ನಟ ದರ್ಶನ್ ಅಭಿಮಾನಿಗಳು ಸಿಡಿಸಿದ ಪಟಾಕಿ ಶಬ್ಧದಿಂದ ಶ್ರವಣ ಶಕ್ತಿ ಕಳ್ಕೊಂಡ ಸಾಹಿತಿ ಚನ್ನಬಸಪ್ಪ!

By Girish Goudar  |  First Published Oct 15, 2024, 9:08 AM IST

ಬೆಂಗಳೂರಿನಲ್ಲಿ ನನ್ನ ಮನೆ ಪಕ್ಕದಲ್ಲೇ ನಟ ದರ್ಶನ್‌ ಮನೆ ಇದೆ. ಹುಟ್ಟು ಹಬ್ಬಕ್ಕೆ ಬರುವ ಅಭಿಮಾನಿಗಳು ನಮ್ಮ ಮನೆಯ ಎದುರೂ ಜಮಾವಣೆಗೊಂಡಿರುತ್ತಾರೆ. ದರ್ಶನ್ ಜನ್ಮ ದಿನಕ್ಕೆ ಸಿಡಿಸಿದ ಸಿಡಿಮದ್ದಿನಿಂದ ನನ್ನ ಶ್ರವಣ ಶಕ್ತಿ ಕಳೆದುಕೊಂಡೆ ಎಂದು ತಮ್ಮ ಶ್ರವಣ ಶಕ್ತಿ ಕಳೆದುಕೊಂಡ ಬಗ್ಗೆ ಹೇಳಿಕೊಂಡ ಹಿರಿಯ ಸಾಹಿತಿ ಚನ್ನಬಸಪ್ಪ 
 


ಗದಗ(ಅ.15): ನಟ ದರ್ಶನ್ ಅಭಿಮಾನಿಗಳು ಸಿಡಿಸಿದ ಪಟಾಕಿ ಶಬ್ಧದಿಂದ ನನ್ನ ಶ್ರವಣ ಶಕ್ತಿ ಕಳೆದುಕೊಂಡೆ ಎಂದು ಸ್ವತಃ ಹಿರಿಯ ಸಾಹಿತಿ ಗೊ. ರು ಚನ್ನಬಸಪ್ಪ ಅವರು ಹೇಳಿಕೊಂಡಿದ್ದಾರೆ.  

ನಿನ್ನೆ(ಸೋಮವಾರ)  ಗದಗ ನಗರದಲ್ಲಿ ನಡೆದ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆರನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಗೊ. ರು ಚನ್ನಬಸಪ್ಪ ಅವರು,  ಸಭಿಕರೊಂದಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

ವೇದಿಕೆ ಮೇಲೆ ಇದ್ದವರೊಂದಿಗೆ ಸರಿಯಾಗಿ ಮಾತ್ನಾಡೋದಕ್ಕೆ ಆಗ್ತಿಲ್ಲ. ನನ್ನ ಶ್ರವಣ ದೋಷದಿಂದಾಗಿ ಸರಿಯಾಗಿ ಸಂವಹನ ನಡೆಸಲು ಆಗ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ನನ್ನ ಮನೆ ಪಕ್ಕದಲ್ಲೇ ನಟ ದರ್ಶನ್‌ ಮನೆ ಇದೆ. ಹುಟ್ಟು ಹಬ್ಬಕ್ಕೆ ಬರುವ ಅಭಿಮಾನಿಗಳು ನಮ್ಮ ಮನೆಯ ಎದುರೂ ಜಮಾವಣೆಗೊಂಡಿರುತ್ತಾರೆ. ದರ್ಶನ್ ಜನ್ಮ ದಿನಕ್ಕೆ ಸಿಡಿಸಿದ ಸಿಡಿಮದ್ದಿನಿಂದ ನನ್ನ ಶ್ರವಣ ಶಕ್ತಿ ಕಳೆದುಕೊಂಡೆ ಎಂದು ತಮ್ಮ ಶ್ರವಣ ಶಕ್ತಿ ಕಳೆದುಕೊಂಡ ಬಗ್ಗೆ ಹಿರಿಯ ಸಾಹಿತಿ ಚನ್ನಬಸಪ್ಪ ಅವರು ಹೇಳಿಕೊಂಡಿದ್ದಾರೆ. 

click me!