ಪ್ರವಾಹಕ್ಕೆ ಸಿಲುಕಿದ್ದ ಮಂಗಗಳ ರಕ್ಷಣೆ| ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದಲ್ಲಿ ನಡೆದ ಘಟನೆ| ಕೋತಿಗಳನ್ನ ರಕ್ಷಿಸಿದ ಅರಣ್ಯ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ| ಪ್ರವಾಹ ನೋಡಿ ನೋಡಿ ಭೀತಿಗೊಂಡಿದ್ದ ಮಂಗಗಳು|
ಬಾದಾಮಿ(ಆ.20): ಮಂಗಳವಾರ ರಾತ್ರಿಯಿಂದ ಮಲಪ್ರಭಾ ನದಿ ಪ್ರವಾಹದಲ್ಲಿ ಸಿಲುಕ್ಕಿದ್ದ ಸುಮಾರು 15ಕ್ಕೂ ಹೆಚ್ಚು ಕೋತಿಗಳನ್ನು (ಮಂಗ) ರಕ್ಷಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಚಿಕ್ಕನಸಬಿ ಗ್ರಾಮದ ನದಿ ಪಕ್ಕದ ಗಿಡವೊಂದರಲ್ಲಿ ಎಂದಿನಂತೆ ಕೋತಿಗಳು ರಾತ್ರಿ ಮಲಗಿಕೊಂಡಿವೆ. ನವಿಲು ತೀರ್ಥ ಜಲಾಶಯದಿಂದ ಕಳೆದ ನಾಲ್ಕೈದು ದಿನಗಳಿಂದ ಮಲಪ್ರಭಾ ನದಿಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಆ ಮರವು ಜಲಾವೃತವಾಗಿದೆ. ಬೆಳಗ್ಗೆ ಕೋತಿಗಳು ಅದನ್ನು ನೋಡಿ ಭೀತಿಗೊಂಡಿವೆ.
ಮಲಪ್ರಭೆ ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ನವಿಲು ರಕ್ಷಣೆ
ಬೆಳಗ್ಗೆ 10 ಗಂಟೆವರೆಗೂ ಕಾಯ್ದು ಕುಳಿತಿವೆ. ಅಷ್ಟಾದರೂ ನೀರು ಕಡಿಮೆಯಾಗದ್ದರಿಂದ ಒಂದೊಂದಾಗಿ ಆ ಮರದಿಂದ ಪ್ರವಾಹದ ನೀರಿನಲ್ಲಿಯೇ ಜಿಗಿದು ಪಾರಾಗಾಲು ಯತ್ನಿಸಿವೆ. ಇದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಕೋತಿಗಳನ್ನು ರಕ್ಷಿಸಿದ್ದಾರೆ.