ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿ ವತಿಯಿಂದ ನಟ ಉಪೇಂದ್ರ ಬಂಧಿಸುವಂತೆ ಆಗ್ರಹಿಸಿ ನಡೆಸುತ್ತಿರುವ ನಿರಂತರ ಹೋರಾಟ ಗುರುವಾರವು ಮುಂದುವರೆಯಿತು. ಉಪೇಂದ್ರ ಶವಯಾತ್ರೆ ನಡೆಸುವ ಮೂಲಕ ವಿನೂತನ ಮಾದರಿ ಪ್ರತಿಭಟಿಸಿದರು.
ಕೊಳ್ಳೇಗಾಲ (ಸೆ.01): ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿ ವತಿಯಿಂದ ನಟ ಉಪೇಂದ್ರ ಬಂಧಿಸುವಂತೆ ಆಗ್ರಹಿಸಿ ನಡೆಸುತ್ತಿರುವ ನಿರಂತರ ಹೋರಾಟ ಗುರುವಾರವು ಮುಂದುವರೆಯಿತು. ಉಪೇಂದ್ರ ಶವಯಾತ್ರೆ ನಡೆಸುವ ಮೂಲಕ ವಿನೂತನ ಮಾದರಿ ಪ್ರತಿಭಟಿಸಿದರು. ಉಪವಿಭಾಗೀಯ ಕಚೇರಿ ಮುಂಭಾಗ ನೆರೆದಿದ್ದ ಪ್ರತಿಭಟನಾಕಾರರು ಉಪೇಂದ್ರನ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರಹಾಕಿದರಲ್ಲದೆ ತಾ.ಪಂ. ಕಚೇರಿಯ ರಸ್ತೆ ಮುಂಭಾಗ ಜಮಾಯಿಸಿ ಉಪೇಂದ್ರ ಪೋಟೋವಿರುವ ಪ್ಲೆಕ್ಸ್‌ಗೆ ಹಗ್ಗಕಟ್ಟಿಎಳೆದುಕೊಂಡು, ಕಾಲಿನಲ್ಲಿ ತುಳಿದು ಶವಯಾತ್ರೆ ನಡೆಸಿದರು. ರಸ್ತೆಯುದ್ದಕ್ಕೂ ಉಪೇಂದ್ರ ಸತ್ತನು, ಸತ್ತನಪ್ಪ ಸತ್ತನು, ಉಪೇಂದ್ರ ಸತ್ತನು ಎಂಬಿತ್ಯಾದಿ ಘೋಷಣೆ ಕೂಗಿದರು.
ಶವಯಾತ್ರೆ ವೇಳೆ ಉಪೇಂದ್ರ ಪೋಟೊಗೆ ಹೂವು ಎರಚಿ, ಜಾಗಟೆ ಬಾರಿಸುವ ಮೂಲಕ ಪ್ರತಿಭಟನಾಕಾರರು ರೋಧಿಸುತ್ತಲೆ ಸಾಗಿ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ವಿನೂತನ ಚಳುವಳಿ ನಡೆಸಿದರು. ಈ ವೇಳೆ ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಸರ್ಕಾರ ಉಪೇಂದ್ರ ಬಂಧನದ ವಿಚಾರದಲ್ಲಿ ಮೆದು ಧೋರಣೆ ತಳೆದಿದೆ. ಇನ್ನಾದರೂ ಮೆದು ಧೋರಣೆ ಬದಿಗೊತ್ತಿ ಉಪೇಂದ್ರ ಬಂಧನವಾಗಬೇಕು ಎಂದು ಆಗ್ರಹಿಸಿದರು. ಈ ವೇಳೆ ವಿವಿಧ ಗ್ರಾಮಗಳ ಮಹಿಳಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪೇಂದ್ರ ಬಂಧನಕ್ಕೆ ಆಗ್ರಹಿಸಿದರು.
