ಮನೆ ಗೋಡೆ ಮೇಲೆ ಪಾಕಿಸ್ತಾನ ಜಿಂದಾಬಾದ್, ಪ್ರಧಾನಿ ಮೋದಿ ವಿರುದ್ಧ ಕೂಡಾ ಅವಾಚ್ಯ ಶಬ್ದ ಬರಹ ಬರೆದ ದುಷ್ಕರ್ಮಿಗಳು| ಕಲಬುರಗಿ ನಗರದಲ್ಲಿ ನಡೆದ ಘಟನೆ| ಗೋಡೆ ಮೇಲೆ ಬರಹ ಬರೆದು ಪರಾರಿಯಾದ ದುಷ್ಕರ್ಮಿಗಳು| ಬರಹ ಅಳಿಸಿ ಹಾಕಿದ ಪೊಲೀಸರು|
ಕಲಬುರಗಿ(ಮಾ.01): ಕಿಡಿಗೇಡಿಗಳು ಮನೆ ಗೋಡೆ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿರುವ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್ ಹಾಗೂ ಪ್ರಧಾನಿ ಮೋದಿ ವಿರುದ್ಧ ಕೂಡಾ ಅವಾಚ್ಯ ಶಬ್ದಗಳನ್ನ ಬರೆದಿದ್ದಾರೆ.
ನಗರದ ಸಾತ್ ಗುಂಬಜ್ ಬಳಿ ಇರುವ ಕಿಶನರಾವ್ ಹಾಗರಗುಂಡಗಿ ಎಂಬುವರ ಮನೆಯ ಗೋಡೆಯ ಮೇಲೆ ದುಷ್ಕರ್ಮಿಗಳು ದೇಶದ್ರೋಹದ ಬರಹ ಬರೆದಿದ್ದಾರೆ. ಶನಿವಾರ ರಾತ್ರಿ ದುಷ್ಕರ್ಮಿಗಳು ಗೋಡೆಯ ಮೇಲೆ ದೇಶದ್ರೋಹದ ಬರಹ ಬರೆದು ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಬರಹ ಅಳಿಸಿ ಹಾಕಿದ್ದಾರೆ. ನಗರದ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇತ್ತೀಚೆಗಷ್ಟೇ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮೂಲಕ ಪೊಲೀಸರ ಅತಿಥಿಯಾಗಿದ್ದರು. ಇದಾದ ಬಳಿಕ ಬೆಂಗಳೂರಿನಲ್ಲಿ ಅಮೂಲ್ಯಾ ಲಿಯೋನಾ ಹಾಗೂ ಆರ್ದ್ರಾ ಎಂಬ ಯುವತಿಯರು ಕೂಡ ಪಾಕ್ ಪರ ಘೋಷಣೆ ಕೂಗಿದ್ದರು.