ಅನುದಾನ ನೀಡದ ಕಾರಣ ಜಾನುವಾರು ಸಮೇತ ಗ್ರಾಪಂ ಎದುರು ಪ್ರತಿಭಟನೆ

By Kannadaprabha News  |  First Published Aug 20, 2022, 1:04 PM IST

ಅತಿವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಅನುದಾನ ನೀಡಿಲ್ಲವೆಂಬ ಕಾರಣಕ್ಕೆ ಜಾನುವಾರು ಸಮೇತ ಆಗಮಿಸಿ ಗ್ರಾಪಂ ಕಾರ್ಯಾಲಯ ಎದುರು ತಲೆಯ ಮೇಲೆ ಕಲ್ಲುಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆ ಬ್ಯಾಡಗಿ ತಾಲೂಕು ಮತ್ತೂರಿನಲ್ಲಿ ನಡೆದಿದೆ.


ಬ್ಯಾಡಗಿ (ಆ.20) : ಅತಿವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಅನುದಾನ ನೀಡಿಲ್ಲವೆಂಬ ಕಾರಣಕ್ಕೆ ಜಾನುವಾರು ಸಮೇತ ಆಗಮಿಸಿ ಗ್ರಾಪಂ ಕಾರ್ಯಾಲಯ ಎದುರು ತಲೆಯ ಮೇಲೆ ಕಲ್ಲುಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ತಾಲೂಕಿನ ಮತ್ತೂರನಲ್ಲಿ ನಡೆದಿದೆ.

ಬ್ಯಾಡಗಿ: ಮೆಣಸಿನಕಾಯಿ ಖರೀದಿಸಿ 4.70 ಕೋಟಿ ವಂಚನೆ

Tap to resize

Latest Videos

undefined

ಪ್ರಸಕ್ತ ವ‚ರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅತಿವೃಷ್ಟಿಯಿಂದ ಮನೆಗಳು ಬಿದ್ದಿವೆ ಇದಕ್ಕೆ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಸರ್ಕಾರ ನೀಡುತ್ತಿದೆ,ಆದರೆ ಕೊಟ್ಟಿರುವ ಅರ್ಜಿಯನ್ನು ತಾಲೂಕಾಡಳಿತ ತಿರಸ್ಕರಿಸಿದ ಬೆನ್ನಲ್ಲೇ ಗ್ರಾಮದ ಶೋಭಾ ಹಾರೋಗೊಪ್ಪ, ಹೊನ್ನವ್ವ ಹೊಸಳ್ಳಿ, ಪ್ರೇಮವ್ವ ಕೋನಮ್ಮನವರ ಹಾಗೂ ಕುಸಮವ್ವ ಹೊಸಳ್ಳಿ, ವಜೀರಬವ್ವ ನನ್ನೆಸಾಬ್‌ ಮುಲ್ಲಾ ಎಂಬ 5 ಕುಟುಂಬಗಳ ಸದಸ್ಯರು ಕುರಿಗಳೊಂದಿಗೆ ಗ್ರಾಪಂ ಕಾರ್ಯಾಯದ ಎದುರು ತಲೆಯ ಮೇಲೆ ಕಲ್ಲನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾರಂಭಿಸಿದರು.

ಈ ವೇಳೆ ಮಾತನಾಡಿದ ಸಂತ್ರಸ್ಥರು ನಮ್ಮ ಮನೆಗಳು ಬಿದ್ದಿದ್ದು ಆವಾಗಲೂ ಸಹ ಅರ್ಜಿ ನೀಡಲಾಗಿತ್ತಾದರೂ ನಮ್ಮ ಅರ್ಜಿಗಳನ್ನು ತಿರಸ್ಕೃರಿಸಲಾಗಿತ್ತು, ಪ್ರಸಕ್ತ ವರ್ಷವೂ ನಮ್ಮ ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಇದರ ಹಿಂದಿನ ಉದ್ದೇಶ ತಿಳಿಯುತ್ತಿಲ್ಲ, ಹಾಗಿದ್ದರೆ ಬಡವರ ಗೋಳು ಕೇಳಲು ಸರ್ಕಾರ ಸಿದ್ಧವಿಲ್ಲ ಪರಿಹಾರ ಘೋಷಣೆಯಾಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.

