Kolar: ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ಸೈಕೋ ಹಲ್ಲೆ: ಭಯಭೀತರಾದ ವಿದ್ಯಾರ್ಥಿಗಳು

By Sathish Kumar KH  |  First Published Dec 28, 2022, 2:33 PM IST

ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ತನ್ನ ಪಾಡಿಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕ ವೆಂಕಟಶಿವ ಎಂಬುವರರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿದ್ದಾನೆ.


ಕೋಲಾರ (ಡಿ.28): ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ತನ್ನ ಪಾಡಿಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕ ವೆಂಕಟಶಿವ ಎಂಬುವರರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿದ್ದಾನೆ. ತಲೆಗೆ ಏಕಾಏಕಿ ಹಲ್ಲೆ ಮಾಡಿದವನನ್ನು ಸೈಕೋ ಎಂದು ಗುರುತಿಸಲಾಗಿದ್ದು, ತಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೂರಿಗೇಪಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳಿಗೆ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದರು. ಇತರೆ ತರಗತಿ ಕೊಠಡಿಗಳಲ್ಲಿಯೂ ಪಾಠ ಬೇರೆ ಶಿಕ್ಷಕರು ಪಾಠ ಮಾಡುತ್ತಿದ್ದರು. ಆದರೆ, ಶಾಲೆಯ ಕೊಠಡಿಯೊಳಗೆ ನುಗ್ಗಿದ ಸೈಕೋ ಏಕಾ-ಏಕಿ ಪಾಠ ಮಾಡುತ್ತಿದ್ದ ಶಿಕ್ಷನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಶಿಕ್ಷಕರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ರಕ್ತಸ್ರಾವ ಉಂಟಾಗಿತ್ತು. ಮಕ್ಕಳು ಭಯಭೀತರಾಗಿದ್ದು, ಹೊರಗೆ ಹೋಗಿ ಸಹ ಶಿಕ್ಷಕತರನ್ನು ಕರೆದುಕೊಂಡು ಬಂದಿ ಗಾಯಗೊಂಡಿದ್ದ ಶಿಕ್ಷಕರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. 

Tap to resize

Latest Videos

ರಾಯಲ್ಪಾಡು ಪೊಲೀಸ್‌ ಠಾಣೆ ವ್ಯಾಪ್ತಿ: ಇನ್ನು ಹಲ್ಲೆ ಮಾಡಿದ ವ್ಯಕ್ತಿಯನಗ್ನು ಕೂರಿಗೇಪಲ್ಲಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡ ಶಿಕ್ಷಕನನ್ನು ಸಹ ಶಿಕ್ಷಕರು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯು ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!