ಕಬ್ಬು ಬೆಳೆಗಾರರ ಬೇಡಿಕೆ ಈಡೇರದಿದ್ದರೆ ಸಿಎಂ ಮನೆ ಎದುರು ಧರಣಿ: ಮುತಾಲಿಕ್‌

By Kannadaprabha News  |  First Published Oct 31, 2022, 10:43 PM IST

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.


ಹಳಿಯಾಳ (ಅ.31): ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಪಟ್ಟಣದ ಪಟ್ಟಣದ ಆಡಳಿತಸೌಧದ ಆವರಣದಲ್ಲಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ರೈತರು ಬೆವರು ಹರಿಸಿ ಬೆಳೆಸಿದ ಬೆಳೆಗೆ ಉತ್ತಮ ಬೆಲೆ ನೀಡುವುದರ ಜೊತೆಗೆ ಸಕ್ಕರೆ ಕಾರ್ಖಾನೆಯವರಿಂದ ಕಮೀಷನ್‌ ಪಡೆಯುವುದನ್ನು ನಿಲ್ಲಿಸಬೇಕು. ಆದಷ್ಟುಬೇಗನೆ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಆಮರಣಾಂತಿಕ ಉಪವಾಸ ಕೈಗೊಂಡಿರುವ ಪರಮಾತ್ಮಜೀ ಮಹಾರಾಜ್‌ ಸ್ವಾಮೀಜಿ, ಸೊಗಲ ಕ್ಷೇತ್ರದ ಜ್ಞಾನಾನಂದ ಸ್ವಾಮಿ ಸೇರಿದಂತೆ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೂಬಾಟಿ, ಶಂಕರ ಕಾಜಗಾರ, ಎಂ.ವಿ. ಘಾಡಿ ಘೋಡಿಮನಿ, ನಾಗೇಂದ್ರ ಜಿವೋಜಿ, ಮಂಜುಳಾ ಗೌಡ, ಬಸವರಾಜ ಬೆಂಡಿಗೇರಿಮಠ, ಅಪ್ಪಾಜಿ ಶಹಾಪುರಕರ, ಅಪ್ಪಾರಾವ್‌ ಪೂಜಾರಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Latest Videos

undefined

ಈ ವರ್ಷ ಕರ್ನಾಟಕದಲ್ಲಿ ಹಲಾಲ್‌ ಮುಕ್ತ ದೀಪಾವಳಿ ಆಚರಣೆ: ಪ್ರಮೋದ್‌ ಮುತಾಲಿಕ್‌

ಬಿಜೆಪಿಯಿಂದ ಧರಣಿ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೂಬಾಟಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ್‌ ಹೆಗಡೆ ವಿರುದ್ಧ ಅಸಾಂವಿಧಾನಿಕ ಪದ ಬಳಸಿ, ಅಗೌರವದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 200ಕ್ಕೂ ಅಧಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ತುತುಸರ್ಭೆ ನಡೆಸಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಮೂಲಕ ಶಿವಾಜಿ ವೃತ್ತಕ್ಕೆ ಆಗಮಿಸಿಧರಣಿನಿರತರು ಕುಮಾರ ಬೂಬಾಟಿ ಅವರನ್ನು ಸ್ಥಳಕ್ಕೆ ಕರೆಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಈ ವೇಳೇ ಪ್ರತಿಭಟನೆಯಲ್ಲಿ ಅನಿಲ್‌ ಮುತ್ನಾಳೆ, ಶ್ರೀಪತಿ ಭಟ್‌, ಅಜೋಬಾ ಕರಂಜೇಕರ, ಸಂತೋಷ ಘಟಕಾಂಬಳೆ, ರಾಮಚಂದ್ರ ವಡ್ಡರ, ಯಲ್ಲಪ್ಪ ಹೊನ್ನೋಜಿ, ಸಂಗೀತಾ ಜಾಧವ, ರೂಪಾ ಗಿರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಮುಂಬರುವ ವಿಧಾನಸಭೆ ಚುನಾವಣೆಗೆ ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ಒತ್ತಾಯವಿದೆ. ಡಿಸೆಂಬರ್‌ ಮೊದಲನೆಯ ವಾರದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವುದನ್ನು ಬಹಿರಂಗ ಪಡಿಸುತ್ತೇನೆ, ಪಕ್ಷೇತರನಾಗಿ ಕಣಕ್ಕಿಳಿಯುವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ತಿಳಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಉತ್ತರ, ದಕ್ಷಿಣ, ಧಾರವಾಡ, ಉಡುಪಿ, ಪುತ್ತೂರು, ಕಾರ್ಕಳ, ಶೃಂಗೇರಿ, ಜಮಖಂಡಿ, ತೇರದಾಳ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಒತ್ತಡ ಬಂದಿದೆ. 

ಪರೇಶ್ ಮೇಸ್ತಾ ಕೇಸ್‌: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ

ಆದರೆ, ಇನ್ನೂ ಕ್ಷೇತ್ರದ ಬಗ್ಗೆ ನಿರ್ಧರಿಸಿಲ್ಲ. ಹಿಂದುತ್ವವನ್ನು ಉಳಿಸಿ ಬೆಳೆಸಲು ನನಗೆ ರಾಜಕೀಯದ ಅಗತ್ಯವಿರುವ ಕಾರಣ ಸ್ಪರ್ಧಿಸುವುದು ಖಚಿತ ಎಂದರು. 2014ರಿಂದ ಬಿಜೆಪಿ ಮೂಲಕ ಪ್ರಯತ್ನ ಮಾಡಿದೆ. ಆದರೆ, ಸ್ಪಂದಿಸದೆ ಅವಮಾನ ಮಾಡಿದರು. ಕಾಂಗ್ರೆಸ್‌, ಜೆಡಿಎಸ್‌ನವರು ಮನೆ ಬಾಗಿಲಿಗೆ ಬಂದರೂ ಸ್ಪರ್ಧಿಸಲಿಲ್ಲ. ಬಿಜೆಪಿ ಅನ್ಯಾಯ ಮಾಡಿದ್ದರಿಂದ ಕೊನೆಯ ಪ್ರಯತ್ನವಾಗಿ ಈಗ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದರು.

click me!