ರಸ್ತೆಪಕ್ಕದಲ್ಲಿ ಇದ್ದ ನವಜಾತ ಶಿಶುವಿನ ಅಳು ಕೇಳಿ ಓಡೋಡಿ ಬಂದು ರಕ್ಷಿಸಿದ ಸಾರ್ವಜನಿಕರು

By Suvarna News  |  First Published May 14, 2022, 7:18 PM IST

 * ಜನಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನ ರಸ್ತೆಗೆ ಎಸೆದ ಹೋದ ಮಹಾತಾಯಿ‌, 
* ಮಗುವಿನ ಚೀರಾಟ ಕೇಳಿಸಿಕೊಂಡ ಸ್ಥಳೀಯರಿಂದ ರಕ್ಷಣೆ
* ಮಗುವನ್ನ ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಪೊಲೀಸರ ಬಳಿ‌ ಗೊಗರೆದ ಮಹಿಳೆ


ವರದಿ : ಟಿ.ಮಂಜುನಾಥ, ಹೆಬ್ಬಗೋಡಿ, ಬೆಂಗಳೂರು

ಬೆಂಗಳೂರು, (ಮೇ.14) : ಪ್ರಪಂಚಕ್ಕೆ ಬಂದು ಕೆಲ ಕ್ಷಣಗಳು ಕೂಡ ಕಳೆದಿರಲಿಲ್ಲ ಆಗಷ್ಟೇ ಧರೆಗಿಳಿದಿದ್ದ ಹಸುಗೂಸು ರಕ್ತಸಿಕ್ತವಾಗಿದ್ದ ಪುಟ್ಟ ಕಂದಮ್ಮನಿಗೆ ಅರೆಬರೆ ಬಟ್ಟೆ ಸುತ್ತಿ ರಸ್ತೆ ಬದಿಯಲ್ಲೀ ಎಸೆದು ಹೋಗಿದ್ದ ಅಮಾನವೀಯ ಘಟ‌ನೆ ಬೆಂಗಳೂರಿನಲ್ಲಿ ನಡೆದಿದೆ.

ಆಗ ತಾನೇ ಜನಸಿದ ಪುಟ್ಟ ಕಂದಮ್ಮನನ್ನ ಹೆತ್ತ ತಾಯಿ ರಸ್ತೆಗೆ ಎಸೆದು ಹೋಗಿದ್ದು, ಸ್ಥಳೀಯರು ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣೆ ಮಾಡಿರುವಂತಹ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.  ಇಂದು(ಶನಿವಾರ) ವಿವರ್ಸ್ ಕಾಲೋನಿಯ 5ನೇ ಕ್ರಾಸ್ ರಸ್ತೆ‌ ಬದಿಯಲ್ಲಿ ಮಗುವಿನ ಅಳುವಿನ‌ ಶಬ್ದ ಕೇಳಿಸಿಕೊಂಡ ನಿವಾಸಿಗಳು ಹೊರ ಬಂದು ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಆಗಷ್ಟೇ ಜನಿಸಿದ ನವಜಾತ ಶಿಶು ಕಂಡಿದೆ.

