ಐಹೊಳೆ ರಕ್ಷಣೆಗೆ ಕ್ರಮಕೈಗೊಳ್ಳಲು ಮೋದಿಗೆ ಬರೆದ ಪತ್ರಕ್ಕೆ ಸ್ಪಂದನೆ| ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಐತಿಹಾಸಿ ತಾಣ ಐಹೊಳೆ|ಸೂಳಿಬಾವಿ ಗ್ರಾಮದ ಪ್ರಕಾಶ ಕಡೂರ ಪ್ರಧಾನಿಗೆ ಪತ್ರ ಬರೆದ ಯುವಕ|ಪ್ರಕಾಶ ಕಡೂರಗೆ ಪ್ರಧಾನಿ ಕಚೇರಿಯಿಂದ ಸೂಕ್ತ ಸ್ಪಂದನೆ|
ಬಾಗಲಕೋಟೆ[ಮಾ.02]: ಜಿಲ್ಲೆಯ ಐತಿಹಾಸಿಕ ತಾಣವಾಗಿರುವ ಐಹೊಳೆ ಗ್ರಾಮದ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದ ಪ್ರಕಾಶ ಕಡೂರಗೆ ಪ್ರಧಾನಿ ಕಚೇರಿಯಿಂದ ಸೂಕ್ತ ಸ್ಪಂದನೆ ದೊರಕಿದೆ.
undefined
ಪ್ರವಾಹದಿಂದ ಮುಳುಗಡೆಯಾಗಿದ್ದ ಪಾರಂಪರಿಕ ತಾಣ ಐಹೊಳೆ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಎಂದು ಅ.10 ರಂದು ಪ್ರಧಾನಿಗೆ ಪತ್ರ ಬರೆದಿದ್ದ ಪ್ರಕಾಶ ಕಡೂರ ಅವರಿಗೆ ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂದಿದೆ. ಐಹೊಳೆಯಲ್ಲಿ ಚಾಲುಕ್ಯರ ಕಾಲದ 125ಕ್ಕೂ ಹೆಚ್ಚು ದೇಗುಲಗಳಿದ್ದೂ ಮಲಪ್ರಭಾ ನದಿಯಿಂದ ಪ್ರವಾಹ ಉಂಟಾದ ಸಂದರ್ಭದಲ್ಲಿ ಮುಳುಗಡೆಯಾಗಿದ್ದರಿಂದ ಗ್ರಾಮದ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕೆಂಬ ಮನವಿಯನ್ನು ಪತ್ರದಲ್ಲಿ ಮಾಡಲಾಗಿತ್ತು.
ಇದೀಗ ಪ್ರಧಾನಿ ಕಾರ್ಯಾಲಯದಿಂದ ಯುವಕನ ದೂರು ಗಮನಿಸಿ ಧಾರವಾಡದ ಪುರಾತತ್ವ ಇಲಾಖೆಯ ಅಧೀಕ್ಷಕರಿಗೆ ಐಹೊಳೆ ಸ್ಥಳಾಂತರದ ಕುರಿತು ಸಲಹೆಗಳನ್ನು ಪ್ರಧಾನಿ ಕಾರ್ಯಾಲಯ ನೀಡಿದೆ. ಹೀಗಾಗಿ ಪತ್ರ ಬರೆದ ಪ್ರಕಾಶ ಕಡೂರಗೆ ಪ್ರಧಾನಿ ಕಾರ್ಯಾಲಯದ ಸ್ಪಂದನೆ ಸಂತಸ ತಂದಿದೆ.