ನಮ್ಮದು ಬರಪೀಡಿತ ತಾಲೂಕು, ನಮ್ಮ ಭಾಗದ ಮಕ್ಕಳು ಗುಣಾತ್ಮಕ ಶಿಕ್ಷಣ ಕಲಿಕೆಯಿಂದ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅಭಿಪ್ರಾಯಪಟ್ಟರು.
ಮಧುಗಿರಿ : ನಮ್ಮದು ಬರಪೀಡಿತ ತಾಲೂಕು, ನಮ್ಮ ಭಾಗದ ಮಕ್ಕಳು ಗುಣಾತ್ಮಕ ಶಿಕ್ಷಣ ಕಲಿಕೆಯಿಂದ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 3.5 ಕೋಟಿ ರು. ವೆಚ್ಚದ ನೂತನ ಕೊಠಡಿ ಹಾಗೂ ಗ್ರಂಥಾಲಯ ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
undefined
ನಮ್ಮ ಕ್ಷೇತ್ರ ಅತ್ಯಂತ ಹಿಂದುಳಿದ ಪ್ರದೇಶ ಈ ಭಾಗದ ಜನರು ಅಭಿವೃದ್ಧಿ ಹೊಂದಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಪ್ರಸ್ತುತ ಈ ಕಾಲೇಜಿನಲ್ಲಿ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದು, ಬಹುತೇಕ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳೇ ಅಧಿಕವಿದ್ದಾರೆ. ಆದ್ದರಿಂದ ಹೆಚ್ಚುವರಿ ಕೊಠಡಿಗಳ ಹಾಗೂ ಗ್ರಂಥಾಲಯದ ಅವಶ್ಯಕತೆ ಮನಗಂಡ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಿದ್ದಾರೆ. ಕಟ್ಟಡ ಕಟ್ಟಲು ಇಲ್ಲಿ ಬೆಳೆದು ನಿಂತಿರುವ ಮರಗಳನ್ನುತೆರವುಗೊಳಿಸುವ ಅನಿರ್ವಾಯತೆ ಎದುರಾದರೆ ಮಾತ್ರ ತೆರವುಗೊಳಿಸಿ, ಆದರೆ, 1ಮರ ಕಡಿದರೆ ಅದಕ್ಕೆ ಪ್ರತಿಯಾಗಿ ಕಾಲೇಜು ಆವರಣದಲ್ಲಿ 10ಪಟ್ಟು ಮರಗಳನ್ನು ನೆಟ್ಟು ಪೋಷಿಸಲು ಕ್ರಮ ವಹಿಸಬೇಕು ಎಂದರು.
ಕಾಲೇಜು ಆವರಣದ ಸುತ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತವರಣ ನಿರ್ಮಿಸಬೇಕು.ಈಗಾಗಲೇ ಸಚಿವರ ಆಶಯದಂತೆ ಬೈಪಾಸ್ ಬಳಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಬೇಗ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉನ್ನತ ತಾಂತ್ರಿಕ ಶಿಕ್ಷಣವೂ ದೊರೆಯಲಿದೆ. ಈ ಸಲದ ಪ್ರಥಮ ವರ್ಷದ 650ಕ್ಕೂ ಹೆಚ್ಚು ಬಿಎ ವಿದ್ಯಾರ್ಥಿಗಳಿಗೆ ಸಚಿವರು ತಮ್ಮ ಸ್ವಂತ ಕರ್ಚಿನಲ್ಲಿ ಉಚಿತವಾಗಿ ಅತಿ ಶೀಘ್ರದಲ್ಲೇ ಉಚಿತವಾಗಿ ಲ್ಯಾಪ್‌ಟ್ಯಾಪ್ ನೀಡಲಿದ್ದಾರೆ ಎಂದು ಎಂಎಲ್‌ಸಿ ರಾಜೇಂದ್ರ ಮಾಹಿತಿ ನೀಡಿದರು.
ಆರ್ಥಿಕ ಕೊರತೆಯಿಂದ ಹೊರ ಬರಲು ಹೆಣ್ಣುಮಕ್ಕಳು ಗುಣಟ್ಟದ ಶಿಕ್ಷಣ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ಕುಟುಂಬಗಳ ಹಿತರಕ್ಷಣೆಗೆ ಶಿಕ್ಷಣವೊಂದೇ ರಹದಾರಿ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಈ ಕಾಲೇಜು ಕಟ್ಟಡ ನಿರ್ಮಾಣಕ್ಕೆ 3.5 ಕೋಟಿ ಅನುದಾನ ತಂದು ಕೊಠಡಿ ಮತ್ತು ಗ್ರಂಥಾಲಯ ಕಟ್ಟಲು ಶ್ರಮಿಸಿದ್ದಾರೆ. ಆದ ಕಾರಣ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ವಿದ್ಯಾವಂತರಾಗಿ. ಗುತ್ತಿಗೆದಾರರು ಗುಣಟ್ಟದ ಕಾಮಗಾರಿ ಮಾಡಬೇಕು. ಇದರಲ್ಲಿ ರಾಜಿ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ತುಮುಲ್ ಮಾಜಿ ಅಧ್ಯಕ್ಷ ಬಿ. ನಾಗೇಶ್‌ಬಾಬು, ಕಾಲೇಜು ಪ್ರಾಂಶುಪಾಲ ಪ್ರೊ. ಬಾಳಪ್ಪ, ಕೆಎಂಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡರಾಜು, ಸದಸ್ಯ ಲಾಲಪೇಟೆ ಮಂಜುನಾಥ್, ಮುಖಂಡರಾದ ತುಂಗೋಟಿ ರಾಮಣ್ಣ, ಎಂ.ಇ. ಕರಿಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಮುರುಳೀಧರ, ಉಪನ್ಯಾಸಕರಾದ ಮಂಜುನಾಥ್, ಸುರೇಶ್, ಕೆ.ಟಿ. ಸ್ವಾಮಿ, ನಾಗರಾಜು, ಜೆ. ರಾಮು, ವಿಜಯಲಕ್ಷ್ಮೀ, ರಂಜಿತಾ, ಕೆ. ರಹಮತ್, ಗುತ್ತಿಗೆದಾರ ಸಂದೀಪ್ ಸೇರಿದಂತೆ ಅನೇಕರಿದ್ದರು.