ಕಲಘಟಗಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಖಂಡಿಸಿ ಪ್ರತಿಭಟನೆ

By Suvarna NewsFirst Published Nov 5, 2020, 2:26 PM IST
Highlights

ವಿನಯ್‌ ಕುಲಕರ್ಣಿ ಅವರನ್ನ ಸಿಬಿಐ ಅಧಿಕಾರಿಗಳು ಬಂಧಿಸಿರುವುದು ಸರಿಯಲ್ಲ| ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಜೋಗೇಶ್‌ ಗೌಡ ಹತ್ಯೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ| ಸುಮ್ಮನೆ ಅವರ ಹೆಸರು ಕೆಡಿಸುವ ಹುನ್ನಾರ ನಡಿದಿದೆ: ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ|

ಕಲಘಟಗಿ(ನ.05): ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನ ಸಿಬಿಐ ಅಧಿಕಾರಿಗಳು ಬಂಧಿಸಿರುವ ಹಿನ್ನೆಲೆಯಲ್ಲಿ  ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"

ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡರ ಕೊಲೆ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಸಂಬಂಧಪಟ್ಟಂತೆ ವಿನಯ್‌ ಕುಲಕರ್ಣಿ ಅವರನ್ನ ಸಿಬಿಐ ಅಧಿಕಾರಿಗಳು ಬಂಧಿಸಿರುವುದು ಸರಿಯಲ್ಲ. ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಜೋಗೇಶ್‌ ಗೌಡ ಹತ್ಯೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಸುಮ್ಮನೆ ಅವರ ಹೆಸರು ಕೆಡಿಸುವ ಹುನ್ನಾರ ನಡಿದಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಹೇಳಿದ್ದಾರೆ. 

ಸಿಬಿಐ ವಶದಲ್ಲಿ ವಿನಯ್ ಕುಲಕರ್ಣಿ: ಸಿಬಿಐ ರಾಜಕೀಯಕ್ಕೆ ತಲೆ ಬಾಗಬಾರದು, ಡಿಕೆಶಿ

ಪಟ್ಟಣದ ಆಂಜನೇಯ ಸರ್ಕಲ್‌ನಿಂದ ತಹಶೀಲ್ದಾರ್ ಕಚೇರಿ ಅವರಿಗೆ ಪ್ರತಿಭಟನೆ ಮಾಡುತ್ತ ತೆರಳಿ ತಾಲೂಕು ಶಿರಸ್ತೇದಾರ್ ಬಿ ಕೆ ತಾಂಬ್ರೇನವರ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶಂಕರಗಿರಿ ಬಾವನವರ ಶಿವಲಿಂಗ ಮೂಗಣ್ಣವರ  ಲಿಂಗರಡ್ಡಿ  ನಡುವಿನಮನಿ ಗುರು ಬೆಂಗೇರಿ ಸುಭಾಸಗೌಡ  ಪಾಟೀಲ  ಸಂತೋಷ ಲಾಡ್ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ ಮಂಜುನಾಥ ಚಂದುನವರ ಮಹೇಶ ಅಲಗೂರ ಶಂಕರಗೌಡ ಭರಮಗೌಡರ ಸೇರಿದಂತೆ ತಾಲೂಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥರಿದ್ದರು. 
 

click me!