ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಪ್ರತಿಭಟನೆ, ಮೆರವಣಿಗೆ ನಿಯಂತ್ರಣ ಅಧಿಕಾರ!

Published : Feb 04, 2022, 08:27 AM ISTUpdated : Feb 04, 2022, 09:48 AM IST
ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಪ್ರತಿಭಟನೆ, ಮೆರವಣಿಗೆ ನಿಯಂತ್ರಣ ಅಧಿಕಾರ!

ಸಾರಾಂಶ

*ಹೈಕೋರ್ಟ್‌ ಸೂಚನೆಯಂತೆ ಸರ್ಕಾರದಿಂದ ಗೆಜೆಟ್‌ ನೋಟಿಫಿಕೇಷನ್‌ *ಹೈಕೋರ್ಟ್‌ ಸ್ವಯಂ ಪ್ರೇರಿತ ರಿಟ್‌ ಅರ್ಜಿ ದಾಖಲಿಸಿಕೊಂಡು ನಿರ್ದೇಶನ  *ರಾಜ್ಯ ಸರ್ಕಾರ ನಗರ ಪೊಲೀಸ್‌ ಆಯುಕ್ತರಿಗೆ ಅಧಿಕಾರವನ್ನು ನೀಡಿ ಆದೇಶ 

ಬೆಂಗಳೂರು (ಫೆ. 05): ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಸಂಘಗಳು, ವ್ಯಕ್ತಿಗಳು ನಡೆಸುವ ಮೆರವಣಿಗೆ, ಪ್ರತಿಭಟನೆ, ಧರಣಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಅಧಿಕಾರ ನೀಡಿ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಬೆಂಗಳೂರು ಹೃದಯ ಭಾಗದಲ್ಲಿ ಅಸಂಘಟಿತ ರೀತಿಯಲ್ಲಿ ನಡೆಯುವ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ವಾಹನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಈ ಪ್ರತಿಭಟನೆಗಳಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಸುದ್ದಿ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್‌ ಸ್ವಯಂ ಪ್ರೇರಿತ ರಿಟ್‌ ಅರ್ಜಿ ದಾಖಲಿಸಿಕೊಂಡು ಕೆಲ ನಿರ್ದೇಶನ ನೀಡಿತ್ತು.

ಅಂತೆಯೆ ಮಜ್ದೂರ್‌ ಕಿಸಾನ್‌ ಶಕ್ತಿ ಸಂಘಟನೆ ವಿರುದ್ಧ ಯೂನಿಯನ್‌ ಆಫ್‌ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಕೆಲವು ನಿರ್ದೇಶನ ನೀಡಿತ್ತು. ಈ ನಿರ್ದೇಶನಗಳನ್ವಯ ಕಾನೂನನ್ನು ಗಮನದಲ್ಲಿರಿಸಿಕೊಂಡು ಹೈಕೋರ್ಟ್‌ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಿಯಂತ್ರಿಸಲು ಸಮರ್ಪಕ ಕಾರ್ಯ ವಿಧಾನವನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಟೋಯಿಂಗ್‌ಗೆ ಬ್ರೇಕ್‌ ಹಾಕಿದ ಸರ್ಕಾರ: ನಿಟ್ಟುಸಿರು ಬಿಟ್ಟ ಸಿಲಿಕಾನ್‌ ಸಿಟಿ ಮಂದಿ..!

ಶೀಘ್ರ ನಿಯಮ:  ಹೈಕೋರ್ಟ್‌ನ ನಿರ್ದೇಶನ ಮೇರೆಗೆ ಇದೀಗ ರಾಜ್ಯ ಸರ್ಕಾರ ನಗರ ಪೊಲೀಸ್‌ ಆಯುಕ್ತರಿಗೆ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ. ಅದರಂತೆ ನಗರ ಪೊಲೀಸರು ತಮಗೆ ಸಿಕ್ಕಿರುವ ಅಧಿಕಾರ ಬಳಸಿ ಬೆಂಗಳೂರು ನಗರ ವ್ಯಾಪ್ತಿಗೆ ಒಳಪಟ್ಟಂತೆ ‘ಲೈಸೆನ್ಸಿಂಗ್‌ ಆ್ಯಂಡ್‌ ರೆಗ್ಯುಲೇಷನ್‌ ಆಫ್‌ ಪ್ರೊಟೆಸ್ಟ್‌, ಡೆಮಾಸ್ಪ್ರೇಷನ್ಸ್‌ ಆ್ಯಂಡ್‌ ಪ್ರೊಟೆಸ್ಟ್‌ ಮಾಚ್‌ರ್‍ (ಬೆಂಗಳೂರು ಸಿಟಿ) ಆರ್ಡರ್‌ 2021’ರ ಆದೇಶ ಹೊರಡಿಸಿದ್ದಾರೆ.

