12 ಬೇಡಿಕೆಗಳ ತನಿಖೆಗಾಗಿ ಹೋರಾಟ: ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

By Govindaraj SFirst Published Aug 13, 2022, 9:27 PM IST
Highlights

ಭ್ರಷ್ಟಾಚಾರ ಮಾಡಿದ ಮುಖ್ಯಾಧಿಕಾರಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅವರ ವಿರುದ್ಧ ತನಿಖೆ ನಡೆದಿದ್ದರೂ ತನಿಖೆ ಪ್ರಗತಿ ಹಂತದಲ್ಲಿ ಇದೆ. ಇನ್ನೂ ಮುಗಿದಿಲ್ಲ. ನಮಗೆ ಈ ತನಿಖೆ ಕುರಿತು ಸಹ ಸಂಶಯವಿದೆ. 

ಮುದ್ದೇಬಿಹಾಳ (ಆ.13): ಪಟ್ಟಣದ ಪುರಸಭೆಯ ಆಡಳಿತ ಮಂಡಳಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವು ಶಿವಪುರ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅವರು ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆ ಪುರಸಭೆಯಲ್ಲಿ ಅನೇಕ ಭ್ರಷ್ಟಾಚಾರ ದುರಾಡಳಿತ ಮಾಡಿರುವ ಹಾಗೂ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟವನ್ನು ಧರಣಿ ಸತ್ಯಾಗ್ರಹ ಮೂಲಕ ವಿವಿಧ ಹಂತಗಳಲ್ಲಿ ಮಾಡುತ್ತ ಕಳೆದ 23 ದಿನಗಳಿಂದ ನಡೆಸುತ್ತಲೇ ಬಂದಿದ್ದಾರೆ. ಮಾತ್ರವಲ್ಲದೇ ಸುರಿಯುವ ಮಳೆಯಲ್ಲಿ ಸಹ ಅವರು ಧರಣಿ ಮುಂದುವರಿಸಿದ ಪರಿಣಾಮ ಹೋರಾಟಗಾರ ಮಹಿಬೂಬ ಗೊಳಸಂಗಿ ಆರೋಗ್ಯದಲ್ಲಿ ಏರುಪೇರು ಆಗಿ ಆರೋಗ್ಯ ಹದಗೆಟ್ಟಿದೆ. 

ಇಷ್ಟಾದರೂ ಸಹ ಅವರು ನ್ಯಾಯ ಸಮ್ಮತವಾಗಿ 12 ಬೇಡಿಕೆಗಳ ತನಿಖೆಗೆ ಆಗ್ರಹಿಸಿ ಹೋರಾಟ ಮಾಡಿದರು. ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಭ್ರಷ್ಟಾಚಾರ ಮಾಡಿದ ಮುಖ್ಯಾಧಿಕಾರಿ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅವರ ವಿರುದ್ಧ ತನಿಖೆ ನಡೆದಿದ್ದರೂ ತನಿಖೆ ಪ್ರಗತಿ ಹಂತದಲ್ಲಿ ಇದೆ. ಇನ್ನೂ ಮುಗಿದಿಲ್ಲ. ನಮಗೆ ಈ ತನಿಖೆ ಕುರಿತು ಸಹ ಸಂಶಯವಿದೆ. ಜಿಲ್ಲಾಡಳಿತ ಮೇಲಾಧಿಕಾರಿಗಳು ಯಾರ ಒತ್ತಡಕ್ಕೆ ಸಿಲುಕಿ ತನಿಖೆ ಮುಗಿಸಿ ಭ್ರಷ್ಟಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ತಾವೂ ಮುಂದಾಗುತ್ತಿಲ್ಲ. ಆಡಳಿತ ಮಂಡಳಿಯ ಎಲ್ಲ ಸದಸ್ಯರನ್ನು ತನ್ನ ಕಾಲು ಕಸದಂತೆ ಕಾಣುತ್ತ ಹಿಟ್ಲರ್‌ ಆಡಳಿತ ಮಾಡುತ್ತ ಬಂದ ಸುರೇಖಾ ಬಾಗಲಕೋಟೆ ಪಟ್ಟಣದಲ್ಲಿ ಗುಂಟಾ ಜಾಗಗಳನ್ನು ದಾಖಲಿಸಿ ಉತಾರ ಮಾಡಿ ಕೊಟ್ಟಿದ್ದಾರೆ ದೂರಿದರು.

