ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಮುಳುಗಡೆ| ಐವರು ಮೀನುಗಾರರ ರಕ್ಷಣೆ| ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊನ್ನಾವರ ನಡುವಣ ಧಾರೇಶ್ವರ ಬಳಿ ಅರಬ್ಬಿ ಸಮುದ್ರದಲ್ಲಿ ನಡೆದ ಘಟನೆ|
ಕುಮಟಾ(ಆ.21): ಇಲ್ಲಿನ ಕುಮಟಾ ಹೊನ್ನಾವರ ನಡುವಣ ಧಾರೇಶ್ವರ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಎಲ್ಲ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ವಿಜಯಲಕ್ಷ್ಮೀ ಹೆಸರಿನ ಬೋಟ್ ಇದಾಗಿದ್ದು, ಕುಮಟಾ ತಾಲೂಕಿನ ಕಿಮಾನಿಯ ಮೋಹನ್ ಹರಿಕಾಂತ್‌ಗೆ ಸೇರಿದ್ದಾಗಿದೆ. ಬೋಚ್ ಡ್ರೈವರ್ ಸೇರಿದಂತೆ ಐವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.
ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ
ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಯಿತು. ಸಮೀಪದಲ್ಲಿದ್ದ ಬೋಟ್‌ನವರು ಎಲ್ಲ ಐವರು ಮೀನುಗಾರರನ್ನು ರಕ್ಷಿಸಿ, ಅಪಾಯದಿಂದ ಪಾರು ಮಾಡಿದರು. ಮುಳುಗಿದ ಬೋಟನ್ನು ಸಹ ತೀರಕ್ಕೆ ಎಳೆದು ತರಲಾಗಿದೆ.