undefined
ದುಬಾರೆ ಸಾಕಾನೆ ಶಿಬಿರದಿಂದ ನಾಡಹಬ್ಬ ದಸರಾಕ್ಕೆ ಹೊರಟ ಕೊಡಗಿನ ಗಜಪಡೆ
ಈ ಸಂದರ್ಭದಲ್ಲಿ ಶ್ರೀಧರ್, ಜಗದೀಶ್, ರಮೇಶ್, ಮಹದೇವು, ಸಿದ್ದಯ್ಯನಪುರ ಕೆಂಪರಾಜು, ತೇರಂಬಳ್ಳಿ ಕುಮಾರಸ್ವಾಮಿ, ಚಾಮರಾಜು, ಮೋಳೆರಾಮಕೃಷ್ಣ, ಹಂಪಾಪುರ ಲಿಂಗರಾಜು, ಸಿದ್ದನಂಜಯ್ಯ, ಕೆಂಪಮ್ಮ, ನಿಂಗಮ್ಮ, ಜಯಮ್ಮ, ಬೀಮನಗರದ ಯಜಮಾನರಾದ ಸಿದ್ದಾರ್ಥ, ರಾಚಪ್ಪಾಜಿ, ರಾಮಯ್ಯ ಇದ್ದರು. 9ದಿನಕ್ಕೆ ಮುಂದುವರೆದ ಪ್ರತಿಭಟನೆ: ಉಪೇಂದ್ರ ಬಂಧನಕ್ಕೆ ಆಗ್ರಹಿಸಿ ಕೊಳ್ಳೇಗಾಲ ಬೀಮನಗರ, ಸತ್ತೇಗಾಲ, ತೇರಂಬಳ್ಳಿ, ಹಂಪಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ದಲಿತ ಸಮಾಜದ ಮುಖಂಡರು, ಮಹಿಳಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನವಾದ ಗುರುವಾರವೂ ಮುಂದುವರೆದಿದ್ದು, ಪ್ರತಿ ದಿನವೂ ವಿನೂತನ ಚಳುವಳಿ ನಡೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಮುಂದುವರಿದ ಪ್ರತಿಭಟನೆ: ನಟ ಉಪೇಂದ್ರ ಬಂಧಿಸುವಂತೆ ನಡೆಯುತ್ತಿರುವ ಹೋರಾಟ 9ನೇ ದಿನವೂ ಮುಂದುವರಿದಿದ್ದು, ಶುಕ್ರವಾರ ಹೊಸ ಹಂಪಾಪುರ ಗ್ರಾಮಸ್ಥರು ಮುಖಂಡರೊಡಗೂಡಿ ಉಪೇಂದ್ರ ಬಂಧಿಸವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಬಳಿಕ ತಮಟೆ ಸದ್ದಿನೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಉಪೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಹಂಪಾಪುರ ಗ್ರಾಮದ ಶಾಂತರಾಜು ಮಾತನಾಡಿ, ದಲಿತರ ಮೇಲೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಉಪೇಂದ್ರನನ್ನು ಬಂಧಿಸದಿರುವುದನ್ನು ಖಂಡಿಸುತ್ತೇವೆ.
ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಂಜಾಪುಂಡರ ಕಾಟ: ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು
ಉಪೇಂದ್ರನನ್ನು ಬಂಧಿಸುವವರೆಗೂ ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಹೋರಾಟ ನಡೆಸುತ್ತೇವೆ. ಆದ್ದರಿಂದ, ಕೂಡಲೇ ಆತನನ್ನು ಬಂಧಿಸುವಂತೆ ಆಗ್ರಹಿಸಿದರು. ಈ ವಿಚಾರದಲ್ಲಿ ಸರ್ಕಾರ ಮೌನ ಮುರಿಯಬೇಕು ಎಂದರು. ಪ್ರತಿಭಟನೆಯಲ್ಲಿ ಹೊಸಹಂಪಾಪುರದ ಗ್ರಾಮದ ಯಜಮಾನರು ಸಿ.ನಾಗರಾಜು, ರಂಗಯ್ಯ, ರವಿರಾಜು, ಮಾದೇಶ್, ಬಿಳಿಗಿರಿ, ಮಲ್ಲರಾಜು, ಶಂಕರ್, ಶಿವರುದ್ರ, ಲಿಂಗರಾಜು, ಮಲ್ಲೇಶ್, ಧೃವರಾಜು, ಮಾದೇವ, ಮಲ್ಲಯ್ಯ, ಗಣೇಶ, ನಂಜುಂಡ, ಮಲ್ಲನಿಂಗ, ಸಿದ್ದನಂಜಯ್ಯ, ರಾಜಶೇಖರ್, ಪ್ರಕಾಶ್, ಛಲವಾದಿ ಮಹಾಸಭೆಯ ಬಸವರಾಜು, ಬೀಮನಗರ ನಿಂಪು ಸುರೇಶ್ ಇನ್ನಿತರರಿದ್ದರು.