ಡ್ಯಾಂಗಳಿಂದ ಭಾರೀ ನೀರು ಬಿಡುಗಡೆ: ಉತ್ತರ ಕರ್ನಾಟಕದಲ್ಲಿ ಇನ್ನೂ ಪ್ರವಾಹ ಭೀತಿ

ಸಾರ್ವಜನಿಕ ಸ್ಥಳಕ್ಕೆ ಮೀಸಲಿಟ್ಟಜಾಗವನ್ನು ಪಟ್ಟಣದ ಎರಡು ಸಮಾಜದ ಹೆಸರಿಗೆ ಅನಧಿಕೃತವಾಗಿ ನೊಂದು ಮಾಡಿದ್ದಾರೆ. ತಮ್ಮ ಪತಿಯ ಹೆಸರಿನಲ್ಲಿ ಕಾರ್‌ ಬಾಡಿಗೆ .2.75 ಲಕ್ಷ ತೆಗೆದಿದ್ದಾರೆ ಮತ್ತು ಪುರಸಭೆ ವಕೀಲರ ಹೆಸರನಲ್ಲಿ .5 ಲಕ್ಷ ತಗೆದಿದ್ದಾರೆ. ಉತಾರ ನೀಡುವಲ್ಲಿ ಲಂಚ ಪಡೆಯುತ್ತ ಅನೇಕ ಭ್ರಷ್ಟಾಚಾರ ಮಾಡಿದ್ದಾರೆ. ಮಾತ್ರವಲ್ಲದೆ ಈ ಹಿಂದಿನಿಂದಲೂ ಅವರು ಕರ್ತವ್ಯ ನಿರ್ವಹಿಸಿದ ಇಲಾಖೆಗಳಲ್ಲಿ ಇಂತಹ ಭ್ರಷ್ಟಮಾಡಿದ್ದಾರೆ. ಇವರ ಮೇಲೆ ಲೋಕಾಯುಕ್ತರ ಕೇಸ್‌ ಸಹ ಆಗಿದೆ. ಇಂತಹ ಭ್ರಷ್ಟಾಚಾರ ಮಾಡಿದ ಅಧಿಕಾರಿ ವಿರುದ್ಧ ನಡೆದ ಹೋರಾಟಕ್ಕೆ ಪಟ್ಟಣದ ಸಾರ್ವಜನಿಕರು ಸೇರಿದಂತೆ ಎಲ್ಲ ಸಮಾಜ ಸಂಘಗಳು ಪಕ್ಷಾತೀತವಾಗಿ ಜಾತ್ಯತೀತವಾಗಿ ಬೆಂಬಲಿಸಿದ್ದಾರೆ. ಧರಣಿ ನಿರತರು ಇಂದಿನಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದು, ಅವರ ಆರೋಗ್ಯದಲ್ಲಿ ಏನಾದರೂ ಆದರೆ ಅದಕ್ಕೆ ನೇರ ಹೊಣೆ ಜಿಲ್ಲಾಡಳಿತ ಆಗುತ್ತದೆ ಎಂದು ಎಚ್ಚರಿಸಿದರು.

