ಒಟಿಎಸ್ ಕೊಟ್ಟರೂ ಬೆಂಗ್ಳೂರಲ್ಲಿ ಏರದ ಆಸ್ತಿ ತೆರಿಗೆ ಸಂಗ್ರಹ: ಕೋಟ್ಯಂತರ ರೂ. ಬಾಕಿ!

By Kannadaprabha News  |  First Published Nov 26, 2024, 12:21 PM IST

ಒಟಿಎಸ್ ಅಡಿಯಲ್ಲಿ ದಂಡ ಮತ್ತು ಬಡ್ಡಿ ರಹಿತವಾಗಿ ಬಾಕಿ ತೆರಿಗೆ ಪಾವತಿಸಲು ಇನ್ನೂ ಐದು ದಿನಗಳ ಮಾತ್ರ ಬಾಕಿ ಉಳಿದಿವೆ. ಅಷ್ಟರೊಳಗೆ ತೆರಿಗೆ ಬಾಕಿ ಉಳಿಸಿಕೊಂಡವರು ಪಾವತಿಸಬೇಕು. ಡಿ.1ರಿಂದ ದಂಡ ಮತ್ತು ಬಡ್ಡಿ ಸಹಿತವಾಗಿ ತೆರಿಗೆ ವಸೂಲಿ ಮಾಡಲಾಗುವುದು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್


ವಿಶ್ವನಾಥ ಮಲೇಬೆನ್ನೂರು 

ಬೆಂಗಳೂರು(ನ.26):  ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡವರಿಗೆ 'ಒನ್ ಟೈಮ್ ಸೆಟಲ್‌ಮೆಂಟ್' (ಒಟಿಎಸ್) ಯೋಜನೆಯಡಿ ಬಡ್ಡಿ, ದಂಡ ಮನ್ನಾ ಮಾಡಿದರೂ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ 2.32 ಲಕ್ಷ ಆಸ್ತಿ ಮಾಲೀಕರು 373 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಒಟ್ಟಾರೆ ಆಸ್ತಿ ತೆರಿಗೆ ಸಂಗ್ರಹ ನಾಲ್ಕು ಸಾವಿರ ಕೋಟಿ ರುಪಾಯಿ ದಾಟಿಲ್ಲ. 

Latest Videos

undefined

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ಆಸ್ತಿ ತೆರಿಗೆ ಮೇಲೆ ವಿಧಿಸಲಾಗುತ್ತಿದ್ದ ದುಪಟ್ಟು ದಂಡ ಹಾಗೂ ಬಡ್ಡಿಯನ್ನು ಈ ಯೋಜನೆಯಡಿ ರಿಯಾಯಿತಿಯನ್ನು ಎಂಟು ತಿಂಗಳು ನೀಡಲಾಗಿದೆ. ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿದಾರರಿಗೆ ನೀಡಲಾಗುವ ಶೇಕಡ 5ರಷ್ಟು ರಿಯಾಯಿತಿಯನ್ನು ಜೂನ್ ವರೆಗೆ ನೀಡಲಾಗಿತ್ತು. ಈವರೆಗೆ ಸುಮಾರು 23700 ಕೋಟಿ ಮಾತ್ರ ಆಸ್ತಿ ತೆರಿಗೆ ವಸೂಲಿಯಾಗಿದೆ.  ಆರ್ಥಿಕ ವರ್ಷದ ಅಂತ್ಯದ ಮಾರ್ಚ್‌ ವೇಳೆ 5210 ಕೋಟಿ ವಸೂಲಿ ಮಾಡುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ. 

Bengaluru: ರಾಜಧಾನಿಯಲ್ಲಿ ಸಿಗ್ತಿಲ್ಲ ಜಾಗ, 250 ಮೀಟರ್‌ ಎತ್ತರದ ಸ್ಕೈಡೆಕ್‌ ಸ್ಥಳ ಮತ್ತೆ ಬದಲು?

2360 ಕೋಟಿ ವಸೂಲಿ: 

ಆರ್ಥಿಕ ವರ್ಷದ ಆರಂಭದಲ್ಲಿ 3.95 ಲಕ್ಷ ಆಸ್ತಿ ಮಾಲೀಕರು ₹734 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಕಳೆದ ಎಂಟು ತಿಂಗಳಲ್ಲಿ 1.64 ಲಕ್ಷ ಆಸ್ತಿ ಮಾಲೀಕರು ಮಾತ್ರ ಒಟಿಎಸ್ ಯೋಜನೆ ಬಳಕೆ ಮಾಡಿಕೊಂಡು ₹360 ಕೋಟಿ ಮಾತ್ರ ಬಾಕಿ ಮೊತ್ತ ಪಾವತಿ ಮಾಡಿದ್ದಾರೆ. 

6,400 ಮಳಿಗೆಗಳಿಗೆ ಬೀಗ: 

ಆಸ್ತಿ ತೆರಿಗೆ ಪಾವತಿ ಮಾಡದ ಕಾರಣಕ್ಕಾಗಿ ಈವರೆಗೆ 6381 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಿ ವಸೂಲಿ ಮಾಡುವ ಕೆಲಸ ಮಾಡಿದ್ದಾರೆ. ಜತೆಗೆ ಅತಿ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಸತಿ ಹಾಗೂ ಇನ್ನಿತರೆ ಆಸ್ತಿಗಳ ಮಾಲೀಕರ 82 ಸಾವಿರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿದೆ.