ಒತ್ತಡವಿದ್ದರೇ ತಿಳಿಸಿ:

ನಮ್ಮ ಕುಟುಂಬಗಳಿಗೆ ಪರಿಹಾರ ನೀಡದಂತೆ ಒತ್ತಡವಿದ್ದರೇ ತಿಳಿಸಿ ಎಂದು ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಅಥವಾ ನಮ್ಮ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ, ಹಣ ಕೊಟ್ಟರಷ್ಟೇ ಮನೆಗಳಿಗೆ ಪರಿಹಾರ ಹಾಕಲಾಗುತ್ತಿದೆ, ಬಡವರು ಎಲ್ಲಿಂದ ದುಡ್ಡು ತರಬೇಕು ಇದರಲ್ಲಿ ಗ್ರಾಪಂ ಆಡಳಿತ ಮಂಡಳಿಯ ಹಸ್ತಕ್ಷೇಪವಿದೆ, ಪರಿಹಾರ ಘೋಷಣೆ ಆಗುವವರೆಗೂ ಇಲ್ಲಿಂದ ತೆರಳುವ ಮಾತೇ ಇಲ್ಲವೆಂದರು.

Raita Ratna Award 2022: ಸಾವಯವ ಕೃಷಿ ಸಾಧಕಿ ಟ್ರ್ಯಾಕ್ಟರ್‌ ಮಹದೇವಕ್ಕ

ನಮ್ಮ ಗೋಳು ಕೇಳುವವರಿಲ್ಲ:

ಬೆಳಗ್ಗೆಯಿಂದ ಪ್ರತಿಭಟನೆ ನಡೆಯುತ್ತಿರುವ ಸುದ್ದಿ ತಿಳಿದರೂ ಸಹ ಪಿಡಿಓ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಆಲಿಸಿರುವುದಿಲ್ಲ ಹೀಗಾಗಿ ಯಾವುದೇ ಕಾರಣಕ್ಕೂ ನಮಗೆ ಪರಿಹಾರದ ಭರವಸೆ ಸಿಗುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ಈಗಾಗಲೇ ಸ್ಥಳದಲ್ಲೇ ಅಡುಗೆ ಮಾಡಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರತಿಭಟನಾನಿರತ ಕುಟುಂಬಗಳು ಪತ್ರಿಕೆಗೆ ತಿಳಿಸಿವೆ.

ಗ್ರಾಮ ಪಂಚಾಯತ್‌ ಕಾರ್ಯಾಲಯಕ್ಕೆ ಸಲ್ಲಿಸಿದ್ದ 5ಅರ್ಜಿಗಳನ್ನು ತಹಸೀಲ್ದಾರ ಕಚೇರಿಗೆ ಕಳಿಸಿಕೊಟ್ಟಿದ್ದೇನೆ. ಗ್ರಾಪಂ ಪರಿಹಾರ ನೀಡುವುದಿಲ್ಲ ಆದರೆ ಪರಿಶೀಲನಾ ಸಮಿತಿ ಸದರಿಯವರಿಗೆ ಪ್ರತ್ಯೇಕ ಮನೆಗಳಿವೆ ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿವೆ ಪ್ರತಿಭಟನಾಕಾರರ ಮನವಿ ಮೇರೆಗೆ ಮರು ಪರಿಶೀಲಿಸುವಂತೆ ಅರ್ಜಿಗಳನ್ನು ತಹಸೀಲ್ದಾರ ಕಚೇರಿಗೆ ಕಳುಹಿಸಿಕೊಡಲಾಗಿದೆ,ಪ್ರತಿಭಟನೆ ಕೈಬಿಡುವಂತೆ ಐದು ಕುಟುಂಬಗಳಿಗೆ ಮನವಿ ಮಾಡಿದ್ದೇನೆ

ಶೋಭಾ ನಾಯಕ್‌ ಪಿಡಿಓ

ಬಿದ್ದ ಮನೆಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ,ಪ್ರತಿಭಟನೆ ಅಂತಿಮ ಪರಿಹಾರವಲ್ಲ ಸದರಿ ಫಲಾನುಭವಿಗಳ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಇದೀಗ ಗಮನಕ್ಕೆ ಬಂದಿದೆ, ಮತ್ತೊಮ್ಮೆ ಪರಿಶೀಲಿಸಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ವಿರೂಪಾಕ್ಷಪ್ಪ ಬಳ್ಳಾರಿ,ಶಾಸಕ

click me!