ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ : ಯುವಕನಿಗೆ ಗಂಭೀರ ಗಾಯ

By Suvarna News  |  First Published Sep 17, 2020, 5:11 PM IST

ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಯುವಕನ ಜೇಬಿನಲ್ಲಿಯೇ  ಮೊಬೈಲ್ ಸ್ಫೋಟಗೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 


ಶಿವಮೊಗ್ಗ (ಸೆ.17): ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡು ಯುವಕ ಗಾಯಗೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಪ್ಪಗಡ್ಡೆಯ ಗ್ರಾಮದ  ಬಳಿ ಘಟನೆ ನಡೆದಿದೆ. 

Tap to resize

Latest Videos

ನೀವು ಖರೀದಿಸಬಹುದಾದ 5 ಅತ್ಯುತ್ತಮ ಪವರ್ ಬ್ಯಾಂಕ್! ...

ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ. ಈ ವೇಳೆ ತವನಂದಿಯ ಶರತ್ (22) ಎಂಬ ಯುವಕ ಗಾಯಗೊಂಡಿದ್ದಾನೆ. 

ಮೊಬೈಲ್ ಸ್ಫೋಟದಿಂದ ಗಾಬರಿಗೊಂಡ ಯುವಕ ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.   

click me!