PSI Recruitment Scam: ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ, ಕಾಂಗ್ರೆಸ್ ಆರೋಪ!

By Suvarna News  |  First Published May 2, 2022, 12:54 PM IST

 ಧಾರವಾಡದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ ಎಚ್ ನೀರಲಕೇರಿ ಅವರು  ಪಿ ಎಸ್ ಐ ನೇಮಕಾತಿ ಹಗರಣ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಮೇ.2): ಪಿ ಎಸ್ ಐ ನೇಮಕಾತಿಯಲ್ಲಿ (PSI Recruitment Scam)  ಬಾರಿ ಅಕ್ರಮ ದಂಧೆ ಸರಕಾರದಲ್ಲಿ ನಡಿತಾ ಇದೆ. 2021 ರಲ್ಲಿ ಆದ ಪಿಎಸ್ಐ ನೋಟಿಪಿಕೇಶ‌ನ್ ಆಗಿ ಪೆಬ್ರವರಿ 2022 ರಂದು ಮತ್ತೊಮ್ಮೆ ನೋಟಿಪಿಕೇಶನ್ ಮಾಡಿತ್ತ ಸರಕಾರ ಪರೀಕ್ಷೆ ಅಡಿಯಲ್ಲಿ 545 ಜನ ಅಭ್ಯರ್ಥಿ ಗಳ ಪ್ರೋವಿಶಜನಲ್ ಲಿಸ್ಟ  ನಲ್ಲಿ ಆಯ್ಕೆ ಯಾಗಿದ್ದರು. ಕೆಪಿಸಿಸಿ ಮಾಧ್ಯಮ ವಿಶ್ಲೆಷಕ ಪಿ ಎಚ್ ನೀರಲಕೇರಿ (KPCC media analyst P.H. Neeralakeri  ) ಅವರು ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

Tap to resize

Latest Videos

ವಿದ್ಯಾರ್ಥಿಗಳಿಗೆ ಬ್ಲೂಟೂಥ್, ಮತ್ತು ವಿದ್ಯಾವಂತ ಅಭ್ಯರ್ಥಿ ಗಳ ಪಕ್ಕ ಮೊತ್ತೊಬ್ಬ ವಿದ್ಯಾರ್ಥಿಯ ಕುಳಿತುಕ್ಕೊಂಡು ಅವನು ಮಾರ್ಕ್ ಮಾಡಿದ್ದನ್ನೇ ಇವರು ಮಾರ್ಕ್ ಮಾಡಬೇಕು, ಒಂದು ಅಭ್ಯರ್ಥಿಯಿಂದ 80 ಲಕ್ಷ ಪಡೆದುಕೊಂಡು ಆಯ್ಕೆ ಮಾಡಿದ್ದಾರೆ ಎಂದು ಪ್ರತಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೆಷಕ ಪಿ ಎಚ್ ನೀರಲಕೇರಿ ಹೇಳಿದ್ದಾರೆ.

ಕಳೆದ 21 ದಿನದ ಹಿಂದೆ ಪ್ರಕರಣ ಬೆಳಕಿಗೆ ಬಂದಿದೆ. ದಿವ್ಯಾ ಎಂಬುವಳು ಬಿಜೆಪಿಯ ಅಪ್ಪಟ ಕಾರ್ಯಕರ್ತೆ, ಅವಳ ಹೀಂದೆ ಯಾವ ಶಾಸಕರು ಇದಾರೆ ಎಂಬುದು ತನಿಕೆಯಾಗಬೇಕು. ಸಿಐಡಿ ಮೇಲೆ ಪ್ರಭಾವ ಬೀರಿ ಸಚಿವರೊಬ್ಬರು ಅವರ  ಸಹೋದರನನ್ನ ಬಿಡಿಸಿ ಕಳಿಸಿದ್ದಾರೆ. ಸಿಐಡಿಯಿಂದ ಪಾರದರ್ಶಕವಾದ ತನಿಖೆ ಆಗ್ತಾ ಇಲ್ಲ , ಇದರಲ್ಲಿ ಸಿಐಡಿ ಪೇರ್ ಆಗಿ ವಿಚಾರಣೆಗೆ ಸರಕಾರ ಬಿಡ್ತಾ ಇಲ್ಲ.

TUMAKURU ಎಸ್ಐಟಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಕೊಡುಗೆ!

