ಮರೆತುಬಿಟ್ಟ ಬ್ಯಾಗ್ ಪಡೆಯಲು ಹೋಗಿ ಸಿಕ್ಕಿ ಬಿದ್ದ ಕೊಲೆಗಾರರು..!

Kannadaprabha News   | Asianet News
Published : Jan 22, 2020, 10:47 AM IST
ಮರೆತುಬಿಟ್ಟ ಬ್ಯಾಗ್ ಪಡೆಯಲು ಹೋಗಿ ಸಿಕ್ಕಿ ಬಿದ್ದ ಕೊಲೆಗಾರರು..!

ಸಾರಾಂಶ

ಪಿಸ್ತೂಲ್, ಮಾರಕಾಯುಧ ತುಂಬಿದ್ದ ಬ್ಯಾಗ್‌ನ್ನು ತುಂಬಿ ಹೋಗುತ್ತಿದ್ದ ಇಬ್ಬರು ಆರೋಪಿಗಳು ಮಂಡ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ. ರಾತ್ರಿ ಕೊಲೆ ಮಾಡಿ ಬೆಳಗ್ಗೆ ತಪ್ಪಿಸಿಕೊಳ್ಳುವಾಗ ಬ್ಯಾಗ್ ಮರೆತಿದ್ದಾರೆ. ಮರೆತ ಬ್ಯಾಗ್ ಪಡೆಯಲು ಬಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಂಡ್ಯ(ಜ.22): ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ನಾಡ ಪಿಸ್ತೂಲು (ರಿವಾಲ್ವರ್) ಇರಿಸಿದ್ದ ಮತ್ತು ಮಾರಕಾಸ್ತ್ರ ಹೊಂದಿದ್ದ ಬ್ಯಾಗ್‌ನ್ನು ಸಾರಿಗೆ ಬಸ್‌ನಲ್ಲಿ ಮರೆತು ಹೋಗಿದ್ದ ಉತ್ತರ ಭಾರತ ಮೂಲದ ಇಬ್ಬರು ಸುಪಾರಿ ಕೊಲೆಗಾರರು ಚನ್ನರಾಯಪಟ್ಟಣ ನಗರ ಪೊಲೀಸರ ಕೈಗೆ ಮಂಗಳವಾರ ಬೆಳಗ್ಗೆ ಸಿಕ್ಕಿಬಿದ್ದಿದ್ದಾರೆ.

ರಾಜಸ್ಥಾನದ ಜೋದ್‌ಪುರ್ ಗ್ರಾಮದ ಕಿಶನ್ (22) ಮತ್ತು ಮನೀಶ್(23) ಸಿಕ್ಕಿಬಿದ್ದಿರುವ ಆರೋಪಿಗಳು. ಆರೋಪಿಗಳಿಂದ ಒಂದು ನಾಡಪಿಸ್ತೂಲು, ಚಾಕು, ಕಾರದಪುಡಿ ಪ್ಯಾಕೇಟ್, ಎರಡು ಮೊಬೈಲ್ ಹಾಗೂ ಹತ್ಯೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ:

ಮಂಡ್ಯ ಪಟ್ಟಣದ ವಿದ್ಯಾನಗರ ಎರಡನೇ ಕ್ರಾಸ್ ನಿವಾಸಿ ರಾಜಸ್ಥಾನ ಮೂಲದ ಬುಂಡಾರಾಮ್ ಎಂಬ ವ್ಯಕ್ತಿಯನ್ನು ಸೋಮವಾರ ರಾತ್ರಿ ಕೊಲೆ ಮಾಡಿದ್ದ ಆರೋಪಿಗಳು ಬೆಂಗಳೂರಿ ನಿಂದ ಮಂಗಳವಾರ ಮುಂಜಾನೆ ಕುಣಿಗಲ್ ಕಡೆಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುವ ವೇಳೆ, ಮಾರಕಾಸ್ತ್ರ ಇಟ್ಟಿದ್ದ ಬ್ಯಾಗ್‌ನ್ನು ಮರೆತು ಕುಣಿಗಲ್‌ನಲ್ಲಿ ಇಳಿದಿ ದ್ದಾರೆ. ಸ್ವಲ್ಪ ಸಮಯದ ನಂತರ ನೆನಾ ಪದ ಬ್ಯಾಗ್‌ನ್ನು ಹುಡುಕಿಕೊಂಡು ಬಸ್ ನಿಲ್ದಾಣಕ್ಕೆ ತೆರಳಿ ಟಿಸಿ ಅವರನ್ನು ವಿಚಾರಿಸಲಾಗಿ ಟಿಸಿಯವರು ಬಸ್ ಚನ್ನರಾಯಪಟ್ಟಣದ ಕಡೆ ಹೋಗಿದ್ದಾಗಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್ ತರಿಸಿಕೊಂಡಿದ್ದ, ಹೋಟೆಲ್‌ನಲ್ಲೇ ತಯಾರಿಸಿದ್ನಾ ಬಾಂಬ್..?

