ಬೆಂಗಳೂರು: ಇಬ್ಬರು ಮಹಿಳೆಯರ ಕಾಟಕ್ಕೆ ಯುವಕ ಆತ್ಮಹತ್ಯೆಗೆ ಶರಣು

Published : Feb 12, 2019, 06:39 PM ISTUpdated : Feb 14, 2019, 11:05 AM IST
ಬೆಂಗಳೂರು: ಇಬ್ಬರು ಮಹಿಳೆಯರ ಕಾಟಕ್ಕೆ ಯುವಕ ಆತ್ಮಹತ್ಯೆಗೆ ಶರಣು

ಸಾರಾಂಶ

ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯರ ಕಿರುಕುಳಕ್ಕೆ ಯುವ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆರೋಪಿಸಲಾಗಿದೆ.

ಬೆಂಗಳೂರು, [ಫೆ.12]: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಯುವಕನೊಬ್ಬ ಪಿ.ಜಿ.ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಫೆ.9ರಂದು ಯುವಕ ತನ್ನ ಕೋಣೆಯಲ್ಲಿದ್ದ ಸೀಲಿಂಗ್ ಫಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಇನ್ನಿಬ್ಬರು ರೂಮ್ ಮೇಟ್ ಗಳು ಕಾಲೇಜು ಮುಗಿಸಿ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. 

ಪ್ರೇಯಸಿ ಮನೆಯವರ ಕಿರುಕುಳ: ಯುವಕ ಆತ್ಮಹತ್ಯೆ

 ಕಲಬುರಗಿ ಜಿಲ್ಲೆಯ ಜೇವರ್ಗಿ ,ಮೂಲದ ಅತೀಶ್ ಎಸ್. ನಾಯಕ್ ನೇಣಿಗೆ ಶರಣಾದ ಯುವಕ. ಈತ ಬೆಂಗಳೂರಿನ ಹಾರಿಝಾನ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ಕಾಡುಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಶ್ರೀರಾಮ್ ಪಿಜಿನಲ್ಲಿ ವಾಸಿಸಿದ್ದನು.

ಯುವಕನಿಗೆ ಸಾಮಾಜಿಕ ತಾಣದಲ್ಲಿ ಪರಿಚಯವಾಗಿದ್ದ ಮಹಿಳೆಯರು ದಿನ ನಿತ್ಯ ಚಾಟ್ ಮಾಡುತ್ತಿದ್ದರು. ಕಡೆಗೊಮ್ಮೆ ಅವರು ಯುವಕನ ಬಳಿ ಹಣದ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗಿದ್ದಾನೆಂದು ಆತನ ಪೋಷಕರು ಆರೋಪಿಸಿದ್ದಾರೆ.

PREV
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