Chikkaballapur: ನಗರಸಭೆಯ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

By Govindaraj SFirst Published May 26, 2022, 10:15 PM IST
Highlights

ನಗರಸಭೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದರೂ ಕೂಡ ನಗರದ ಅಭಿವೃದ್ದಿಗೆ ಶ್ರೀಕಾರ ಹಾಡಲು ಸಾಧ್ಯವಾಗಿಲ್ಲ. ಮಳೆಬಂದರೆ ಸಾಕು ಯುಜಿಡಿ, ಚರಂಡಿಗಳು ತುಂಬಿ ಹರಿಯುತ್ತವೆ.

ವರದಿ: ರವಿಕುಮಾರ್. ವಿ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಮೇ.26): ನಗರಸಭೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದರೂ ಕೂಡ ನಗರದ ಅಭಿವೃದ್ದಿಗೆ ಶ್ರೀಕಾರ ಹಾಡಲು ಸಾಧ್ಯವಾಗಿಲ್ಲ. ಮಳೆಬಂದರೆ ಸಾಕು ಯುಜಿಡಿ, ಚರಂಡಿಗಳು ತುಂಬಿ ಹರಿಯುತ್ತವೆ. ವಾರ್ಡ್‌ಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಇ-ಖಾತೆಗಳ ಕಥೆಯಂತೂ ಹೇಳತೀರದಾಗಿದೆ. ಅಕ್ರಮ ಖಾತೆಗಳ ಹಾವಳಿ ಮಿತಿಮೀರಿದೆ. ಹೀಗೆ ಹಲವು  ಸಮಸ್ಯೆಗಳಿಂದ ಒದ್ದಾಡುತ್ತಿರುವ ನಗರಸಭೆ ಜನವಿರೋಧಿ ನೀತಿ ಖಂಡಿಸಿ ನಗರಸಭೆ ಆವರಣದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ನರಸಿಂಹಮೂರ್ತಿ ನಗರಸಭೆ ಅಧಿಕಾರಿಗಳು ವಾರ್ಡಿನ ಸದಸ್ಯರ ಮಾತಿಗೆ ಬೆಲೆ ನೀಡುತ್ತಿಲ್ಲ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಬೆಳಿಗ್ಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಎಲ್ಲಿ ಕಣ್ಮರೆಯಾಗುತ್ತಾರೋ ದೇವರಿಗೆ ತಿಳಿಯಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕಾಣುವುದೇ ಇಲ್ಲ. ಮೂವ್‌ಮೆಂಟ್ ರಿಜಿಸ್ಟರ್ ಇದೆ ದಾಖಲಾಗಿಲ್ಲ. ಇ- ಖಾತೆಗಳಿಗಾಗಿ ಜನತೆ ನೂರಾರು ಬಾರಿ ಅಲೆಯುವಂತಾಗಿದೆ. ಇವರ ವರ್ತನೆಯಿಂದ ಬೇಸತ್ತು ಪ್ರತಿಭಟನೆಯ ಹಾದಿ ತುಳಿಯುತ್ತಿದ್ದೇವೆ ಎಂದು ದೂರಿದರು. ನಮ್ಮ ಹೋರಾಟ ನಗರದ ಸ್ವಚ್ಚತೆ ಬಗ್ಗೆಯಾಗಿದೆಯೇ ವಿನಃ ರಾಜಕಾರಣದ ಉದ್ದೇಶದಿಂದಲ್ಲ ಎಂದರು. 

Chikkaballapur: ತಾಳಿ ಕಟ್ಟುವ ವೇಳೆ ಮದುವೆ ಮಂಟಪದಿಂದ ವಧು ಎಸ್ಕೇಪ್!