ಆರೋಪಿಗಳು ಚನ್ನರಾಯಪಟ್ಟಣ ಬಸ್ ನಿಲ್ದಾ ಣದ ಟಿಸಿಯವರ ದೂರವಾಣಿ ಸಂಖ್ಯೆ ಪಡೆದು ಅವರಿಗೆ ಕರೆ ಮಾಡಿ ಬಸ್‌ನಲ್ಲಿ ನಮ್ಮ ಬ್ಯಾಗ್ ಬಿಟ್ಟು ಇಳಿದಿದ್ದೇವೆ. ನಾವುಗಳು ಹಿಂಬದಿ ಬಸ್ ನಲ್ಲಿ ಬರು ತ್ತಿದ್ದು, ಬ್ಯಾಗ್‌ನ್ನು ಕಂಡಕ್ಟರ್‌ನಿಂದ ಪಡೆದು ತಮ್ಮ ಬಳಿ ಇರಿಸಿಕೊಂಡಿರುವಂತೆ ಹಿಂದಿ ಭಾಷೆಯಲ್ಲಿ ಕೇಳಿಕೊಂಡಿದ್ದಾರೆ. ಚನ್ನರಾಯಪಟ್ಟಣದ ಟಿಸಿಯವರು ಆರೋಪಿಗಳ ಬ್ಯಾಗ್‌ನ್ನು ಪಡೆದು ಇರಿಸಿಕೊಂಡಿದ್ದಾರೆ. ಬ್ಯಾಗ್ ಪಡೆಯುವ ವೇಳೆ ತುಂಬಾ ಭಾರವಿದ್ದದರಿಂದ ಮತ್ತು ಆರೋಪಿಗಳು ಹಿಂದಿಯಲ್ಲಿ ಮಾತನಾಡಿದ್ದು ಸಂಶಯಗೊಂಡು ಬ್ಯಾಗ್ ತೆರೆಯಲಾಗಿ ಪಿಸ್ತೂಲ್ ಮತ್ತು ಚಾಕುಗಳು ಕಂಡುಬಂದಿವೆ.

ಆಗ ಟಿಸಿ ಪೊಲೀಸ್‌ರ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತುಕೊಂಡ ಪಟ್ಟಣ ಪೊಲೀಸರು ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ಮಫ್ತಿಯಲ್ಲಿ ಬಸ್ ನಿಲ್ದಾಣದಲ್ಲಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಬೆಳಗ್ಗೆ ೬ರ ಸುಮಾರಿಗೆ ಆರೋಪಿಗಳು ಬ್ಯಾಗ್ ವಿಚಾರಿಸಿಕೊಂಡು ಡಿಪೋ ಒಳಗೆ ಹೋಗಿದ್ದಾರೆ. ಇದನ್ನು ಗಮನಿಸುತ್ತಿದ್ದ ಪೊಲೀದರು ಆರೋಪಿಗಳನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ. ಅವರ ವಿಚಾರಣೆಗೊಳಪಡಿಸಿದಾಗ ಮಂಡ್ಯದಲ್ಲಿ ಕೊಲೆ ಮಾಡಿ ಕುಣಿಗಲ್‌ನಲ್ಲಿ ಹಣ ಪಡೆಯುವ ಸಲುವಾಗಿ ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹೊಳೆನರಸೀಪುರ ಡಿವೈಎಸ್‌ಪಿ ಲಕ್ಷ್ಮೇಗೌಡ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ನಗರ ಪೋಲಿಸ್ ಠಾಣೆಯ ಪಿಎಸ್‌ಐ ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ವರ್ಗವನ್ನು ಎಸ್ಪಿ ರಾಮ್ ನಿವಾಸ್ ಸೆಪಟ್ ಶ್ಲಾಘಿಸಿದ್ದಾರೆ.

ಮಂಡ್ಯ: ಮಧ್ಯರಾತ್ರಿ ಮಾರ್ವಾಡಿಯ ಕತ್ತು ಸೀಳಿ ಹತ್ಯೆ

ಕೊಲೆಗೆ ಸಂಚು ಕುಣಿಗಲ್ ವರ್ತಕ ಸುರೇಶ್ ಹಾಗೂ ಮಂ ಡ್ಯದ ಬುಂಡಾರಾವ್ ಇಬ್ಬರೂ ಮೂಲತಃ ರಾಜಸ್ಥಾನದವರು. ಹಲವು ವರ್ಷಗಳಿಂದ ಪರಿಚತರಾಗಿದ್ದರು. ಈ ನಡುವೆ ಸುರೇಶ್‌ನ ಪತ್ನಿ ಆತನನ್ನು ಬಿಟ್ಟು ಹೋಗಿದ್ದು, ಆತ ತನ್ನ ಸ್ನೇಹಿತ ಬುಂಡಾರಾಮ್ ಎಂಬಾತನ ಪತ್ನಿ ಯೊಂದಿಗೆ ಸಂಬಂಧ ಬೆಳೆಸಿದ್ದನೆನ್ನಲಾಗಿದೆ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬುಂಡಾ ರಾಮ್‌ನನ್ನು ಮುಗಿಸಿದರೆ ನಮ್ಮ ದಾರಿ ಸುಲ ಭವಾಗಲಿದೆ ಎಂಬ ಉದ್ದೇಶದಿಂದ ರಾಜಸ್ಥಾನ ದಿಂದ ಕಿಶನ್ ಹಾಗೂ ಮನೀಶ್ ಎಂಬವರಿಗೆ ಸುಪಾರಿ ಕೊಟ್ಟು ಕರೆಸಿದ್ದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