ಕಲಬುರಗಿ: ಅನುಮಾನಾಸ್ಪದ ರೀತಿಯಲ್ಲಿ ವೈನ್‌ಶಾಪ್ ಮಾಲೀಕನ ಶವ ಪತ್ತೆ

By Web Desk  |  First Published Dec 12, 2018, 2:18 PM IST

ಕಲಬುರಗಿ ಬಳಿಯ ರೈಲ್ವೆ ಹಳಿ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ವೈನ್‌ಶಾಪ್ ಮಾಲೀಕನ ಶವ ಪತ್ತೆಯಾಗಿದೆ.


ಕಲಬುರಗಿ, [ಡಿ.12]: ನಗರದ ಕೋರಂಟಿ ಹನುಮಾನ್ ದೇವಸ್ಥಾನದ ಸಮೀಪ ರೈಲ್ವೆ ಹಳಿ ಮೇಲೆ ಪೂರ್ಣಿಮಾ ವೈನ್ಸ್ ಮಾಲೀಕನ ಮೃತ ದೇಹ ಪತ್ತೆಯಾಗಿದೆ.

 ದತ್ತು ಗುತ್ತೇದಾರ್(45) ಕಲಬುರಗಿ ನಗರದ ಖೂಬಾ ಪ್ಲಾಟ್ ನಿವಾಸಿ ಎಂದು ಗುರುತಿಸಲಾಗಿದೆ. ದತ್ತು ಗುತ್ತೇದಾರ್ ದೇಹ ಛಿದ್ರವಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾನೋ ಅನ್ನೋದು ಮಾತ್ರ ಸ್ಪಷ್ಟವಾಗಿಲ್ಲಾ. 

Tap to resize

Latest Videos

ಕೆಲವರು ಆತ್ಮಹತ್ಯೆ ಅಂದ್ರೆ, ಇನ್ನು ಕೆಲವರು ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಮೃತ ಪಟ್ಟಿದ್ದಾರೆ ಎಂದು ಹೇಳಿತ್ತಿದ್ದಾರೆ. ಈ ಬಗ್ಗೆ ವಾಡಿ‌ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!