ಜನಪರ ಸಂಘಟನೆಗಳಲ್ಲಿರುವ ಕನ್ನಡಪರ ಚೇತನಗಳೊಟ್ಟಿಗೆ ಸೇರಿ ಈ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರತಿಭಟನೆ, ಸತ್ಯಾಗ್ರಹ, ಧರಣಿಗೆ ಯಾರ ನೇತೃತ್ವವೂ ಇಲ್ಲ, ಯಾವ ಪಕ್ಷದ ಧ್ವಜವೂ ಇಲ್ಲ, ಯಾವ ಸಿದ್ಧಾಂತಗಳೂ ಇಲ್ಲ. ಇದು ಯಾವುದ ಸರ್ಕಾರದ ಪರವೂ ಅಲ್ಲ, ಯಾವುದೇ ಸರ್ಕಾರದ ವಿರೋಧವೂ ಅಲ್ಲ.
ಮೈಸೂರು(ಫೆ.13): ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆಯ ಪಾಲು ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಮೈಸೂರಿನ ಕನ್ನಡಪರ ಮನಸ್ಸುಗಳು ಪ್ರತಿಭಟನೆಗೆ ಮುಂದಾಗಿವೆ.
ಇದೆ ಫೆಬ್ರವರಿ 21ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಫೆಬ್ರವರಿ 23ರ ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೆ 48 ಗಂಟೆ ಶಾಂತಿಯುತ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿವೆ.
ಈವರೆಗೆ ಕೇಂದ್ರದಿಂದ ರಾಜ್ಯಕ್ಕೆ 1.87 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ಬರಬೇಕಿದೆ ಎಂದು ಎಷ್ಟೇ ಮನವಿ ಮಾಡಿದರೂ, ಬೊಬ್ಬೆ ಹೊಡೆದರೂ, ದೆಹಲಿಗೇ ತೆರಳಿ ಪ್ರತಿಭಟನೆ ದಾಖಲಿಸಿದರೂ, ಕನ್ನಡಿಗರಿಗೆ ಸಲ್ಲಬೇಕಾದ ಹಣ ಸಲ್ಲಿಕೆಯಾಗುತ್ತಿಲ್ಲ.
ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ನಿಂದ ಪ್ರತಿಭಟನೆ ನಾಟಕ: ಬಿ.ವೈ.ವಿಜಯೇಂದ್ರ
ಈ ಹಿನ್ನೆಲೆಯಲ್ಲಿ ಜನಪರ ಸಂಘಟನೆಗಳಲ್ಲಿರುವ ಕನ್ನಡಪರ ಚೇತನಗಳೊಟ್ಟಿಗೆ ಸೇರಿ ಈ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರತಿಭಟನೆ, ಸತ್ಯಾಗ್ರಹ, ಧರಣಿಗೆ ಯಾರ ನೇತೃತ್ವವೂ ಇಲ್ಲ, ಯಾವ ಪಕ್ಷದ ಧ್ವಜವೂ ಇಲ್ಲ, ಯಾವ ಸಿದ್ಧಾಂತಗಳೂ ಇಲ್ಲ. ಇದು ಯಾವುದ ಸರ್ಕಾರದ ಪರವೂ ಅಲ್ಲ, ಯಾವುದೇ ಸರ್ಕಾರದ ವಿರೋಧವೂ ಅಲ್ಲ ಎಂದು ಪತ್ರಕರ್ತ ಟಿ.ಗುರುರಾಜ್, ನೆಲೆ-ಹಿನ್ನೆಲೆಯ ಗೋಪಾಲ್, ಹೋರಾಟಗಾರರಾದ ಉಗ್ರ ನರಸಿಂಹೇಗೌಡ, ಅಹಿಂದ ಶಿವರಾಂ, ಮೋಹನಕುಮಾರ್ ಗೌಡ, ಸವಿತಾ ಪ. ಮಲ್ಲೇಶ್, ಸಂತೋಷ್, ಸುರಭಿ, ಜಗದೀಶ್ ಸೂರ್ಯ, ಜಗನ್ನಾಥ್, ಜಿ.ಆರ್. ಮೋಹನ್ ಕುಮಾರ್, ಹರೀಶ್ ಕುಮಾರ್, ಹಿರಿಯ ರಂಗಕರ್ಮಿಗಳಾದ ಕೃಷ್ಣಪ್ರಸಾದ್ ಹೇಳಿದ್ದಾರೆ.