದ, ಹೋಟೆಲ್‌ನಲ್ಲೇ ತಯಾರಿಸಿದ್ನಾ ಬಾಂಬ್..?

ಈ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರು ತಹಸೀಲ್ದಾರ್‌ ಶೋಭಿತಾ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಇದರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು