ಎಐಡಿವೈಓ ಪದಾಧಿಕಾರಿಗಳಿಂದ ಕಾರ್ಮಿಕರ ದಿನದಂದು ಮನೆ ಮನೆಯಿಂದ ಪ್ರತಿಭಟನೆ| ಕೊಪ್ಪಳ ಜಿಲ್ಲಾದ್ಯಂತ ಸಂಘಟನೆಯ ಸದಸ್ಯ ಕಾರ್ಮಿಕರು ಮನೆಯಿಂದಲೇ ಪ್ರತಿಭಟನೆ ನಡೆಸಿದರು| ಕೋವಿಡ್ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡಿರುವ ಕಾರ್ಮಿಕರ ಹಿತ ಕಾಯುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ| ಹೀಗಾಗಿ, ಗೋದಾಮಿನಲ್ಲಿ ಕೊಳೆಯುತ್ತಿರುವ ಅಕ್ಕಿಯನ್ನು ಕಾರ್ಮಿಕರಿಗೆ ವಿತರಣೆ ಮಾಡುವಂತೆ ಒತ್ತಾಯ|
ಕೊಪ್ಪಳ(ಮೇ.02): ಉಗ್ರಾಣದಲ್ಲಿ ಕೊಳೆಯುತ್ತಿರುವ 770 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹಸಿದ ಕಾರ್ಮಿಕರಿಗೆ ವಿತರಣೆ ಮಾಡುವಂತೆ ಆಗ್ರಹಿಸಿ ಎಐಡಿವೈಓ ಸಂಘಟನೆ ಕಾರ್ಮಿಕರ ದಿನಾಚರಣೆಯಂದು ಶುಕ್ರವಾರ ಮನೆ ಮನೆಯಿಂದ ಪ್ರತಿಭಟನೆ ಮಾಡಿದ್ದಾರೆ. ದೇಶವ್ಯಾಪಿ ಪ್ರತಿಭಟನೆ ಮಾಡುವುದಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾದ್ಯಂತ ಸಂಘಟನೆಯ ಸದಸ್ಯ ಕಾರ್ಮಿಕರು ಮನೆಯಿಂದಲೇ ಪ್ರತಿಭಟನೆಯನ್ನು ನಡೆಸಿದರು.
ಕೋವಿಡ್ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡಿರುವ ಕಾರ್ಮಿಕರ ಹಿತ ಕಾಯುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ. ಹೀಗಾಗಿ, ಗೋದಾಮಿನಲ್ಲಿ ಕೊಳೆಯುತ್ತಿರುವ ಅಕ್ಕಿಯನ್ನು ಕಾರ್ಮಿಕರಿಗೆ ವಿತರಣೆ ಮಾಡುವಂತೆ ಒತ್ತಾಯಿಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಮತ್ತು ಕಾರ್ಮಿಕರ ಹಿತ ಕಾಯುವ ಘೋಷಣೆಗಳು ಇರುವ ಫ್ಲೆಕ್ಸ್ ಹಿಡಿದು ಮನೆಯಿಂದ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದರು.
ಗುಜರಾತ್‌ನಲ್ಲಿ ಸಿಲುಕಿದ ಕೊಪ್ಪಳದ ಗುಜರಿ ವ್ಯಾಪಾರಿಗಳು: ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ
ಕೋವಿಡ್ ವಾರಿಯರ್ಸ್‌ಗೆ ಪಿಪಿಇ ಕಿಟ್ ವಿತರಿಸಬೇಕು, ಕೋವಿಡ್ ಪರೀಕ್ಷೆಯನ್ನು ಪ್ರತಿಯೊಬ್ಬರಿಗೂ ನಡೆಸಬೇಕು. ಕೋವಿಡ್‌ನಿಂದ ಕೆಲಸ ಕಳೆದುಕೊಂಡವರ ಕೆಲಸವನ್ನು ಉಳಿಸುವಂತೆ ಮಾಡಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಶರಣು ಗಡ್ಡಿ, ರಾಯಣ್ಣ ಗಡ್ಡಿ, ಮೌಲಾಸಾಬ, ರಮೇಶ ಸೇರಿದಂತೆ ಮೊದಲಾದವರು ವಹಿಸಿದ್ದರು.