ಖಾಸಗಿ ಆಸ್ಪತ್ರೆಯೊಂದು ಕೊರೋನಾ ರೋಗಿಗೆ ಹಾಕಿದ ಬಿಲ್ ನೋಡಿದ್ರೆ ಎಂತವರಾದ್ರೂ ತಲೆ ತಿರುಗಿ ಬೀಳಿವಂತಿದೆ.. ಅದೆಷ್ಟು ಮೊತ್ತಾ..?
ಚಿಕ್ಕಮಗಳೂರು (ಸೆ18): ಕೋವಿಡ್ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರು. ಲೂಟಿಗಿಳಿದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿರುವ ಹೊತ್ತಲ್ಲೇ ನಗರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್ ರೋಗಿಗೆ ಸುಮಾರು 11 ಲಕ್ಷ ರುಪಾಯಿ ಚಿಕಿತ್ಸೆ ವೆಚ್ಚದ ಬಿಲ್ ವಿಧಿಸಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದ ನಂಜುಂಡಪ್ಪ ಅವರನ್ನು ಆ.24ರಂದು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೋವಿಡ್ ದೃಢಪಟ್ಟಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಸೆ.11ರಂದು ಮೃತಪಟ್ಟಿದ್ದರು.
ಈ ವೇಳೆ ಆಸ್ಪತ್ರೆ ಮತ್ತು ಮೆಡಿಕಲ್ ವೆಚ್ಚ .11 ಲಕ್ಷ ರುಪಾಯಿ ನೀಡಬೇಕು ಇಲ್ಲವಾದರೆ ಮೃತದೇಹ ನೀಡುವುದಿಲ್ಲ ಎಂದು ಹೇಳಿದ್ದರಿಂದ ಕುಟಂಬಸ್ಥರು ಹಣ ಪಾವತಿಸಿದ್ದಾರೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮೃತರ ಸಂಬಂಧಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದು ಹಲವು ಆಸ್ಪತ್ರೆಗಳಲ್ಲಿ ಬ್ಯುಸಿನೆಸ್ ಅಂತೆ ಆಗಿದ್ದು, ರೋಗಿಗಳ ಬಳಿ ಲಕ್ಷ ಲಕ್ಷ ಹಣವನ್ನು ಕೀಳಲಾಗುತ್ತಿದೆ.