
ವರದಿ: ಟಿ. ಮಂಜುನಾಥ, ಹೆಬ್ಬಗೋಡಿ, ಬೆಂಗಳೂರು
ಆನೇಕಲ್ (ಮೇ.26): ಒಂದು ಕಾಲದಲ್ಲಿ ಬೆಂಗಳೂರು ಹಸಿರು ನಗರಿಯಾಗಿತ್ತು. ಇದಕ್ಕೆ ಕಾರಣ ಕೆರೆಗಳು ಹಾಗಾಗಿಯೇ ನಗರಿಯೆಂದು ಕರೆಯುತ್ತಿದ್ದರು. ಆದರೆ ಇಂದು ಕೆರೆ ಕಲ್ಯಾಣಿಗಳು ಕೇವಲ ಬೆರೆಳೆಣಿಕೆಯಷ್ಟು ಮಾತ್ರವೇ ಉಳಿದಿದೆ. ಆ ಉಳಿದಿರುವಂತಹ ಕೆರೆಗಳಲ್ಲೂ ಕೆಲವೊಂದು ಕೆರೆಗಳು ನೀರಿಲ್ಲದೆ ಬರಡಾಗಿ ಪಾಳು ಬಿದ್ದಿವೆ. ಇಲ್ಲವೇ ಮನುಷ್ಯನ ಸ್ವಾರ್ಥದಿಂದ ವಿಷಪೂರಿತ ನೀರು ಮತ್ತು ತ್ಯಾಜಗಳು ಸೇರಿ ಸಂಪೂರ್ಣವಾಗಿ ನಾಶವಾಗಿರುತ್ತೆ. ಹಾಗೆಯೇ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಗ್ರಾಮಗಳಿಗೆ ಜಲಜೀವವಾಗಿದ್ದ ಕೆರೆಯೊಂದು ಕಾರ್ಖಾನೆಗಳ ತ್ಯಾಜ್ಯ ನೀರು ಮತ್ತು ಗ್ರಾಮಗಳ ಒಳಚರಂಡಿ ನೀರು ಸೇರಿ ಕೆರೆ ಸಂಪೂರ್ಣ ಕಲುಷಿವಾಗಿತ್ತು.
ಈ ಕೆರೆಗೆ ಮರುಜೀವ ನೀಡಲು ಜೈವಿಕ ತಂತ್ರಜ್ಞಾನದ ದಿಗ್ಗಜ ಬಯೋಕಾನ್ ಸಂಸ್ಥೆ ಮುಂದಾಗಿದೆ. ಇಂದು ಬಯೋಕಾನ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಕೆರೆ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಾಯ್ತು. ಕೆರೆಯ ಸುತ್ತಲೂ ಗಿಡ ಗೆಂಟೆಗಳು ಮರಗಳು, ಹುಲ್ಲು ಇವೆಲ್ಲಾ ಬೆಳೆದು, ಜೊತೆಗೆ ಒಳಚರಂಡಿ ನೀರು ಸೇರಿ ಕಪ್ಪು ಬಣ್ಣ ಮಾರ್ಪಾಡಾಗಿರೊ ಈ ನೀರನ್ನ ನೋಡುತ್ತಿದ್ದರೇ ಇದು ಕೆರೆಯೇ ಇಲ್ಲವೇ ಕಾರ್ಖಾನೆಗಳಿಂದ ಹೊರಬರುತ್ತಿರುವ ತ್ಯಾಜ್ಯ ನೀರ ಎನಿಸುವಷ್ಟು ಹಾಳಾಗಿದೆ. ಇದೀಗ ಈ ಕೆರೆಗೆ ಪುನರುಜ್ಜೀವನ ಸಿಗುತ್ತಿದೆ.
