ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನನ್ನ ಸಹೋದರ ಎಂದು ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷ ರಾಜೂಗೌಡ ಹೇಳಿದ್ದಾರೆ.
ಶಿವಮೊಗ್ಗ (ಸೆ.17): ಸಚಿವ ಈಶ್ವರಪ್ಪ ಬಗ್ಗೆ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷ ರಾಜೂಗೌಡ ಬಗ್ಗೆ ಅಪಾರ ಪ್ರೀತಿ ಪ್ರೇಮ ತೋರುವ ಮೂಲಕ ಮತ್ತೊಮ್ಮೆ ಅಣ್ಣ-ತಮ್ಮಂದಿರ ಸಂಬಂಧವನ್ನ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಸಭಾಂಗಳದಲ್ಲಿ ಕರ್ನಾಟಕ ಒಳಚರಂಡಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಪರಿಶೀಲನ ಸಭೆಯ ನಂತರ ಈಶ್ವರಪ್ಪನವರನ್ನ ಎಲ್ಲದಕ್ಕಿಂತ ಹೆಚ್ಚು ನಮ್ಮಣ್ಣ ಎಂದು ಹೇಳಿ ಸಭೆಯಲ್ಲಿ ಹೇಳಿದರು.
ಈಶ್ವರಪ್ಪ ನನಗೆ ಸಚಿವರೂ ಶಾಸಕರಿಗಿಂತ ಹೆಚ್ಚು ನಮ್ಮಣ್ಣನಾಗಿದ್ದಾರೆ. ನಿಗಮಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ನಾನು ಅಧಿಕಾರ ಸ್ವೀಕರಿಸಬಾರದು ಎಂದು ತೀರ್ಮಾನಿಸಿದ್ದೆ. ಆ ವೇಳೆ ಅಣ್ಣೌವರು ಒಂದು ಫೋನ್ ಮಾಡಿ ನೋಡು ಒಳ್ಳೆಯ ಅವಕಾಶ ಸಿಕ್ಕಿದೆ ಸದುಪಯೋಗ ಪಡಿಸಿಕೊ. ಮುಂದೆ ಅವಕಾಶ ಬೆಟ್ಟದಂತೆ ಬರುತ್ತದೆ. ಜನಸೇವೆ ಮಾಡು ಎಂದು ಹೇಳಿದರು.
'ಜೀವನದ ಕೊನೆವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರ್ತೀನಿ' ...
ಇದರಿಂದ ನಿಗಮದ ಅಧ್ಯಕ್ಷನಾಗಿ ನಗರದ ಜನತೆಗೆ ಕುಡಿಯುವ ನೀರು ಕೊಡುವ ಪುಣ್ಯದ ಕೆಲಸ ಮಾಡುತ್ತಿದ್ದೇನೆ. ಈ ಮೊದಲು ಸಚಿವನಾಗಿದ್ದೆ ಈಗ ನಿಗಮದ ಅದ್ಯಕ್ಷ ಎಂದು ಡಿಮೋಷನ್ ಅಲ್ಲ.
ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಮುಂದೆ ನನ್ನ ಜೆಲಸ ನೋಡಿ ಸಿಎಂ ಮತ್ತು ಅಣ್ಣನವರೇ ಮಂತ್ರಿ ಮಾಡಬೇಕು. ಕೊರೊನಾ ಸಂಕಷ್ಟ , ಸರ್ಕಾರದ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಗಮದ ಅಧ್ಯಕ್ಷ ಸ್ಥಾನ ಗುರುತಿಸಿ ಕೊಟ್ಟಿದ್ದೆ ಹೆಚ್ಚು ಎಂದು ರಾಜೂ ಗೌಡ ಹೇಳಿದರು.