'ಅವಕಾಶ ಸಿಕ್ರೆ ಸಿದ್ದರಾಮಯ್ಯ ಬಿಜೆಪಿಗೆ ಬರಲು ರೆಡಿ'

By Web Desk  |  First Published Dec 3, 2018, 5:05 PM IST

ಅವರಂಥ ಆಶವಾದಿ ರಾಜಕಾರಣಿ ಈ ದೇಶದಲ್ಲಿ ಇನ್ನೊಬ್ಬರಿಲ್ಲ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಕಲಬುರಗಿ, [ಡಿ.03]: ನನಗೆ ಸಿದ್ರಾಮಯ್ಯ ನಡುವೆ ಬಹಳ ಲವ್ ಇದೆ.  ಅದಕ್ಕಾಗಿಯೇ ಅವರು ನನ್ನ ಬಗ್ಗೆ ಸಲ್ಲದ ಮಾತಾಡುತ್ತಾರೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇಂದು [ಸೋಮವಾರ] ಬರ ಅಧ್ಯಯನಕ್ಕೆಂದು ಕಲಬುರಗಿಗೆ ಆಗಮಿಸಿದ್ದ ಈಶ್ವರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ,  ನನ್ನ ಕತ್ತರಿಸಿದ್ರೂ ನಾನು ಬಿಜೆಪಿ ಬಿಡೊಲ್ಲ. ಆದ್ರೆ ಸಿದ್ರಾಮಯ್ಯ ಹಂಗಲ್ಲ.ಅವಕಾಶ ಸಿಕ್ರೆ ಬಿಜೆಪಿಗೆ ಬರಲು ರೆಡಿ ಆಗ್ತಾರೆ ಎಂದು ವಾಗ್ದಾಳಿ ನಡೆಸಿದರು.

Tap to resize

Latest Videos

ಅವರಂಥ ಆಶವಾದಿ ರಾಜಕಾರಣಿ ಈ ದೇಶದಲ್ಲಿ ಇನ್ನೊಬ್ಬರಿಲ್ಲ. ಇದನ್ನು ನಾನು ಹೇಳಿದ್ರೆ ನನ್ನ ಕೆಟ್ಟದಾಗಿ ಬೈತಾರೆ.  ಬಿಜೆಪಿ ಗಂಗಾ ನದಿ ಇದ್ದಂತೆ.  ಎಂತಹ ಕೆಟ್ಟ, ಕೊಳೆತವರು ಬಂದ್ರೂ ಶುದ್ಧ ಮಾಡುವ ಶಕ್ತಿ ಬಿಜೆಪಿಗಿದೆ ಎಂದರು.

click me!