Tap to resize

Latest Videos

ನೀರಿಗೆ ಹಾರಿದ ಮಗನ ಒಂದೇ ಕೈಯಲ್ಲಿ ರಕ್ಷಿಸಿದ ತಾಯಿ

ಬೆಳ್ಳಂಬೆಳ್ಳಗ್ಗೆ ಸುಮಾರು 5.25ರ ಸಮಯ ಎಲ್ಲರು ಗಾಡ ನಿದ್ರೆಯಲ್ಲಿದ್ದರು ಆದ್ರೆ ವಿವರ್ಸ್ ಕಾಲೋನಿಯ ಐದನೇ ಕ್ರಾಸ್ ನ ಚೂಡಮಣಿ ಮನೆ ಸುತ್ತಮುತ್ತಲಿನ ಜನರಿಗೆ ಕ್ಷೀಣೀಸಿದ ಧ್ವನಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಸಿತ್ತು, ಎರಡ್ಮೂರು ಬಾರಿ ಶಬ್ದ ಕೇಳಿಸಿಕೊಂಡು ಮಲಗಿದರು ಮತ್ತೇ ಅಳುವಿನ ಚೀರಾಟ ಕೇಳಿದಾಗ  ಅಕ್ಕಪಕ್ಕದ ನಿವಾಸಿಗಳು ಎದ್ದು ಬಂದು ನೋಡಿದ್ರೇ ಎಲ್ಲರಿಗೂ ಶಾಕ್ ಆಗಿತ್ತು ಆಗಷ್ಟೇ ಜನಿಸಿದ್ದ ಮಗುವಾಗಿತ್ತು, ತಕ್ಷಣ ಪರಿಸ್ಥಿತಿ ಅರಿತ ಚೂಡಾಮಣಿ ತಕ್ಷಣ ಮಗುವನ್ನ ಎತ್ಕೋಂಡು ಒಳಗೆ ಹೋಗಿ ಮಗುವಿಗೆ ಹೊದಿಸಿ‌ ಮತ್ತೇ ಹೊರ ಬಂದು ಸುತ್ತಮುತ್ತಲೂ ನೋಡಿದಾಗ ಯಾರು ಕಾಣಿಸಲಿಲ್ಲ. ಅಷ್ಟೋತ್ತಿಗಾಗಲೇ ಜನ ಜಮಾಯಿಸಿದರು ಮತ್ತು  ಮಗುವಿಗೆ  ಸ್ನಾನ‌ ಮಾಡಿಸಿ ಬೆಚ್ಚನೆಯ ಹೊದಿಕೆ ಹೊದಿಸಿದರು, ವಿಷಯ ತಿಳಿದ ಸುತ್ತಮುತ್ತಲಿನ ಜನ ಸಾಲು ಸಾಲಾಗಿ ಚೂಡಾಮಣಿ ಮನೆಗೆ ಬರಲು ಆರಂಬಿಸಿದರು

 ಪ್ರಪಂಚವೇ‌ ಅರಿಯದ ಹಸುಗೂಸುನ್ನ ರಸ್ತೆಗೆಸೆದಿರುವ ಹೆತ್ತಮ್ಮ ಯಾರಿರಬಹುದೆಂಬ ಚರ್ಚೆಗಳು ಶುರುವಾದವು. ನೆರೆದಿದ್ದ ಮಹಿಳೆಯರು ಗುಸುಗುಸು ಮಾತಾನಾಡ್ತಾ ಈ ಮಗು ಯಾವುದೋ ಅಪ್ರಾಪ್ತೆಗೆ  ಇಲ್ಲವೇ ಅನೈತಿಕ ಸಂಬಂದಕ್ಕೆ‌ ಜನಿಸಿರುವ ಸಂಶಯ ವ್ಯಕ್ತವಾಗಿದ್ದು, ಪುಟ್ಟ ಕಂದನನ್ನ ರಸ್ತೆಯಲ್ಲಿ ಎಸೆದು ಹೋಗಿರುವ ನಿರ್ದಯಿ ತಾಯಿಯ ವಿರುದ್ಧ ಮಾತ್ರ ಸ್ಥಳೀಯರು ಆಕ್ರೋಶವನ್ನ ಹೊರಹಾಕಿದರು.  

ಅಷ್ಟೋತ್ತಿಗಾಗಲೇ ವಿಷಯ ತಿಳಿದ  ಕೋಣನಕುಂಟೆ ಪೋಲೀಸರು ಸ್ಥಳಕ್ಕೆ‌ ದಾವಿಸಿದರು, ಆದ್ರೇ ಮಗುವನ್ನ  ರಕ್ಷಣೆ ಮಾಡಿದ್ದ ಮಹಿಳೆ ಚೂಡಾಮಣಿ ಮಗುವನ್ನ ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಪೊಲೀಸರ ಬಳಿ‌ ಗೊಗರೆದರು.ಆದ್ರೆ ಕೊಂಣನಕುಂಟೆ ಪೊಲೀಸರು ನಾವೇನೂ ಮಾಡೋದಕ್ಕೆ ಆಗಲ್ಲವೆಂದು  ನವಜಾತ‌ ಹೆಣ್ಣು‌ ಮಗುವನ್ನ ವಶಕ್ಕೆ ಪಡೆದು‌ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿ ಮಕ್ಕಳ‌ ಕಲ್ಯಾಣ ಇಲಾಖೆಯವರಿಗೆ ಒಪ್ಪಿಸಿ ತೆಗೆದುಕೊಂಡು ಹೋದರು. ಬಳಿಕ ನೆರೆದಿದ್ದ ಜನ ಬೇಸರದಲ್ಲೇ ತಮ್ಮ ದೈನಂದಿನ ಚಟುವಟಿಗೆಗಳತ್ತ ಹೊರಟರು.

click me!