ನಗರಸಭೆ ಕಮೀಷನರ್ ವಿರುದ್ಧ ಆಕ್ರೋಶ: ವಾರ್ಡ್‌ಗಳ ಸಮಸ್ಯೆ ಪರಿಹಾರಕ್ಕೆ ನಗರಸಭೆ ಆಯುಕ್ತರಿಗೆ ದೂರು ಸಲ್ಲಿಸಿದರೂ ಕೂಡ ಏನೂ ಪ್ರಯೋಜನೆ ಆಗುತ್ತಿಲ್ಲ. ವಾರ್ಡಿನ ಅಭಿವೃದ್ದಿ ಬಯಸಿ ಜನತೆ ನಮ್ಮನ್ನು ಆರಿಸಿ ಕಳಿಸಿದ್ದರೂ ಅವರ ಸೇವೆ ಮಾಡಲಾಗುತ್ತಿಲ್ಲ ಎನ್ನುವ ಬೇಸರದಲ್ಲಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಮತ್ತೊಬ್ಬ ‌ನಗರಸಭೆ ಸದಸ್ಯ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದರು. 

ಇ- ಖಾತೆಗೆ ಅಲೆದು‌ ಅಲೆದು ಸುಸ್ತಾದ ಜನರು: ಜಿಲ್ಲಾ ಕೇಂದ್ರದಲ್ಲಿ ಮನೆ ಕಟ್ಟಿಕೊಳ್ಳಲು ದಾಖಲೆಗಳಿಗಾಗಿ ಜನತೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ. ಮೇಲಾಗಿ ಇಲ್ಲಿ ಇ-ಖಾತೆ ಮಾಡಿಸಿಕೊಳ್ಳಲು ಯಮಯಾತನೆ ಪಡಬೇಕಾಗಿದೆ. ವಾರ್ಡ್‌ಗಳಲ್ಲಿರುವ ಸಮಸ್ಯೆಗಳು ಬೆಟ್ಟದಂತೆ ಬೆಳೆಯುತ್ತಿವೆ. ಅಧಿಕಾರಿಗಳ ಅಂಧ ದರ್ಬಾರ್ ಎಗ್ಗು ಸಿಗ್ಗು ಇಲ್ಲದೆ ನಡೆಯುತ್ತಿದೆ. ಅಧ್ಯಕ್ಷರು, ಕಮಿಷನರ್ ಮಾತಿಗೂ ಕೂಡ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ. ಹೀಗಾಗಿ ನಾವು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆಯೇ ವಿನಃ ಇನ್ಯಾವುದೇ ಉದ್ದೇಶದಿಂದ ಅಲ್ಲ ಎಂದು ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು. 

Chikkaballapur: ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು: ಎಂಟಿಬಿ ನಾಗರಾಜ್

ಸಕಾಲದಲ್ಲಿ ‌ಚಿಕ್ಕಬಳ್ಳಾಪುರ ನಂ.1 ಆದರೆ ನಗರಸಭೆಯಲ್ಲಿ ಸಕಾಲದಲ್ಲಿ ‌ಅರ್ಜಿಯೇ ಪಡೆಯಲ್ಲ: ಸಕಾಲ ಅರ್ಜಿ ‌ವಿಲೇವಾರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆದರೆ ಚಿಕ್ಕಬಳ್ಳಾಪುರ ‌ನಗರಸಭೆಯಲ್ಲಿ ಮಾತ್ರ ಜನರು ನೀಡುವ ಅರ್ಜಿಗಳನ್ನು ಸಕಾಲದಲ್ಲಿ ‌ಪಡೆಯುವುದಿಲ್ಲ ಎಂದು ‌ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಇನ್ನೂ ಇತ್ತೀಚೆಗಷ್ಟೆ ನಗರಸಭೆಯಲ್ಲಿ ನಕಲಿ ಮನೆ ನಿರ್ಮಾಣದ ಲೈಸೆನ್ಸ್  ಹಾವಳಿ ಕಂಡುಬಂದಿದ್ದು, ಈ ಬಗ್ಗೆ ತನಿಖೆ ‌ನಡೆಸುವಂತೆ ಆಗ್ರಹಿಸಿದರು.

click me!