* ಕನ್ಹಯ್ಯ ಕೊಲೆ ವಿರೋಧಿಸಿ ಮೂಡಿಗೆರೆ ಬಂದ್
* ಪೊಲೀಸ್-ಪ್ರತಿಭಟನಾಕಾರರ ಮಧ್ಯೆ ನೂಕುನುಗ್ಗಲು
* ಮುಸಲ್ಮಾನರ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಸಂಕಲ್ಪ
ಚಿಕ್ಕಮಗಳೂರು, (ಜುಲೈ.01): ಉದಯಪುರದ ಟೈಲರ್ ಕನ್ಹಯ್ಯ ಕೊಲೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಪಿಗಳಿಗೆ ಉಗ್ರವಾದ ಶಿಕ್ಷೆ ನೀಡುವಂತೆ ಒತ್ತಾಯಿಸಿ ರಾಜ್ಯದ ವಿವಿಧಡೆ ಪ್ರತಿಭಟನೆ ನಡೆಯುತ್ತಿದೆ.ಇದರ ಭಾಗವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಕನ್ಹಯ್ಯ ಹತ್ಯೆ ವಿರೋಧಿಸಿ ಪಟ್ಟಣ ಬಂದ್ ಗೆ ಕರೆ ನೀಡಲಾಗಿತ್ತು. ಪ್ರತಿಭಟನಾ ಜಾಥಾ ವೇಳೆಯಲ್ಲಿ ಪೊಲೀಸ್ ವರ್ಸಸ್ ಪ್ರತಿಭಟನಾನಿರತರ ನಡುವೆ ವಾಗ್ವಾದಕ್ಕೂ ಕಾರಣವಾಯಿತು.
ಪ್ರತಿಭಟನಾ ಸಭೆಯಲ್ಲಿ ಆಕ್ರೋಶ
ಪ್ರತಿಭಟನಾ ಜಾಥಾ ನಡೆಸಿದ ಬಳಿಕ ಪ್ರತಿಭಟನೆನಿರತರು ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಜಮಾಮಣೆಗೊಂಡರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಿದ ಭಜರಂಗದಳದ ಪ್ರಾಂತೀಯ ಸಂಚಾಲಕ್ ಸಕಲೇಶಪುರ ರಘು ಕನ್ಹಯ್ಯ ಲಾಲ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.ಹಿಂದುಗಳಿಗೆ ಭಯ ಉಂಟು ಮಾಡುವ ಶಕ್ತಿ ಇದೆ. ಅಮಾಯಕ ಟೈಲರ್ ಕನ್ಹಯ್ಯ ಅವರನ್ನು ಹತ್ಯೆ ಮಾಡಲಾಗಿದೆ. ಅಮಾಯಕನ ಹತ್ಯೆಯ ಪ್ರತಿಕಾರವಾಗಿ ನಾವೆಲ್ಲರೂ ಒಂದು ಸಂಕಲ್ಪವನ್ನು ಮಾಡಬೇಕಾಗಿದೆ,ಇದಕ್ಕೆ ಮೂಡಿಗೆರೆ ಪಟ್ಟಣದ ಜನರು ಸಾಕ್ಷಿ ಆಗಬೇಕಾಗಿದ್ದು ಇಂದಿನಿಂದಲೇ ನಾವೆಲ್ಲರೂ ಕೂಡ ಮುಸಲ್ಮಾನರ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಸಂಕಲ್ಪ ಮಾಡಬೇಕೆಂದು ಕರೆಕೊಟ್ಟರು. ಕನ್ಹಯ್ಯ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಭಜರಂಗದಳದ ಮುಖಂಡರು, ವಿಶ್ವಹಿಂದೂ ಪರಿಷತ್, ಶ್ರೀ ಸೇನೆ, ಬಿಜೆಪಿ ಮುಖಂಡರು ಭಾಗವಹಿಸಿದರು..
ಪೊಲೀಸ್ ಮತ್ತು ಪ್ರತಿಭಟನಾಕಾರರ ಮಧ್ಯೆ ನೂಕುನುಗ್ಗಲು
ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕೊಲೆಯನ್ನು ವಿರೋಧಿಸಿ ಬಂದ್ ಗೆ ಕರೆ ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕು ನುಗ್ಗಲು ಉಂಟಾಗಿತ್ತು.ಪಟ್ಟಣದ ಬಂದ್ ಗೆ ಬೆಳಿಗ್ಗೆನಿಂದಲೂ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿದರು. ಮೂಡಿಗೆರೆ ಪಟ್ಟಣದಲ್ಲಿ ಬೆಳಿಗ್ಗೆ 11 ಕ್ಕೆ ಪ್ರತಿಭಟನಾ ಜಾಥಾವನ್ನು ನಡೆಸಲಾಯಿತು. ಈ ವೇಳೆಯಲ್ಲಿ ಪ್ರತಿಭಟನಾ ರ್ಯಾಲಿಯನ್ನು ಎಮ್ ಜಿ ರಸ್ತೆಯಲ್ಲಿ ಸಾಗದಂತೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು, ಆ ವೇಳೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಮಾತಿನ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಬ್ಯಾರಿಕೇಡುಗಳು ಹಾಗೂ ಪೊಲೀಸರನ್ನ ತಳ್ಳಿ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಕನ್ನಯ್ಯ ಕೊಲೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.
ಇಂದು(ಶುಕ್ರವಾರ) ವಿವಿಧ ಹಿಂದೂಪರ ಸಂಘಟನೆಗಳು ಮೂಡಿಗೆರೆ ಬಂದ್ ಗೆ ಕರೆ ನೀಡಿದರು. ಬೆಳಗ್ಗೆನಿಂದ ಸಂಜೆ 6ರವರೆಗೆ ಬಂದ್ ಮಾಡಲು ಮುಂದಾಗಿದ್ದರು.ಮೆರವಣಿಗೆ ಉದ್ಧಕ್ಕೂ ಪ್ರತಿಭಟನಾನಿರತರು ಕೊಲೆ ಆರೋಪಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಆರೋಪಿಗಳನ್ನ ಗಲ್ಲಿಗೇರಿಸುವಂತೆ ಅಗ್ರಹಿಸಿದ್ದಾರು. ಇನ್ನು ಬಂದ್ ವೇಳೆಯೂ ಜನಜೀವನಕ್ಕೆ ಯಾವುದೇ ತೊಂದರೆ ಇಲ್ಲದಂತೆ ಬಂದ್ ಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಶಾಲಾ-ಕಾಲೇಜು, ಆಸ್ಪತ್ರೆ, ಆಟೋ, ಬಸ್ ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ಯಾವುದೇ ತೊಂದರೆ ಇರಲಿಲ್ಲ. ಬಂದ್ ಅಂಗಡಿ-ಮುಂಗಟ್ಟುಗಳ ಮಾಲೀಕರು ಹಾಗೂ ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಹಿಂದೂ ಸಂಘಟನೆಗಳ ಬಂದ್ ಗೆ ಟೈಲರ್ ಅಸೋಸಿಯೇಷನ್ ಕೂಡ ಸಾಥ್ ನೀಡಿತ್ತು. ಪೊಲೀಸರ ವಿರೋಧದ ಮಧ್ಯೆಯೂ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ಮಾಡಿದ ಬಳಿಕ ಪ್ರತಿಭಟನಾಕಾರರು ಶಾಂತಿಯುತ ಮೆರವಣಿಗೆ ಮಾಡಿದರು.