ಬೀದರ್‌: ಸನಾತನ ಧರ್ಮದ ರಕ್ಷಣೆ ಪ್ರತಿ ಹಿಂದೂಗಳ ಹೊಣೆ, ಪುಷ್ಪೇಂದ್ರ ಕುಲಶ್ರೇಷ್ಠ

By Kannadaprabha NewsFirst Published Dec 28, 2022, 2:54 PM IST
Highlights

ದೇಶದ ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಸನಾತನ ಸರ್ಕಾರಗಳು ಅ​ಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರು ಯೋಧರಂತೆ ಕೆಲಸ ಮಾಡುವಂತೆ ಕರೆ ಕೊಟ್ಟ ಕುಲಶ್ರೇಷ್ಠ 

ಬೀದರ್‌(ಡಿ.28):  ದೇಶದ ಸನಾತನ ಧರ್ಮ ಅಪಾಯದ ಅಂಚಿನಲ್ಲಿದ್ದು, ಅದರ ರಕ್ಷಣೆ ಪ್ರತಿಯೊಬ್ಬ ಹಿಂದುಗಳ ಆದ್ಯ ಕರ್ತವ್ಯವಾಗಿದೆ ಎಂದು ಖ್ಯಾತ ಚಿಂತನಕಾರ ಪುಷ್ಪೇಂದ್ರ ಕುಲಶ್ರೇಷ್ಠ ಕರೆ ನೀಡಿದರು. ನಗರದ ಗುಂಪಾ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಸಿ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಜಾಗರಣ ಸಮಿತಿ ಜಿಲ್ಲಾ ಘಟಕ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಯಾವ ಜಾತಿ ಅಥವಾ ಧರ್ಮಿಯರೆ ಆಗಿರಲಿ ನಮ್ಮ ಜಾತಿ, ಮತ ಕೇವಲ ನಮ್ಮ ದ್ವಾರಕ್ಕೆ ಸೀಮಿತವಾಗಿರಬೇಕು. ಸಮಾಜದಲ್ಲಿ ಬಂದಾಗ ನಾವು ಹಿಂದೂಗಳು, ಭಾರತೀಯರು, ಸನಾತನಿಗಳು, ದೇಶ ರಕ್ಷಕರು ಎಂಬ ಭಾವನೆ ನಮ್ಮಲ್ಲಿ ಜಾಗೃತಗೊಳ್ಳಬೇಕು ಎಂದರು.

ಸನಾತನ ಎಂದರೆ ವಿಜ್ಞಾನ ಎಂದರ್ಥ. ಸನಾತನಕ್ಕೆ ತನ್ನದೆ ಆದ ಇತಿಹಾಸ, ಪರಂಪರೆ ಇದೆ. ಆದರೆ, ಈ ದೇಶದ ಅನ್ನ ನೀರು ಹಾಗೂ ವಾಯು ಸೇವಿಸಿ ದೇಶದಲ್ಲಿ ಪಠಿಸುವ ವಂದೆ ಮಾತರಂ ಎಂಬ ಗೀತೆಗೆ ಅವಮಾನ ಮಾಡುವ ಅಥವಾ ಅದನ್ನು ಪಾಲಿಸದ ದೇಶದ್ರೋಹಿ ಜಿಹಾದಿಗಳಿಗೆ ಯಾವ ಇತಿಹಾಸ, ಸಂಸ್ಕೃತಿಯಿಲ್ಲ. ಒಂದು ಧರ್ಮದ ಹೆಸರಲ್ಲಿ ಪಕ್ಷ ಕಟ್ಟಿ ಕೋಮುವಾದ ಸೃಷ್ಟಿಮಾಡುವುವರಿಂದ ನಾವು ಎಚ್ಚರದಿಂದಿರಬೇಕೆಂದರು.