ಹೋಮ್‌ ಮಿನಿಸ್ಟರ್ ಕಚೇರಿ ಸಿಎಂ ಕಚೇರಿಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಸರಕಾರ ಮರು ಪರೀಕ್ಷೆ ಮಾಡಲು ತಿರ್ಮಾನ ಮಾಡಿದ್ದಾರೆ. ಪರೀಕ್ಷೆ ಮಾಡುವ ಬದಲು ಯಾರು ಭಾಗಿಯಾಗಿದ್ದಾರೆ. ಅವರನ್ನು ಬಂಧಿಸಬೇಕು, ತನಿಖೆಯನ್ನು ಸರಕಾರ ತಪ್ಪು ದಾರಿಗೆ ತೆಗೆದುಕ್ಕೊಂಡು ಹೊಗುತ್ತಿದೆ. ಇಷ್ಟೆಲ್ಲ ಅಕ್ರಮ ಆದರೂ ಸರಕಾರ ಯಾಕೆ ಕಣ್ಣು ಮುಚ್ಚಿ ಕುಳತಿದೆ. ಸರಕಾರ ಆಡಳಿತ ವಿಫಲವಾಗಿದೆ. 

ಪ್ರಭಾವಿ ಸಚಿವರು ಭಾಗಿಯಾಗದೆ ಈ ಪ್ರಕರಣ ನಡೆದಿಲ್ಲ. ಜ್ಯೂಡಿಶಿಯಲ್ ‌ನಲ್ಲಿ ವಿಚಾರಣೆಯಾಗಬೇಕು. ಎಡಿಜಿಪಿ, ಅವರನ್ನ ಅಮಾನತು ಮಾಡಿ ತನಿಖೆ ಮಾಡಬೇಕಾಗಿದೆ. ಆರ್ ಟಿ ಪಾಟೀಲ ಮತ್ತು ದಿವ್ಯಾ ಅವರನ್ನ ಮಾತ್ರ ಅರೆಸ್ಟ್ ಮಾಡಿದ್ದಾರೆ.  ಆದರೆ ಈ ಅಕ್ರಮದ ಹಿಂದೆ ದೊಡ್ಡ ದೊಡ್ಡ ಕುಳಗಳು ಇವೆ ಆದರೆ 365 ಅಭ್ಯರ್ಥಿಗಳ ಅಕ್ರಮದಲ್ಲಿ ಬಾಗಿಯಾಗಿದ್ದಾರೆ. ಸರಕಾರಕ್ಕೆ ನಾನು ಆಗ್ರಹ ಪಡಿಸುತ್ತೇ ಸೂಕ್ತವಾಗಿ ತನಿಖೆಯಾಗಬೇಕು. ಆ ಪ್ರಭಾವಿ ಸಚಿವರ ಸಹೋದರನನ್ನು ಸಿಐಡಿ ವಿಚಾರಣೆ ಮಾಡುತ್ತಿದ್ದರು. ಆದರೆ ಸಚಿವರು   ಅಧಿಕಾರ ದುರ್ಬಳಕೆಯಿಂದ ಅವರ ಸಹೋದರನನ್ನ  ಬಿಡುಗಡೆ ಗೊಳಿಸಿದ್ದಾರೆ. 

CHIKKAMAGALURU ಆಂಜನೇಯ ನಿಂತಿರೋದು ಐದು ಲಕ್ಷ ಪುಸ್ತಕಗಳ ಮೇಲೆ!

ಕೇವಲ ಮರು‌ ಪರೀಕ್ಷೆ ಯಾರಿಗೆ ಮಾಡ್ತಾ ಇದಾರೆ ಅನ್ನೋದನ್ನ‌ ಸರಕಾರ ಸ್ಪಷ್ಟಪಡಿಸಬೇಕು. ಸರಕಾರದ ಮಂತ್ರಿಗಳು ಭಾಗಿಯಾಗಿದ್ದಾರೆ. ಸರಕಾರ ಪ್ರಕರಣ ಮುಚ್ಚಿ ಹಾಕಲು ಮರುಪರೀಕ್ಷೆ ಮಾಡ್ತಾ ಇದೆ. ಆದರೆ ಈ ಪ್ರಕರಣವನ್ನ ಕ್ಲಿಯರ್ ಮಾಡದೆ ಮರುಪರೀಕ್ಷೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಸರಕಾರದಲ್ಲಿ ಅಕ್ರಮಗಳನ್ನ‌ ಎತ್ತಿ ಹಿಡಿಯಲು ಇದೊಂದು ಪ್ರಕರಣ ಸಾಕು.  ಆರೋಪಿಗಳನ್ನು ರಕ್ಷಿಸುತ್ತಿರುವ ಸಚಿವರು ನೈತಿಕ‌ಹೊಣೆ ಹೊತ್ತು ರಾಜೀನಾಮೆ‌ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

click me!