MAndya : ಕನ್ನಡ ಓದಿದವರಿಗೆ ಶೇ.50ರಷ್ಟುಮೀಸಲಾತಿ ಕಲ್ಪಿಸಿ

By Kannadaprabha NewsFirst Published Feb 10, 2023, 5:57 AM IST
Highlights

ಮಾತೃಭಾಷೆ ಕನ್ನಡದಲ್ಲಿ ಓದಿದವರಿಗೆ ಶೇ.50 ರಷ್ಟುಉದ್ಯೋಗ ದೊರೆಯುವಂತೆ ಸರ್ಕಾರ ಮೀಸಲಾತಿ ಕಲ್ಪಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರಯ್ಯ ಪ್ರತಿಪಾದಿಸಿದರು.

 ಪಾಂಡವಪುರ:  ಮಾತೃಭಾಷೆ ಕನ್ನಡದಲ್ಲಿ ಓದಿದವರಿಗೆ ಶೇ.50 ರಷ್ಟುಉದ್ಯೋಗ ದೊರೆಯುವಂತೆ ಸರ್ಕಾರ ಮೀಸಲಾತಿ ಕಲ್ಪಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರಯ್ಯ ಪ್ರತಿಪಾದಿಸಿದರು.

ಬನ್ನಂಗಾಡಿಯಲ್ಲಿ ನಡೆದ 9ನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕೆಲಸ ಸಿಗುವುದಿಲ್ಲ. ಅವರ ಬದುಕು ಕಷ್ಟವಾಗುತ್ತದೆ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಈ ಮನಸ್ಥಿತಿಯನ್ನು ಹೋಗಲಾಡಿಸಬೇಕು ಎಂದರು.

Latest Videos

ಕನ್ನಡ ಭಾಷೆ ಭಾರತೀಯ ಭಾಷೆಗಳಲ್ಲಿ ಪ್ರಾಚೀನತೆಯ ದೃಷ್ಟಿಯಿಂದ ಎರಡನೇಯದಾಗಿದೆ. ಜತೆಗೆ ಕನ್ನಡ ಸಾಹಿತ್ಯ ಪಂಪನಿಂದ ಕುವೆಂಪುವರೆಗೆ ಶ್ರೀಮಂತವಾಗಿ ಬೆಳೆದಿದೆ ಎಂದು ಹೇಳಿದರು. ಕರ್ನಾಟಕದ ಶಿಲ್ಪ ಕಲೆ ಹಾಗೂ ಸಂಗೀತ ಇದು ವಿಶ್ವಕ್ಕೆ ನಾವು ಕೊಟ್ಟಕೊಡುಗೆಯಾಗಿದೆ.ಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದು ಭಾರತೀಯ ಭಾಷೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ನಮ್ಮ ಸಾಹಿತ್ಯದಲ್ಲಿ ಮಾನವನ ಬದುಕಿಗೆ ಬೇಕಾದ ಎಲ್ಲಾ ವಿಚಾರಗಳು ಇವೆ ಎಂದರು.

ಇಂದು ನಾಗರಿಕತೆ ಬೆಳೆದಂತೆ ಬಹಳಷ್ಟುಜನ ಇಂಗ್ಲೀಷ್‌ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ತಮ್ಮ ಮಕ್ಕಳನ್ನು ಆಂಗ್ಲಭಾಷಾ ಮಾಧ್ಯಮದ ಕಾನ್ವೆಂಟ್‌ಗಳಲ್ಲಿ ಓದಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಎಷ್ಟೋ ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ ಎಂದು ಬೇಸರ ವ್ಯಕ್ತಡಿಸಿದರು.

ಭಾಷೆ ಬದುಕು ನೀಡುವಂತೆ ಅನ್ನವನ್ನು ನೀಡುವಂತಾಗಬೇಕು. ಉಚ್ಛ ನ್ಯಾಯಾಲಯ ಮಾಧ್ಯಮದ ಮೇಲೆ ನೀಡಿರುವ ಹೇಳಿಕೆ ನೋಡಿದರೆ ನಾವೆಲ್ಲಾ ಮನಸ್ಸು ಮಾಡಿ, ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಬಗ್ಗೆ ಹೊಣೆ ಹೊರಬೇಕಾಗಿದೆ. ಪ್ರಥಮವಾಗಿ ನಮ್ಮ ಭಾಷೆ ಪದ ಸಂಪತ್ತನ್ನು ಹೆಚ್ಚಾಗಿ ಬೆಳಸಿ ಶ್ರೀಮಂತಗೊಳಿಸಬೇಕು. ನಂತರ ಅವುಗಳನ್ನು ಇಂಜಿನಿಯರ್‌, ಮೆಡಿಕಲ…, ಮತ್ತು ನ್ಯಾಯಾಲಯ ಮುಂತಾದ ಕ್ಷೇತ್ರದಲ್ಲಿ ಬಳಸುವಂತೆ ಆಗಬೇಕು ಎಂದು ಹೇಳಿದರು.