Latest Videos

ಬೀದರ್‌: 4 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅಸ್ತು, ಕೇಂದ್ರ ಸಚಿವ ಖೂಬಾ

ಓರ್ವ ಜೈನ ಧರ್ಮದ ಸಹೋದರರಾದ ವಿಶ್ಣುಶಂಕರ ಜೈನ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ವಾರಣಾಸಿಯ ಒಂದು ಮಸೀದಿಯಲ್ಲಿ ಶಿವಲಿಂಗವಿದೆ. ಇಲ್ಲಿ ಶಿವಮಂದಿರ ಇತ್ತು. ಅಲ್ಲಿ ನಂದಿಯ ಪೂಜೆ ನಡೆಯುತ್ತಿತ್ತು ಎಂಬುದನ್ನು ವಾದಿಸಿದಕ್ಕಾಗಿಯೇ 2018ರ ಜುಲೈ 31ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾ​ಧೀಶರಾದ ನ್ಯಾ.ಅರುಣ ಮಿಶ್ರಾ ಹಾಗೂ ನ್ಯಾ.ಅಮಿತಾಬ್‌ ರೋಹಿಬ್‌ ಅವರು ತೀರ್ಪು ನೀಡಿ, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿರುವ ಮಸೀದಿಗಳು, ಗೋರಿಗಳು, ಸಮಾಧಿ​ಗಳನ್ನು ಆಯಾ ರಾಜ್ಯ ಸರ್ಕಾರಗಳು ತೆರವುಗೊಳಿಸಬೇಕೆಂದು ತೀರ್ಪು ನೀಡಿದರು.

ಆದರೆ ಈ ವಿಷಯ ಯಾವ ಸರ್ಕಾರಗಳು ಈ ದೇಶದ 85 ಕೋಟಿ ಸನಾತನಿಯರಿಗೆ ಮಾಹಿತಿ ನೀಡದೇ ಇರುವುದು ವಿಷಾದನೀಯ ಸಂಗತಿ. ನಾವು ನಿಜವಾದ ಸನಾತನಿಗಳಾಗಿ ಬದುಕಲು ಸರ್ಕಾರ ಈರುಳ್ಳಿ, ಪೆಟ್ರೋಲ್‌ ಬೆಲೆ ಜಾಸ್ತಿ ಮಾಡಿದೆ ಎಂದು ಕಿರುಚಾಡಬೇಡಿ. ಈ ದೇಶದ ಕೇಂದ್ರ ಹಾಗೂ ಎಲ್ಲ ರಾಜ್ಯಗಳಲ್ಲಿ ಸನಾತನ ಸರ್ಕಾರಗಳು ಅ​ಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರು ಯೋಧರಂತೆ ಕೆಲಸ ಮಾಡುವಂತೆ ಕುಲಶ್ರೇಷ್ಠ ಕರೆ ಕೊಟ್ಟರು.

ಸಿದ್ಧರಾಢ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಜಾಗರಣ ಸಮಿತಿಯ ಅಧ್ಯಕ್ಷ ಶಂಕರ್‌ರಾವ್‌ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಜಕುಮಾರ ಬಿಜ್ಜಾ ವೇದಿಕೆಯಲ್ಲಿದ್ದರು. ರಾಷ್ಟ್ರೀಯ ಜಾಗರಣ ಸಮಿತಿಯ ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಪಾಟೀಲ ಗಾದಗಿ ವಂದಿಸಿದರು. ಮೇಹಕರ, ತಡೋಳಾ ಹಾಗೂ ಡೊಣಗಾಪುರ ಮಠದ ರಾಜೇಶ್ವರ ಶಿವಾಚಾರ್ಯರು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ವಿದ್ಯಾಗಿರಿ ಮಹಾರಾಜರು, ಡಾ. ಶೈಲೇಂದ್ರ ಬೆಲ್ದಾಳೆ, ಗುರುನಾಥ ಕೊಳ್ಳುರ್‌, ಸಿದ್ದು ಪಾಟೀಲ ಹುಮನಾಬಾದ್‌, ಶಿವಶರಣಪ್ಪ ವಾಲಿ, ಶಿವು ಲೋಖಂಡೆ ಇತರರು ಉಪಸ್ಥಿತರಿದ್ದರು.

click me!