ಕೂಡಲೇ ತಪ್ಪಿತಸ್ಥ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆ ಅವರನ್ನು ಅಮಾನತ್ತು ಮಾಡಬೇಕು. ಅವರು ಮಾಡಿದ ಭ್ರಷ್ಟಾಚಾರ ತನಿಖೆ ಆಗಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮುದ್ದೇಬಿಹಾಳ ಪುರಸಭೆಗೆ ಮಾಡಿದ ನಷ್ಟವನ್ನು ಅವರಿಂದ ಭರಿಸಿಕೂಳ್ಳಬೇಕು. ಪುರಸಭೆ ಮುಖ್ಯಾಧಿಕಾರಿ ಏಕಪಕ್ಷೀಯವಾಗಿ ಸ್ವಯಂ ಪ್ರೇರಿತ ನಿರ್ಧಾರ ಕೈಗೊಳ್ಳುತ್ತಲೇ ಚುನಾಯಿತ ಆಡಳಿತ ಮಂಡಳಿಯ ಅಧ್ಯಕ್ಷರಿಗಾಗಲಿ, ಉಪಾಧ್ಯಕ್ಷರಿಗಾಗಲಿ ಅಥವಾ ಯಾವುದೇ ಸದಸ್ಯರಿಗಾಗಲಿ ಮಾಹಿತಿ ನೀಡದೇ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಜೂ.26 ರಂದು ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ನಡುವಳಿಕೆ ಪ್ರತಿಯನ್ನು ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿರುವುದಿಲ್ಲ. ಅದರಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರ ಒಪ್ಪಿಗೆ ಪಡೆಯದೇ ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ನಡೆಸಿದ್ದು, ಇದರ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ತಿಳಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ಮುಖಂಡರಾದ ನೀಲಕಂಠರಾವ ನಾಡಗೌಡ, ದಲಿತ ಮುಖಂಡ ಹರೀಶ ನಾಟಿಕಾರ, ರುದ್ರುಗೌಡ ಅಂಗಡಗೇರಿ, ವೈ.ಎಚ್‌.ವಿಜಯಕರ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಯುವ ಮುಖಂಡ ಹರೀಶ ಬೇವೂರ, ಸುರೇಶ ಪಾಟೀಲ, ಸಮೀರ ದ್ರಾಕ್ಷಿ, ಹಣಮಂತ ಭೋವಿ, ಅಲ್ಲಾಭಕ್ಷ ಢವಳಗಿ, ತಾಲೂಕು ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಶೋಭಾ ಶಳ್ಳಗಿ, ಕಮಲಾ ನಾಲತವಾಡ, ಸುಜಾತಾ ಶಿಂಧೆ, ನೀಲಮ್ಮ ಚಲವಾದಿ ಸೇರಿದಂತೆ ಹಲವರು ಇದ್ದರು.

ಮಾರ್ಚ್ ಅಂತ್ಯಕ್ಕೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ

ಕಳೆದ 23 ದಿನಗಳಿಂದ ಸಾಮಾಜಿಕ ನ್ಯಾಯದಡಿಯಲ್ಲಿ ಸಂವಿಧಾನ ಬದ್ದ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪುರಸಭೆ ಎದುರು ಹೋರಾಟ ನೆಡೆಸುತ್ತಿದ್ದಾರೆ. ಕಾರಣ ಈ ಕೂಡಲೇ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರಲ್ಲಿ ಮನವಿ ಮಾಡಿಕೊಂಡರು. ಸಾರ್ವಜನಿಕರ ಮನವಿಗೆ ಸ್ಪಂದಿಸದೇ ಕ್ಯಾರೇ ಎನ್ನದೇ ದಿಢೀರ್‌ನೆ ಕಾರು ಹತ್ತಿ ಹೋಗಿದ್ದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಮಾತ್ರವಲ್ಲದೇ ಇವರೊಂದು ಕೇವಲ ನಾಟಕೀಯ ಮಾಡಲೆಂದು ಮಾಧ್ಯಮದಲ್ಲಿ ಬರವುದುಕ್ಕೋಸ್ಕರ ಭೇಟಿ ನೀಡಿದಂತೆ ಮಾಡಿದ್ದಾರೆ. ಇವರ ವರ್ತನೆಯನ್ನು ತೀವೃವಾಗಿ ಖಂಡಿಸುತ್ತೇನೆ.
-ಕಾಮರಾಜ ಬಿರಾದಾರ ಯುವ ಮುಖಂಡ.

click me!