ಹುಷಾರಿಲ್ಲ ಎಂದು ಶನಿವಾರ ತರಬೇತಿ ಕೇಂದ್ರದಿಂದ ಹೊರ ಹೋಗಿದ್ದ ಪ್ರೊಬೇಷನರಿ ಎಸ್ಐ ಶವವಾಗಿ ಪತ್ತೆಯಾದ್ದಾರೆ. ಈ ಬಗ್ಗೆ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಕಲಬುರಗಿ, [ಜ.06]: ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ಪ್ರೊಬೇಷನರಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಶಂಕ್ರಪ್ಪ(30) ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಕಳೆದ 9 ತಿಂಗಳಿಂದ ತರಬೇತಿ ಪಡೆಯುತ್ತಿದ್ದ ಸೇಡಂ ತಾಲೂಕಿನ ನಿವಾಸಿ ಬಸವರಾಜ್ ಹುಷಾರಿಲ್ಲ ಎಂದು ಶನಿವಾರ ತರಬೇತಿ ಕೇಂದ್ರದಿಂದ ಹೊರಗೆ ತೆರಳಿದ್ದರು.
ಆದ್ರೆ ಇಂದು [ಭಾನುವಾರ] ಕಲಬುರಗಿಯ ರಾಮಮಂದಿರ ಬಳಿ ಶವವಾಗಿ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಅಶೋಕ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
ತರಬೇತಿ ಕೇಂದ್ರದಲ್ಲಿ ಆಸ್ಪತ್ರೆಯ ವ್ಯವಸ್ಥೆ ಇಲ್ಲ. ತರಬೇತಿಗಳಿಗೆ ಹುಷಾರಿಲ್ಲದಾಗ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡೆಸುತ್ತೇವೆ. ಇಲ್ಲವಾದರೆ, ತರಬೇತಿ ಕೇಂದ್ರದ ವಾಹನದಲ್ಲೇ ಚಿಕಿತ್ಸೆಗೆ ಕಳುಹಿಸುತ್ತೇವೆ.
ಆದರೆ, ನಿನ್ನೆ ತರಬೇತಿ ಕೇಂದ್ರದಿಂದ ಹೊರಹೋದ ಅವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ತರಬೇತಿ ಕೇಂದ್ರದ ಪೊಲೀಸ್ ಅಧಿಕಾರಿ ಸವಿತಾ ಹೂಗಾರ್ ಘಟನೆ ಬಗ್ಗೆ ವಿವರಿಸಿದ್ದಾರೆ.
ಬೆಳಗ್ಗೆ 11:30 ರ ಸಮಯದಲ್ಲಿ ರಾಮಂಮದಿರ ಬಳಿ ಶವ ಪತ್ತೆಯಾಗಿದೆ. ಬೆಳಗ್ಗೆಯಿಂದ ಸಾರ್ವಜನಿಕರು ನೋಡಿದ್ದಾರೆ. ಆದರೆ, ಕುಡಿದು ಬಿದ್ದಿದ್ದಾರೆ ಎಂದು ಸುಮ್ಮನಾಗಿದ್ದಾರೆ ಎಂದು ಎಸ್ಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.