ಬಿಜೆಪಿ ಮುಖಂಡ ಆತ್ಮಹತ್ಯೆ ಕೇಸ್, ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್
ಇದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯಾರಂಡಹಳ್ಳಿ ಕೆರೆಯ ದೃಶ್ಯಗಳು. ಇಂದು ಸುಮಾರು ಒಂಭತ್ತು ಎಕರೆಗಳ ವಿಶಾಲವಾದ ಈ ಕೆರೆ ಮರು ಜೀವ ಪಡೆಯುತ್ತಿದೆ. ಈ ಕೆರೆಗೆ ಹಲವು ವರ್ಷಗಳಿಂದ ಕಾರ್ಖಾನೆಗಳ ತ್ಯಾಜ್ಯ ನೀರು ಮತ್ತು ಗ್ರಾಮಗಳ ಒಳಚರಂಡಿ ನೀರು ಸೇರಿ ಕೆರೆ ಸಂಪೂರ್ಣ ಕಲುಷಿವಾಗಿತ್ತು. ಯಾವುದೇ ಪ್ರಾಣಿ ಪಕ್ಷಿಗಳು ನೀರನ್ನ ಸೇವಿಸದ ದುಸ್ಥಿತಿಗೆ ತಲುಪಿತ್ತು. ಪರಿಸರದ ಕಾಳಜಿ ಹೊಂದಿರುವ ಜೈವಿಕ ತಂತ್ರಜ್ಞಾನದ ಬಯೋಕಾನ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯ ಒಂದು ಕೋಟಿ ರೂಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಬಯೋಕಾನ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಕೆರೆ ಅಭಿವೃದ್ಧಿಗೆ ಬಯೋಕಾನ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಶಂಕು ಸ್ಥಾಪನೆ ಮಾಡಿದರು. ಸುಮಾರು ವರ್ಷಗಳಿಂದ ಯಾರಂಡಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಜೀವಜಲವಾಗಿದ್ದ ಕೆರೆ ಇಂದು ಸಂಪೂರ್ಣ ಮಲಿನವಾಗಿದೆ. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ಮಳೆ ನೀರಿಗೆ ಪ್ರತ್ಯೇಕ ಕಾಲುವೆ ಹಾಗೂ ಕಲುಷಿತ ನೀರು ನೇರವಾಗಿ ಸಂಸ್ಕರಣ ಘಟಕಕ್ಕೆ ತೇಲಿ ಬಿಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
2 ದಿನ ಬೆಂಗ್ಳೂರಲ್ಲಿ ಕರೆಂಟ್ ಇರಲ್ಲ: ಬಿಸಿಲಿನ ತಾಪಕ್ಕೆ ಸಿಲಿಕಾನ್ ಸಿಟಿ ಜನ ಹೈರಾಣಾಗೋದು ಪಕ್ಕಾ..!
ಇನ್ನು ಕಾರ್ಯಕ್ರಮದಲ್ಲಿ ಬಯೋಕಾನ್ ಸಂಸ್ಥೆಯ ಡಾ.ಅನುಪಮಾಶೆಟ್ಟಿ, ವಿಕ್ರಮ್, ತಂತ್ರಜ್ಞಾನ ಆನಂದ್ ಮಲ್ಲಿಗೆವಾಡ ಸ್ಥಳೀಯ ಬಿಜೆಪಿ ಮುಖಂಡರಾದ ಮುಖಂಡರಾದ ಹರೀಶ್ ರೆಡ್ಡಿ, ಲಕ್ಷ್ಮಿಕಾಂತ್, ಗ್ರಾಮ ಪಂಚಾಯ್ತಿ ಸದಸ್ಯರಾದ ದೀಪಾ ರೆಡ್ಡಿ, ಅಶೋಕ್, ನೇತ್ರಾ ಹರೀಶ್ ರೆಡ್ಡಿ, ಕೊಂಡಾರೆಡ್ಡಿ, ಪಿಳ್ಳಮ್ಮ,ಅಮರನಾರಾಯಣ, ರಮೇಶ್, ಮಂಜುನಾಥ್, ಮರಿಯಪ್ಪ, ನಾರಾಯಣಪ್ಪ. ಜಗನ್ನಾಥ್ ರೆಡ್ಡಿ, ಮರಿರಾಜು ಗ್ರಾಮಸ್ಥರು ಭಾಗವಹಿಸಿದ್ದರು. ಒಟ್ಟಿನಲ್ಲಿ ಹಲವು ವರ್ಷಗಳಿಂದ ಮಲೀನಗೊಂಡಿದ್ದ ಯಾರಂಡಹಳ್ಳಿ ಕೆರೆ ಕೆಲವೇ ದಿನಗಳಲ್ಲಿ ಗತವೈಭವವನ್ನ ಪಡೆದುಕೊಳ್ಳಲಿದೆ.ಮತ್ತೇ ಕೆರೆಗೆ ಅನುಪಯುಕ್ತ ವಸ್ತುಗಳು ಮತ್ತು ವಿಷಯುಕ್ತ ತ್ಯಾಜ್ಯ ನೀರು ಬಿಡದಂತೆ ನಿರ್ವಹಣೆಯನ್ನ ಮಾಡಬೇಕಾದ ಹೊಣೆಯನ್ನ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ನಾಗರೀಕರು ಮಾಡಬೇಕಿದೆ.