2019 ರ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ ಕುರಿತು ವೈಚಾರಿಕ ಸಮಾವೇಶ

By Web DeskFirst Published Feb 12, 2019, 10:02 PM IST
Highlights

ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನೆನಪಿನ ದಿನಾಚರಣೆ ಅಂಗವಾಗಿ 'ಕೃಷಿ ಬಿಕ್ಕಟ್ಟು ಹಾಗೂ ಯುವಜನರ ತಲ್ಲಣಗಳು' ಮತ್ತು 2019 ರ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ ಕುರಿತು ವೈಚಾರಿಕ ಸಮಾವೇಶ ಮತ್ತು ಪುಸ್ತಕ ಬಿಡುಗಡೆಯನ್ನು ಫೆ. 13 ರಂದು ಹಮ್ಮಿಕೊಳ್ಳಲಾಗಿದೆ. 

ಬೆಂಗಳೂರು (ಫೆ. 12): ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನೆನಪಿನ ದಿನಾಚರಣೆ ಅಂಗವಾಗಿ 'ಕೃಷಿ ಬಿಕ್ಕಟ್ಟು ಹಾಗೂ ಯುವಜನರ ತಲ್ಲಣಗಳು' ಮತ್ತು 2019 ರ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ ಕುರಿತು ವೈಚಾರಿಕ ಸಮಾವೇಶ ಮತ್ತು ಪುಸ್ತಕ ಬಿಡುಗಡೆಯನ್ನು ಫೆ. 13 ರಂದು ಹಮ್ಮಿಕೊಳ್ಳಲಾಗಿದೆ. 

ಫೆಬ್ರುವರಿ 13, ರಂದು  ಬುಧವಾರ  ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಸಮಾವೇಶ ನಡೆಯಲಿದೆ. .

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ವೈಚಾರಿಕ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೆಳಗ್ಗೆ 11 ರಿಂದ 3.45ರವರೆಗೆ ಉದ್ಘಾಟನಾ ಗೋಷ್ಠಿ ನಡೆಯಲಿದೆ. ಬದಲಾಗುತ್ತಿರುವ ಕೃಷಿ ಬಿಕ್ಕಟ್ಟಿನ ಪರಿಸ್ಥಿತಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಚಿಂತನೆಗಳ ಕುರಿತು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಮಾತನಾಡುವರು.

ಎಂಡಿಎನ್‌ ನೆನಪು ಮತ್ತು ಪ್ರೊ.ಕೆ.ಸಿ.ಬಸವರಾಜ್‌ ಬರೆದಿರುವ ವಿಶ್ವ ರೈತ ಸಂತ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುಸ್ತಕವನ್ನು ಚುಕ್ಕಿ ನಂಜುಂಡಸ್ವಾಮಿ ಬಿಡುಗಡೆ ಮಾಡಲಿದ್ದಾರೆ. ದೇವನೂರು ಮಹಾದೇವ, ಕೆ.ಟಿ.ಗಂಗಾಧರ್‌, ಪ್ರೊ.ಕೆ.ಸಿ.ಬಸವರಾಜ್‌ ಚಾಮರಸ ಮಾಲಿ ಪಾಟೀಲ್‌, ಸಿದ್ದಲಿಂಗಯ್ಯ ನುಡಿನಮನ ಸಲ್ಲಿಸುವರು. ಯೋಗೇಂದ್ರ ಯಾದವ್‌, ಎಸ್‌.ಆರ್‌.ಹಿರೇಮಠ್‌, ಅವಿತ್‌ ಷಾ, ರಾಘವೇಂದ್ರ ಕುಷ್ಠಗಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.  ಸುನೀತಾ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 

ಸ್ಥಳ : ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಂಗಳೂರು

click me!