ಜಿ.ಪಿ.ರಾಜರತ್ನಂ ಹೇಳಿದಂತೆ ನರಕಕ್ಕಿಳಿಸಿ ನಾಲ್ಗೆ ಸೀಳಿ ಬಾಯ… ಹೊಲ್ದಾಕುದ್ದೂರು ಕನ್ನಡ ಮಾತನಾಡುವ ಭಾವನೆ ಬೆಳೆಯಬೇಕು. ನಾಡು ನನ್ನದು, ನುಡಿ ನನ್ನದು ಎಂಬ ಭಾವನೆ ಬೆಳೆದಾಗ ಭಾಷೆ ಹಾಗೂ ಸಾಹಿತ್ಯ ಉಳಿಯಲು ಸಾಧ್ಯ ಎಂದರು. ಸಾಹಿತ್ಯ ಕ್ಷೇತ್ರಕ್ಕೆ ಪಾಂಡವಪುರ ತಾಲೂಕು ನೀಡಿರುವ ಕೊಡುಗೆ ಅಪಾರ. ಸಾಹಿತ್ಯದ ಎಲ್ಲಾ ಪ್ರಕಾರದಲ್ಲಿ ಕೃಷಿ ಮಾಡಿದ ಸಾಹಿತಿಗಳಿದ್ದಾರೆ. ಮೇಲುಕೋಟೆಯ ಪುತಿನ, ವಿದ್ವಾಂಸರಾದ ಅಳಸಿಂಗಾಚಾರ್‌, ಹಾರೋಹಳ್ಳಿ ಎಚ್‌.ನಂಜೇಗೌಡರು, ನೀಲನಹಳ್ಳಿಯ ನ.ಭದ್ರಯ್ಯ, ಮೇಲುಕೋಟೆಯ ಸೊಸೆಯಾದ ಸಿಂಗಾರಮ್ಮ, ನರಹಳ್ಳಿ ಬಾಲಸುಬ್ರಹ್ಮಣ್ಯ, ಕ್ಯಾತನಹಳ್ಳಿಯ ರಾಮಣ್ಣ, ಕನಗನ ಮರಡಿ ಕೃಷ್ಣೇಗೌಡ, ಡಾ. ಬೋರೇಗೌಡ ಚಿಕ್ಕಮರಳಿ, ಹರವು ದೇವೇಗೌಡರು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ವಿಚಾರಗೋಷ್ಠಿಯಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿ ಪ್ರಾಂಶುಪಾಲೆ ಡಾ.ಜಯಕುಮಾರಿ ತಿಮ್ಮೇಗೌಡ, ಸಹಾಯಕ ಪ್ರಾಧ್ಯಾಪಕಿ ಶಿಲ್ಪಶ್ರೀ ಪಾಂಡವಪುರ ತಾಲೂಕಿನ ವೈಶಿಷ್ಟತೆಗಳು, ಶಿಕ್ಷಣ ಇಲಾಖಾಧಿಕಾರಿ ಸಿ.ಎನ್‌.ಗೋಪಾಲೇಗೌಡ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಮಂಡಿಸಿದರು. ಹಿರಿಯ ಸಾಹಿತಿ ಡಾ. ಬೋರೇಗೌಡ ಚಿಕ್ಕಮರಳಿ ಅಧ್ಯಕ್ಷತೆವಹಿಸಿದ್ದರು.

ಕನ್ನಡ ಸಾಟಿ  ಯಾವುದೂ ಇಲ್ಲ

 ಮಧುಗಿರಿ :  ಕನ್ನಡ ಸಂಪದ್ಭರಿತ ಭಾಷೆ, ಕನ್ನಡಕ್ಕೆ ಯಾವುದೇ ಭಾಷೆ ಸಾಟಿಯಿಲ್ಲ. ಕನ್ನಡಕ್ಕೆ ಕುತ್ತು ಬಂದಿರುವುದು ಗ್ರಾಮೀಣರಿಂದಲ್ಲ, ಬೆಂಗಳೂರಿನಲ್ಲಿ ಕನ್ನಡಿಗರು ಅನ್ಯ ಭಾಷಿಕರ ಅಬ್ಬರದಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದು, ಆಳುವ ಸರ್ಕಾರಗಳು ಕನ್ನಡ ಭಾಷೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.

ಕನ್ನಡ ಕೆಲಸಗಳಿಗೆ ಕಂಕಣಬದ್ಧ: ಶಾಸಕ ಬಾಲಚಂದ್ರ ಜಾರಕಿಹೊಳಿ

ತಾಲೂಕಿನ ಆಂಧ್ರದ ಗಡಿ ಭಾಗಕ್ಕೆ ಹೊಂದಿರುವ ಕೊಡಿಗೇನಹಳ್ಳಿಯಲ್ಲಿ ಸೋಮವಾರ ನಡೆದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

click me!