₹600 ಕೋಟಿ ಹೆಚ್ಚುವರಿ ವಸೂಲಿ: 

ಬಿಬಿಎಂಪಿ ಕಳೆದ ವರ್ಷ ಯಾವುದೇ ರಿಯಾಯಿತಿ ಯೋಜನೆ ಜಾರಿಗೊಳಿಸದೇನವೆಂಬರ್ ವೇಳೆಗೆ 3,075 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿತ್ತು. ಈ ಬಾರಿ ಬಟಿಎಸ್ ಯೋಜನೆ ಹಾಗೂ ಮೂರು ತಿಂಗಳು ಆಸ್ತಿ ತೆರಿಗೆ ಮೇಲೆ ಶೇ.5ರಷ್ಟು ರಿಯಾಯಿತಿ ನೀಡಿದರೂ ಈವರೆಗೆ ₹3,684 ಕೋಟಿ ಸಂಗ್ರಹಿಸಿದೆ. ಕಳೆದ ವರ್ಷದ ಈ ವೇಳೆಗೆ ಹೋಲಿಕೆ ಮಾಡಿದರೆ ಸುಮಾರು 600 ಕೋಟಿ ಅಷ್ಟೇ ಹೆಚ್ಚುವರಿಯಾಗಿ ಸಂಗ್ರಹಿಸಿದೆ.

ಒಟಿಎಸ್ ಲಾಭ ಪಡೆಯಲು 6 ದಿನ ಬಾಕಿ 

ಒನ್‌ಟೈಮ್ ಸೆಟ್ಲಮೆಂಟ್ (ಒಟಿಎಸ್) ಯೋಜನೆ ನವೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಡಿಸೆಂಬರ್ 1ರಿಂದ ಆಸ್ತಿ ತೆರಿಗೆ ಪಾವತಿ ಮಾಡಲು ಮುಂದಾದರೆ, ಆಸ್ತಿ ತೆರಿಗೆ ಒಟ್ಟು ಮೊತ್ತಕ್ಕೆ ಸರಿಯಾಗಿ ದಂಡ ಮೊತ್ತ ಹಾಗೂ ಬಡ್ಡಿ ಸೇರಿಸಿ ಪಾವತಿ ಮಾಡಬೇಕಾಗಲಿದೆ.

ಮಹದೇವಪುರದಲ್ಲಿ ಜೆಸಿಬಿ ಘರ್ಜನೆ: 4 ಅಂತಸ್ತಿನ ಅನಧಿಕೃತ ಕಟ್ಟಡ ತೆರವುಗೊಳಿಸಿದ ಬಿಬಿಎಂಪಿ

ತೆರಿಗೆ ಬಾಕಿದಾರರಿಂದ ಬಡ್ಡಿ ಸಹಿತ ದಂಡ ವಸೂಲಿ 

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ದಂಡ ಮತ್ತು ಬಡ್ಡಿ ರಹಿತವಾಗಿ ಬಾಕಿ ತೆರಿಗೆ ಪಾವತಿಸಲು ಜಾರಿಗೊಳಿಸಲಾಗಿದ್ದ ಒನ್ ಟೈಂ ಸೆಟಲ್‌ಮೆಂಟ್ (ಒಟಿಎಸ್) ಅವಧಿ ನ.30ಕ್ಕೆ ಮುಗಿಯಲಿದ್ದು, ಡಿ.1ರಿಂದ ಬಾಕಿ ಉಳಿಸಿಕೊಂಡವರ ಆಸ್ತಿಗಳ ಬಳಿ ತೆರಳಿ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಒಟಿಎಸ್ ಅಡಿಯಲ್ಲಿ ದಂಡ ಮತ್ತು ಬಡ್ಡಿ ರಹಿತವಾಗಿ ಬಾಕಿ ತೆರಿಗೆ ಪಾವತಿಸಲು ಇನ್ನೂ ಐದು ದಿನಗಳ ಮಾತ್ರ ಬಾಕಿ ಉಳಿದಿವೆ. ಅಷ್ಟರೊಳಗೆ ತೆರಿಗೆ ಬಾಕಿ ಉಳಿಸಿಕೊಂಡವರು ಪಾವತಿಸಬೇಕು. ಡಿ.1ರಿಂದ ದಂಡ ಮತ್ತು ಬಡ್ಡಿ ಸಹಿತವಾಗಿ ತೆರಿಗೆ ವಸೂಲಿ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ವಲಯ ಅಧಿ ಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.  ಪ್ರಸಕ್ತ ಸಾಲಿನಲ್ಲಿ 5,700 ಕೋಟಿ ಆಸ್ತಿ ತೆರಿಗೆ ವಸೂಲಿಯ ಗುರಿ ಹೊಂದಲಾಗಿದೆ. ಅದರಂತೆ ಈವರೆಗೆ ₹3,751 ಕೋಟಿ ತೆರಿಗೆ ವಸೂಲಿಯಾ ಗಿದೆ ಎಂದು ತಿಳಿಸಿದರು.

click me!