ಈ ಆದೇಶವನ್ನು ಸಂಪೂರ್ಣವಾಗಿ ಅವಲೋಕಿಸಿ ಮುಂದಿನ ದಿನಗಳಲ್ಲಿ ಈ ವಿಷಯವಾಗಿ ನಿಯಮಗಳನ್ನು ರೂಪಿಸಲಾಗುತ್ತದೆ. ಈ ನಿಯಮಗಳನ್ನು ನಗರದಲ್ಲಿ ಕಾರ್ಯರೂಪಕ್ಕೆ ತರಲು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಅಧೀನ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: PSI Recruitment Scam: ತಮ್ಮ ಹೆಸರೇ ಬರೆಯಲಿಕ್ಕಾಗದ ಕೆಲವರು ರ‍್ಯಾಂಕ್‌ ಹೇಗೆ ಪಡೆದ್ರು..?

ನನ್ನ ವಿರುದ್ಧ ಸುಳ್ಳು ಆರೋಪ: ಚನ್ನಣ್ಣನವರ್‌: ಇತ್ತೀಚಿಗೆ ಸಾಮಾಜಿಕ ತಾಲತಾಣಗಳಲ್ಲಿ(Social Media) ಕೆಲ ವ್ಯಕ್ತಿಗಳು ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಆಧಾರರಹಿತ ಆರೋಪವು ದುರುದ್ದೇಶದಿಂದ ಕೂಡಿದೆ ಎಂದು ಐಪಿಎಸ್‌ ಅಧಿಕಾರಿ(IPS officer) ರವಿ ಚನ್ನಣ್ಣನವರ್‌(Ravi Channannavar) ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನನ್ನ ತಂದೆ-ತಾಯಿಯವರ ಹೆಸರಿನಲ್ಲಿರುವ ಕೆಲ ಪಹಣಿ ಹಾಕಿ ನನ್ನ ವಿರುದ್ಧ ಆರೋಪಿಸಿದ್ದಾರೆ(Allegation). ಈ ಆಸ್ತಿಗಳೆಲ್ಲ ಕಾನೂನುಬದ್ಧವಾಗಿಯೇ ಖರೀದಿಸಿದ್ದು, ಅವು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿವೆ. ಅಲ್ಲದೆ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ(Department of Income Tax) ಮಾಹಿತಿ ನೀಡಿದ್ದೇನೆ ಎಂದು ಖಚಿತಪಡಿಸಿದ್ದಾರೆ.

ಈ ಆಸ್ತಿಗಳನ್ನು ನಾನು ಭ್ರಷ್ಟ(Corruption) ರೀತಿಯಿಂದ ಸಂಪಾದಿಸಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನನ್ನನ್ನು ತೇಜೋವಧೆ ಮಾಡಬೇಕು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿದೆ. ನಾನೊಬ್ಬ ಅಖಿಲ ಭಾರತೀಯ ಸೇವಕನಾಗಿದ್ದು, ಸೇವಾ ನಿಯಮಗಳಡಿ ವರ್ತಿಸಬೇಕಾಗಿದೆ. ನನ್ನ ಕರ್ತವ್ಯ ಆದ್ದರಿಂದ ಈ ಕುರಿತಂತೆ ನಾನು ಇದಾವುದಕ್ಕೂ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸದೇ ಕಾನೂನು ಬದ್ಧವಾಗಿ ಕ್ರಮ ಕೈಗೊಂಡಿದ್ದೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನಾನು ಈಗಾಗಲೇ ಕಾನೂನಾತ್ಮಕವಾಗಿ(Legal) ನಮ್ಮ ನ್ಯಾಯವಾದಿಗಳ ಮೂಲಕ ಲೀಗಲ್‌ ನೋಟಿಸ್‌(Legal Notice) ನೀಡಿದ್ದೇನೆ. ಇದಕ್ಕೆ ಉತ್ತರ ಬಂದಿಲ್ಲ. ಈ ಸುಳ್ಳು ಆರೋಪ ಸಂಬಂಧ ನ್ಯಾಯಾಲಯದಲ್ಲಿ 3 ಕೋಟಿ ಮಾನನಷ್ಟ ಮೊಕದ್ದಮೆಯನ್ನು(Defamation Case) ದಾಖಲಿಸಿರುತ್ತೇನೆ. ಸುಳ್ಳು ಆಪಾದನೆ ಮಾಡಿದ್ದಕ್ಕೆ ಎರಡು ವರ್ಷಗಳು ಜೈಲು ಶಿಕ್ಷೆ ವಿಧಿಸುವಂತೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ(Court) ಕ್ರಿಮಿನಲ್‌ ಮಾನ ಹಾನಿ ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