ಕಲಬುರಗಿ ಜೈಲಲ್ಲೂ ರಾಜಾತಿಥ್ಯ: ಗಾಂಜಾ ಹೊಡೆಯುತ್ತ ಸೆಲ್ಫಿಗೆ ಪೋಸ್‌ ಕೊಟ್ಟ ಕೈದಿಗಳು!

By Kannadaprabha News  |  First Published Oct 15, 2024, 12:14 PM IST

ಬೇರೆ, ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಾದ ವಿಶಾಲ, ಸಾಗರ ಹಾಗೂ ಸೋನು ಎಂಬ ಕೈದಿಗಳು ಜೈಲಿನ ಒಳಗಡೆ ರಾಜ್ಯಾತಿಥ್ಯ ಅನುಭವಿಸುತ್ತಿರುವುದು ಅನಾವರಣವಾಗಿದೆ. ಈ ಮೂವರೂ ಸ್ಮಾರ್ಟ್ ಫೋನ್ ಬಳಸಿ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಗಾಂಜಾ ಹೊಡೆಯುತ್ತ ಸೆಲಿಗೆ ಪೋಸ್ ನೀಡಿದ್ದಾರೆ.
 
ಕಲಬುರಗಿ(ಅ.15): ಬೆಂಗಳೂರಿನ ಪರಪ್ಪನ ಅಗ್ರ ಹಾರದಲ್ಲಿರುವ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಕೊಲೆ ಆರೋಪಿ ನಟ ದರ್ಶನ್ ಆಪ್ತ ಸಹಾಯಕ ನಾಗರಾಜನನ್ನು ಕಲಬುರಗಿಗೆ ಶಿಫ್ಟ್ ಮಾಡಲಾಗಿತ್ತು. 

ಇದೀಗ ಕಲಬುರಗಿ ಕಾರಾಗೃಹದಲ್ಲಿಯೂ ಅದೇ ಮಾದರಿಯಲ್ಲಿ ಕೈದಿಗಳಿಗೆ ಸಕಲ ಸೌಲಭ್ಯಗಳು ದೊರಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ನಗರದಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗಳ ಹೈ-ಫೈ ಜೀವನದ ಹಲವು ಫೋಟೋಗಳು ಹಾಗೂ ವಿಡಿಯೋ ವೈರಲ್ ಆಗಿದ್ದು, ಜೈಲಲ್ಲಿ ಹಣ ಕೊಟ್ಟರೆ ಸ್ಮಾರ್ಟ್ ಫೋನ್, ಗಾಂಜಾ, ಮದ್ಯ ಸೇರಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸಂಗತಿಯನ್ನು ಸಾರಿ ಹೇಳುತ್ತಿವೆ. 

Tap to resize

Latest Videos

undefined

ಕಲಬುರಗಿ: ದಕ್ಷ ಅಧಿಕಾರಿಗಳಿಗೆ ಬಿಜೆಪಿ ಮುಖಂಡ ಮಣಿಕಂಠ ಕಿರುಕುಳ

ಬೇರೆ, ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಾದ ವಿಶಾಲ, ಸಾಗರ ಹಾಗೂ ಸೋನು ಎಂಬ ಕೈದಿಗಳು ಜೈಲಿನ ಒಳಗಡೆ ರಾಜ್ಯಾತಿಥ್ಯ ಅನುಭವಿಸುತ್ತಿರುವುದು ಅನಾವರಣವಾಗಿದೆ. ಈ ಮೂವರೂ ಸ್ಮಾರ್ಟ್ ಫೋನ್ ಬಳಸಿ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಗಾಂಜಾ ಹೊಡೆಯುತ್ತ ಸೆಲಿಗೆ ಪೋಸ್ ನೀಡಿದ್ದಾರೆ.

ದರ್ಶನ್ ಆಪ್ತ ನಾಗರಾಜ್‌ಗೂ ಜೈಲಲ್ಲಿ ಎಲ್ಲ ವ್ಯವಸ್ಥೆಗಳು ಆಗಿವೆಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ, ಜಿಲ್ಲಾಧಿಕಾರಿಯವರು ಕಲಬುರಗಿ ಜೈಲಿನಲ್ಲಿ ರಾಜಾತಿಥ್ಯ ಇರುವುದನ್ನು ಅಲ್ಲಗಳೆದಿದ್ದಾರೆ.

click me!